Advertisement

ಬಿಜೆಪಿಗೆ ಅವಕಾಶ ವಿರೋಧಿಸಿ ಪ್ರತಿಭಟನೆ

10:20 AM May 18, 2018 | Team Udayavani |

ಕಲಬುರಗಿ: ಸಂಖ್ಯಾಬಲದ ಮೇಲೆ ಬಹುಮತ ಹೊಂದಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ ಅವಕಾಶ ಕೊಡದೆ ಬಿಜೆಪಿಗೆ ಅವಕಾಶ ಕೊಟ್ಟಿರುವ ರಾಜ್ಯಪಾಲರ ನಿರ್ಣಯ ವಿರೋಧಿಸಿ ಜಾತ್ಯತೀತ
ಜನತಾದಳ ಕಾರ್ಯಕರ್ತರು ಗುರುವಾರ ನಗರದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯಪಾಲ ವಜೂಭಾಯ್‌ ವಾಲಾ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು,
ತದನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.

ಜೆಡಿಎಸ್‌ ಶಾಸಕರು ಸೇರಿದಂತೆ ಒಟ್ಟು 118 ಶಾಸಕರ ಸಹಿಯುಳ್ಳ ಪತ್ರವನ್ನು ರಾಜ್ಯಪಾಲರಿಗೆ ಕೊಟ್ಟು ಸರ್ಕಾರ ರಚನೆಗೆ ಅನುಮತಿ ಕೊಡಲು ಕೋರಿದ್ದರೂ ರಾಜ್ಯಪಾಲರು ಅವಕಾಶ ಕೊಡದೇ ಸಂಖ್ಯಾ ಬಲದಲ್ಲಿ ಕಡಿಮೆ
ಸಂಖ್ಯೆ ಇರುವವರಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ
ಎಂದು ಆಕ್ಷೇಪಿಸಿದರು. 

ಈ ಹಿಂದೆ ಗೋವಾ ಮತ್ತು ಮೇಘಾಲಯ ರಾಜ್ಯಗಳಲ್ಲಿ ದೊಡ್ಡ ಪಕ್ಷಗಳಿಗೆ ಅಧಿಕಾರ ರಚಿಸಲು ಆಹ್ವಾನಿಸದೆ ಸಂಖ್ಯಾ ಬಲದ ಮೇಲೆ ಹೆಚ್ಚು ಸಂಖ್ಯೆಗಳನ್ನು ಪಡೆದ ಪಕ್ಷಗಳನ್ನು ಆಹ್ವಾನಿಸಿದ ದೇಶದ ಇತರ ರಾಜ್ಯಗಳಲ್ಲಿನ ರೀತಿಯಲ್ಲಿ ಕರ್ನಾಟಕದಲ್ಲಿಯೂ ಸಂಖ್ಯಾಬಲದ ಮೇಲೆ ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ಅಂಬಲಗಿ, ಮಹಾಪ್ರಧಾನ ಕಾರ್ಯದರ್ಶಿ ಎಂ.ಬಿ. ಅಂಬಲಗಿ ಹಾಗೂ ಇತರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಮರಾವ ಸೂರನ್‌, ವಿಠ್ಠಲ ಜಾಧವ, ನಾಗಣ್ಣಾ ಶೇರಿಕಾರ, ಸುವರ್ಣಾ ಜವಳಿ, ಚಾಂದಪಾಶಾ ಜಮಾದಾರ, ಜಗದೀಶ ನಾಯಕ, ಚಂದು ಮೋರೆ, ಸುನೀಲಕುಮಾರ, ಶಿವು, ಹೂಪಸಿಂಗ ಚವ್ಹಾಣ, ವಿಜಯಕಾಂತ ಎಂ. ರಾಗಿ ಮುಂತಾದವರು ಪಾಲ್ಗೊಂಡಿದ್ದರು.

Advertisement

ರಾಜ್ಯಪಾಲರ ಪ್ರತಿಕೃತಿ ದಹಿಸಿ ಆಕ್ರೋಶ

ಕಲಬುರಗಿ: ಸಂಖ್ಯಾಬಲದ ಮೇಲೆ ಬಹುಮತ ಹೊಂದಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸರ್ಕಾರ ರಚನೆಗೆ ಅವಕಾಶ ನೀಡದೆ ಬಿಜೆಪಿಗೆ ಅವಕಾಶ ನೀಡಿರುವುದನ್ನು ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದ ಬಳಿ ರಾಜ್ಯಪಾಲ ವಜೂಭಾಯ್‌ ವಾಲಾ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಅಗತ್ಯ ಬಹುಮತದ ಬಗ್ಗೆ 118 ಶಾಸಕರ ಸಹಿಯುಳ್ಳ ಪತ್ರ ನೀಡಿದ್ದರೂ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿಲ್ಲ. 104 ಸದಸ್ಯ ಬಲ ಹೊಂದಿದವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಿರುವುದು ಸಂವಿಧಾನ ವಿರೋಧಿ ಕ್ರಮ ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಅಂಬಲಗಿ, ಶಾಮರಾವ ಸೂರನ್‌, ವಿಠಲ ಜಾಧವ ಹಾಗೂ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next