Advertisement

ಬಿಡಿಎ ವಿರುದ್ಧ ಪ್ರತಿಭಟನೆ

11:37 AM Jun 23, 2018 | Team Udayavani |

ಬೆಂಗಳೂರು: ಪೂರ್ವ ತಾಲ್ಲೂಕಿನ ಗುಂಜೂರು ಸಮೀಪ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯದ ಪ್ಲಾಟ್‌ಗಳನ್ನು 2015ರಲ್ಲಿಯೇ ಹಂಚಿಕೆ ಮಾಡಬೇಕಾಗಿತ್ತು ಅದರೆ ಅಧಿಕಾರಿಗಳ ವಿಳಂಭ ದೋರಣೆಯಿಂದ ಈವರೆಗೂ ಪ್ಲಾಟಳು ಹಂಚಿಕೆಯಾಗಿಲ್ಲ ಎಂದು ಬಿಡಿಎ ವಿರುದ್ದ ದಿಕ್ಕಾರ ಕೂಗಿ ನಮ್ಮ ಮನೆ ನಮ್ಮ ಹಕ್ಕು ಎಂಬ ಬಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

Advertisement

ಈ ವಸತಿ ಸಮುಚ್ಚಯದಲ್ಲಿ ಪ್ರತ್ಯೇಕವಾಗಿ ವಿದ್ಯುತ್‌ ಮೀಟರ್‌ ಅಳವಡಿಸಿಲ್ಲ. ಶುದ್ದ ಕುಡಿಯುವ ನೀರಿಲ್ಲ, ಎಸ್‌ಟಿಪಿ ಘಟಕ ಹಾಗೂ ಒಳಚರಂಡಿ ವ್ಯವಸ್ಥೆ ಸೇರಿದಂತೆ ವಾಸಿಸಲು ಯೋಗ್ಯ ರೀತಿಯಲ್ಲಿ ನಿರ್ಮಾಣ ಮಾಡಿಲ್ಲ ಎಂದು ಅಕ್ರೊಶ ವ್ಯಕ್ತಪಡಿಸಿದರು.

ಗುಂಜೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬಿಡಿಎ ಸಮುಚ್ಚಯ 1ಬಿಎಚ್‌ಕೆ-616 2ಬಿಎಚ್‌ಕೆ -168  3ಬಿಎಚ್‌ಕೆ 84 ಮಂದಿಗೆ ಮಂಜುರಾಗಿದೆ ಅದರೆ ಹಂಚಿಕೆಯಾಗಿಲ್ಲದೆ ಇರುವುದರಿಂದ ಸ್ವಂತ ಮನೆ ಹೊಂದುವುದು ಕನಸಾಗಿದೆ. ಅಲ್ಲದೆ ಬಾಡಿಗೆ ಕಟ್ಟುವುದು ತಪ್ಪಿಲ್ಲ ಎಂದು ನಾರಾಯಣಶೆಟ್ಟಿ ಹೇಳಿದರು.
 
ಪತಿಯ ನಿವೃತ್ತಿಯಿಂದ ಬಂದ ಸಂಪೂರ್ಣ ಹಣವನ್ನು ಬಿಡಿಎ ಪ್ಲಾಟ್‌ಗಾಗಿ ಕೊಟ್ಟಿದ್ದೇನೆ ಪತಿ ಸಾವಿನ ನಂತರ ನನ್ನ ಮಕ್ಕಳ ಮನೆಯಿಂದ ಹೊರ ಹಾಕಿದ್ದಾರೆ  ಮನೆಯಿಲ್ಲದೆ ಸ್ನೇಹಿತೆ ಮನೆಯಲ್ಲಿ ಅಶ್ರಯ ಪಡೆದಿದ್ದೇನೆ ನಾಲ್ಕು ವರ್ಷಗಳಿಂದ ಪ್ಲಾಟ್‌ ಹಂಚಿಕೆ ವಿಳಂಭ ಮಾಡುತ್ತಿದ್ದಾರೆ ಎಂದು ಪ್ಲಾಟ್‌ ಕೊಂಡವವರು ವೃದ್ಧೆ ರಜಿನಿ ಅಳಲು ತೋಡಿಕೊಂಡರು.   

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪಾಲಿಕೆ ಸದಸ್ಯೆ ಪುಷ್ಪ ಮಂಜುನಾಥ್‌ ಬಿಡಿಎ ಅಧಿಕಾರಿಗಳ ವಿಳಂಭ ನೀತಿಯನ್ನು ಖಂಡಿಸಿದರು ಅದಷ್ಟೂ ಬೇಗ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅರ್ಹ ಪಲಾನುಭವಿಗಳಿಗೆ ವಿತರಣೆ ಮಾಡದೆ ಇದ್ದರೆ ಬಿಡಿಎ ಮುಖ್ಯ ಕಚೇರಿಗೆ ಮುತ್ತಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಿಡಿಎ ಅಧಿಕಾರಿ ಗೌಡಯ್ಯನನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡು ತಮ್ಮ ಆಕ್ರೋಶವನ್ನು ಹೊರಹಾಕಿದರು. ವಸತಿ ಸಮುಚ್ಚಯದ ನಿರ್ಮಾಣ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರ ಕಾರಣಾಂತರಗಳಿಂದ ಕಾಮಗಾರಿಯನ್ನು ಅರ್ಧದಲ್ಲಿ ನಿಲ್ಲಿಸಿದರಿಂದ ಪ್ಲಾಟ್‌ ಹಂಚಿಕೆ ವಿಳಂಭವಾಗಿದೆ. ಜುಲೆ„ 25 ರೊಳಗೆ ಕಾಮಗಾರಿಗಳನ್ನು ಮುಗಿಸಿ ಸಮುಚ್ಚಯದ ಪ್ಲಾಟ್‌ಗಳನ್ನು ಪಲಾನುಭವಿಗಳಿಗೆ ಹಂಚಲಾಗುವುದು ಎಂದು ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next