ಚಾಮರಾಜನಗರ: ಜಿಲ್ಲಾ ಸಮಿತಿಯ ಏಕಪಕ್ಷೀಯನಿರ್ಧಾರವನ್ನು ಖಂಡಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಬಿಜೆಪಿ ಕಚೇರಿ ಮುಂದೆ ಬುಧವಾರ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿ ಅರಕಲವಾಡಿ ಮಹೇಶ್,ಬಿಜೆಪಿ ಜಿಲ್ಲಾ ಸಮಿತಿಯಲ್ಲಿರುವ ಪ್ರಧಾನ ಕಾರ್ಯದರ್ಶಿ ನಾರಾಯಣಪ್ರಸಾದ್ ಸೇರಿದಂತೆ ಕೆಲವರುತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿಕೊಡುತ್ತಿದ್ದಾರೆ.
ಗ್ರಾಮಾಂತರ ಅಧ್ಯಕ್ಷರ ಜಿ.ಪ್ರಶಾಂತ್ ಅವರನ್ನುನೋಟಿಸ್ ನೀಡದೆ ಏಕಾಏಕಿ ಕೋವಿಡ್ ಸಂದರ್ಭದಲ್ಲಿತೆಗೆದು ಹಾಕಿ ಆ ಜಾಗಕ್ಕೆ ಪಕ್ಷದ ಯಾವುದೇ ಸಮಿತಿಯಲ್ಲಿಪದಾಧಿಕಾರಿ ಅಲ್ಲದ ವ್ಯಕ್ತಿಯೊಬ್ಬರನ್ನು ಖಾಸಗಿ ರೆಸಾಟ್ìನಲ್ಲಿ ನೇಮಕ ಮಾಡಿ ಆದೇಶ ಪ್ರತಿಯನ್ನುನೀಡಿರುವುದು ಯಾವ ನ್ಯಾಯ?, ನಿಷ್ಠಾವಂತಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದರು.ತಾಪಂ ಮಾಜಿ ಉಪಾಧ್ಯಕ್ಷ ಪಿ.ಎನ್. ದಯಾನಿಧಿಮಾತನಾಡಿ, ಜಿಪಂ, ತಾಪಂ, ವಿಧಾನ ಸಭೆಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂದುಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದ್ದೆವು.
ಇದನ್ನುಸಹಿಸಿದ ಜಿಲ್ಲಾ ಸಮಿತಿಯ ಕೆಲವರು ಕಾಂಗ್ರೆಸ್ ಪಕ್ಷದಹಾಲಿ ಎಂಎಲ್‌ಎ ಪರ ವಕಾಲತ್ತು ವಹಿಸುವ ಜೊತೆಗೆಒಳ ಒಪ್ಪಂದ ಮಾಡಿಕೊಂಡು ಸಂಘಟನೆಗೆ ತೊಡಕುಉಂಟು ಮಾಡುತ್ತಿದ್ದಾರೆ ಎಂದರು.ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ವೀರಶೈವ ಮುಖಂಡರನ್ನು ಜಿಲ್ಲಾ ಸಮಿತಿಯ ಕೆಲವರು ಉದ್ದೇಶಪೂರ್ವವಾಗಿ ಕಡೆಗಣಿಸಲಾಗುತ್ತಿದ್ದಾರೆ. ಇದು ಮುಂದುವರಿದರೆ ಕಾರ್ಯಕರ್ತರು ಧರಣಿ ಮಾಡಿ, ಬಿಜೆಪಿ ಕಚೇರಿಗೆ ಬೀಗಜಡಿಯಲಿದ್ದಾರೆ ಎಂದು ಎಚ್ಚರಿಸಿದರು. ಮಂಡಲಅಧ್ಯಕ್ಷರ ವಯೋಮಿತಿ 46ರೊಳಗಿರ ಬೇಕೆಂಬ ನಿಯಮವಿದೆ.
ಇದನ್ನು ಗಾಳಿಗೆ ತೂರಿ 53 ವರ್ಷದವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಅಕ್ರಮವಾಗಿದೆ ಎಂದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯಬಿಸಲವಾಡಿ ಬಸವರಾಜು, ಕುಮಾರ್, ಗ್ರಾಪಂ ಮಾಜಿಅಧ್ಯಕ್ಷ ಅಂಕನಶೆಟ್ಟಿಪುರ ಸೋಮಣ್ಣ, ಚೆನ್ನಂಜಪ್ಪ, ಜಿಲ್ಲಾರೈತ ಮೋರ್ಚಾ ಉಪಾಧ್ಯಕ್ಷ ಶಮಿತ್‌ಕುಮಾರ್,ಉಮೇಶ್, ಶಕ್ತಿ ಕೇಂದ್ರ ಅಧ್ಯಕ್ಷ ಸುಧಾ ಶಂಕರ್, ರವಿ,ಜಿಲ್ಲಾ ಕಾರ್ಯದರ್ಶಿ ರವಿ, ಪೃಥ್ವಿರಾಜ್, ಅಮಚವಾಡಿಗ್ರಾ.ಪಂ. ಅಧ್ಯಕ್ಷ ಮಹೇಂದ್ರ, ವೆಂಕಟಯ್ಯನಛತ್ರಗ್ರಾ.ಪಂ. ಅಧ್ಯಕ್ಷ ಉಮೇಶ್, ಹೆಗ್ಗೊàಠಾರ ಅಧ್ಯಕ್ಷಪ್ರಕಾಶ್, ಅಟ್ಟುಗುಳಿಪುರ ಗ್ರಾಪಂ ಸದಸ್ಯರಾದ ಮೂರ್ತಿ,ಮಂಜು, ಸಿದ್ದರಾಜು, ಬಸವರಾಜು, ಸ್ವಾಮಿ,ಗುರುರಾಜ್, ಪರಶಿವಮೂರ್ತಿ, ದೊಡ್ಡಮೋಳೆರಂಗನಾಥ್, ಬಂಡಿಗೆರೆ ರವಿ, ಹರದನಹಳ್ಳಿ ಚಂದ್ರು,ಕೃಷ್ಣ, ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.