ಚಿಕ್ಕಬಳ್ಳಾಪುರ: ನಂದಿನಿ ಹಾಲನ್ನು ಗುಜರಾತ್‌ನ ಅಮುಲ್ ಹಾಲಿನ ಜತೆ ವಿಲೀನಗೊಳಿಸಲು ಇಲ್ಲಿನ ರೈತರ ಜೀವನ ಕಿತ್ತುಕೊಳ್ಳಲು ಬಿಜೆಪಿ ಸರ್ಕಾರ ಮಾಡುತ್ತಿರುವ ಹುನ್ನಾರವನ್ನು ಕೂಡಲೆ ನಿಲ್ಲಿಸಬೇಕು ಮತ್ತು ರೈತರ ಫಲವತ್ತಾದ ಉಳುಮೆ ಭೂಮಿಗಳನ್ನು ಈಶಾ ಫೌಂಡೇಶನ್‌ಗೆ ನೀಡುತ್ತಿರು ವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಮತ್ತು ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜ.12ರಂದು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿ ಭಟನೆ ನಡೆಸುತ್ತಿದ್ದೇವೆ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಅವಳಿ ಜಿಲ್ಲೆಯ ರೈತರ ಬದುಕಿಗೆ ಕನ್ನ ಹಾಕುವ ಕೆಲಸವನ್ನು ಮಾಡಲು ಹೊರಟಿದ್ದಾರೆ ನಂದಿನಿಯನ್ನು ಅಮೂಲಗೆ ವಿಲೀನ ಮಾಡುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು. ಅವಳಿ ಜಿಲ್ಲೆ ಸಹಿತ ರಾಜ್ಯದ ಹಾಲು ಉತ್ಪಾದಕರ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ವಿಲೀನ ಮಾಡಬಾರದು ಎಂದು ಆಗ್ರಹಿಸಿದರು.
ಕ್ಷೇತ್ರದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ರೈತರಿಗೆ ಸಕಾಲದಲ್ಲಿ ರಸಗೊಬರ ದೊರೆಯುತ್ತಿಲ್ಲ ಕೃಷಿ ಚಟುವಟಿಕೆಗಳನ್ನು ಮಾಡಲು ತೊಂದರೆ ಯಾಗುತ್ತಿದೆ. ಮತ್ತೂಂದಡೆ ರೈತರ ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಜೆಡಿಎಸ್ ನಿರಂತರವಾಗಿ ಹೋರಾಡುತ್ತಿದೆ. ಜತೆಗೆ ತಾಲೂಕಿನ ರೈತರು ಉಳಿಮೆ ಮಾಡುತ್ತಿರುವ ಭೂಮಿಯನ್ನು ಈಶಾ ಫೌಂಡೇಶನ್‌ಗೆ ಮಂಜೂರು ಮಾಡಲು ಹೊರಟಿದ್ದಾರೆ. ಅದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಮುಷ್ಟೂರು ರೈತರ ಭೂಮಿಗಳನ್ನು ಈಶ ಫೌಂಡೇಷನ್‌ಗೆ ರಸ್ತೆ ಮಾಡಲು ಕಾನೂನು ಬಾಹಿರವಾಗಿ ರೈತರ ಭೂಮಿ ಕಿತ್ತುಕೊಳ್ಳಲು ರೈತರ ಮೇಲೆ ತಹಶೀಲ್ದಾರ್‌ರವರು ಮಾಡುತ್ತಿರುವ ಬೆದರಿಕೆಗಳನ್ನು ನಿಲ್ಲಸಿ ಈ ಭೂಮಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮೂಲ ನಕ್ಷೆಯಂತೆ ಬಂದೋಬಸ್ತು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಗುವಳಿ ಚೀಟಿ-ನಿವೇಶನ ಹಕ್ಕುಪತ್ರ ವಿತರಿಸಿ: 2008-2013 ರಲ್ಲಿ ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಂಜೂರಾಗಿದ್ದ ಸಾಗುವಳಿ ಚೀಟಿಗಳನ್ನು ಮತ್ತು ನಿವೇಶನಗಳ ಹಕ್ಕುಪತ್ರ ಗಳನ್ನು ನೀಡುವುದು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿವೇಶನ ರೈತರಿಗೆ ಕೂಡಲೇ ನಿವೇಶನ ನೀಡಬೇಕು. ಭೂ ಪರಿವರ್ತನೆ ಆಗಿರುವ ಮತ್ತು ಆಗದೆ ಇರುವ ಭೂಮಿಗಳನ್ನು ಸರ್ಕಾರದ ಶುಲ್ಕವನ್ನು ಬಿಟ್ಟು ಲಕ್ಷಾಂತರ ರೂ.ಗಳನ್ನು ಕಾನೂನು ಬಾಹಿರವಾಗಿ ಹೆಚ್ಚುವರಿಯಾಗಿ ಪಡೆದು ತಿಂಗಳಾನುಗಟ್ಟಲೇ ಕಾಯಿಸಿ ನಗರಾವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಳಂಬ ಮಾಡುತ್ತಿರುವ ಭೂಮಿಗಳನ್ನು ತುರ್ತಾಗಿ ಮಾಡುವುದು, ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸರ್ಕಾರಿ ಮಹಿಳಾ ಕಾಲೇಜನ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಜಿಪಂ ಮಾಜಿ ಸದಸ್ಯ ಕೆ.ಸಿ. ರಾಜಕಾಂತ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿರಾಜು, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮುಕ್ತ ಮುನಿಯಪ್ಪ, ನಯಾಝ್, ಝಫುಲ್ಲಾ, ಮುಷ್ಟೂರು ಶಿವು, ಮುನಿರಾಜು, ಶ್ರೀಧರ್, ಜಗದೀಶ್, ವೆಂಕಟರೆಡ್ಡಿ, ಬಂಡಲು ಶ್ರೀನಿವಾಸ್, ಮಧು, ಮಂಜು,ನಂದಿ ಮೂರ್ತಿ, ಚೇತನ, ಕಿಟ್ಟಣ್ಣ ಉಪಸ್ಥಿತರಿದ್ದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಮತ್ತು ಬಿಜೆಪಿ ಸರ್ಕಾರದ ದುರಾಡಳಿತ ವಿರುದ್ಧ ಜ. 12 ರಂದು ಹಮ್ಮಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ನಗರದ ಶ್ರೀ ಸಿದ್ದೇಶ್ವರ ಸ್ವಾಮಿ ದೇಗುಲದಿಂದ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ.
-ಕೆ.ಎಂ.ಮುನೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷ
ಯಾವ ಪುರುಷಾರ್ಥಕ್ಕೆ ಚಿಕ್ಕಬಳ್ಳಾಪುರ ಉತ್ಸವ?: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮತ್ತೂಂದಡೆ ಕೊರೊನಾ ಸೋಂಕಿನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ ಹೀಗಿರು ವಾಗ ಸಾರ್ವಜನಿಕರು ಪಾವತಿಸಿರುವ ತೆರಿಗೆ ಹಣದಲ್ಲಿ ಯಾವ ಪುರುಷಾರ್ಥಕ್ಕೆ ಚಿಕ್ಕಬಳ್ಳಾಪುರ ಉತ್ಸವ ನಡೆಸಲು ಹೊರಟಿದ್ದಾರೆ. ಮಾಜಿ ಶಾಸಕರು ಕ್ಷೇತ್ರದಲ್ಲಿ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಟಾಳಿಕೆ ವಿರುದ್ಧ ಜನ ಸಿಡಿದೇಳುವ ಕಾಲ ಹತ್ತಿರಬಂದಿದೆ ಎಂದರು.