Advertisement

ರೈತರಿಗೆ ಮಾರಕವಾದ ‌ಕಾಯ್ದೆಗಳು

02:27 PM Sep 29, 2020 | Suhan S |

ಗುಬ್ಬಿ: ಬಂಡವಾಳಶಾಹಿ ಕಂಪನಿಯ ಉದ್ಧಾರಕ್ಕೆ ಎಪಿಎಂಸಿ ನಾಶ ಮಾಡುವ ಜತೆಗೆ ಗ್ರಾಹಕರಿಂದಲೂ ಲೂಟಿ ಮಾ ಡಲು ರಚಿತವಾದ ಎರಡುಕಾಯ್ದೆ ತಿದ್ದುಪಡಿ ಬಿಜೆಪಿಯ ಪೂರ್ವ ಷಡ್ಯಂತ್ರ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎನ್‌. ವೆಂಕಟೇಗೌಡ ನೇರ ಆರೋಪ ಮಾಡಿದರು.

Advertisement

ಪಟ್ಟಣದ ಬಸ್‌ ನಿಲ್ದಾಣ ಬಳಿ ಸೋಮವಾರ ಸಮನ್ವಯ ಸಮಿತಿ ನಡೆಸಿದ ಕೆಲ ಕಾಲ ರಸ್ತೆ ತಡೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗಷ್ಟೇಜಮೀನು ಮಾರಾಟದಕಾನೂನು ಸಡಿಲಗೊಳಿಸಿ ಹಣವಂತರ ಬಳಿ ಇರುವ ಕಪ್ಪು ಹಣವನ್ನು ಬಳಸಿಕೊಂಡುಜಮೀನು ಖರೀದಿಗೆ ಅವಕಾಶ ಮಾಡಿ ಕೊಟ್ಟ ರಾಜಕಾರಣಿಗಳು ತಮ್ಮ ಬಳಿಇರುವ ಭ್ರಷ್ಟ ಹಣವನ್ನು ಜಮೀನುಕೊಳ್ಳಲು ಬಳಸಲಿದ್ದಾರೆ ಎಂದು ಆರೋಪಿಸಿದರು. ಕಾರ್ಪೋರೆಟರ್‌ ಕಂಪನಿಗಳಿಗೆ ಅವಕಾಶ ಕೊಡುವ ಜತೆಗೆ ತಮ್ಮ ಷೇರುದಾರ ವ್ಯವಹಾರಕ್ಕೆ ಮುಂದಾಗಿದ್ದಾರೆ. ರೈತರು ಹಾಗೂ ಸಾರ್ವಜನಿಕರಿಗೂ ಈ ಕಾಯ್ದೆ ಪೆಟ್ಟು ನೀಡಲಿದೆ ಎಂದರು.

ಈ ಕಾಯ್ದೆ ತಿದ್ದುಪಡಿಗೆ ಬಲಿಯಾಗುವ ಸಣ್ಣ ಮತ್ತು ಮಧ್ಯಮ ರೈತರುತಮ್ಮ ಜಮೀನು ಮಾರಾಟ ಮಾಡಿಕೊಂಡು ಪರ್ಯಾಯ ಉದ್ಯೋಗ ತಿಳಿಯದೆ ಪರದಾಡುವಂತಾಗುತ್ತದೆ. ಜಮೀನುಕೊಳ್ಳುವ ಬಂಡವಾಳಶಾಹಿ ಗಳ ಕೈ ಸೇರಿ ಮನಬಂದಂತೆ ವರ್ತಿಸಿ ಮಾರುಕಟ್ಟೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಈ ಕೆಲಸಕ್ಕೆ ಎಪಿಎಂಸಿ ಕಾಯ್ದೆಕೂಡ ತಿದ್ದುಪಡಿ ಮಾಡುತ್ತಿದ್ದಾರೆ ಎಂದು ದೂರಿದರು.

ಹಸಿರುಸೇನೆ ಅಧ್ಯಕ್ಷ ಸಿ.ಟಿ.ಕುಮಾರ್‌ ಮಾತನಾಡಿ, ರೈತ ಕುಟುಂಬಕ್ಕೆ ಮೊದಲು 56 ಎಕರೆ ಸಿಮೀತ ಪ್ರದೇಶ ಎನ್ನು ವಂತಿದ್ದ ಕಾನೂನು ತಿದ್ದುಪಡಿ ಮಾಡಿ ನಾಲ್ವರಕುಟುಂಬಕ್ಕೆ105 ಎಕರೆ,5 ಕ್ಕಿಂತ ಕುಟುಂಬಕ್ಕೆ 216 ಎಕರೆ ಪ್ರದೇಶಕ್ಕೆ ಅನುವು ಮಾಡಿರುವ ಜತೆಗೆ ವಿದ್ಯುತ್‌ ಕಾಯ್ದೆಯನ್ನು ತಿದ್ದುಪಡಿ ಮಾಡಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಮೀಟರ್‌ ಅಳವಡಿಕೆ ಮಾಡಲಿದ್ದಾರೆ ಬಡವರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಎಲ್ಲವನ್ನೂ ಮೀಟರ್‌ ಅಳವ ಡಿಸಿ ಹಣ ವಸೂಲಿ ಮಾಡಲಿದ್ದಾರೆ ಎಂದು ಆರೋಪಿಸಿದರು.

ಪಟ್ಟಣದಲ್ಲಿ ಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಜಮಾಯಿಸಿದ ರೈ ತಸಂಘದ ಸದಸ್ಯರು, ಅಂಗನವಾಡಿ ನೌಕರರು, ಟೆಂಪೋ ಚಾಲಕರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ಸ ರ್ಕಲ್‌ ತಲುಪಿ ನಂತರ ಬಸ್‌ ನಿಲ್ದಾಣದ ಬಳಿ ಮಾನವ ಸರಪಳಿ ಪ್ರತಿಭಟನಾ ಸಭೆ ನಡೆಸಿದರು.

Advertisement

ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ನರ ಸಿಂಹಯ್ಯ, ಜೆಡಿಎಸ್‌ ಅಧ್ಯಕ್ಷ ಗುರು ರೇಣುಕಾರಾಧ್ಯ, ಶಿವಕುಮಾರ್‌, ಮಂಜುನಾಥ್‌, ಗುರುಚನ್ನಬಸವಯ್ಯ, ಲೋಕೇಶ್‌, ಅಂಗನವಾಡಿ ನೌಕರರ ಸಂಘದ ಸರೋಜಮ್ಮ, ವಿನಯ್‌ ಇತರರು ಇದ್ದರು.

 

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

Advertisement

Udayavani is now on Telegram. Click here to join our channel and stay updated with the latest news.

Next