Advertisement

ಸುಗ್ರೀವಾಜ್ಞೆ ರೈತರು-ಕಾರ್ಮಿಕರಿಗೆ ಮಾರಕ

06:17 PM Sep 20, 2020 | Suhan S |

ಜಗಳೂರು: ಭೂಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಭಾರತ ಕಮೂನಿಸ್ಟ್‌ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್‌ ಧನಪಾಲ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಸೆಣಸಾಡುವ ಸಮಯದಲ್ಲಿ ಸರಕಾರ ಜಾರಿಗೊಳಿಸಿರುವ ಕರ್ನಾಟಕ ಭೂ ಸುಧಾರಣಾ 2020, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ, ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳು ರೈತ ಹಾಗೂ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಇಡೀ ಕೃಷಿ ಕ್ಷೇತ್ರವನ್ನು ಕಾರ್ಪೋರೆಟ್‌ ಕಂಪನಿಗಳ ಸುಪ ರ್ದಿಗೆ ವಹಿಸಲು ಸರ್ಕಾರಹುನ್ನಾರ ನಡೆಸಿದೆ. ಕೂಡಲೇ ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕಾರಕ್ಕೆ ಬರುತ್ತಿರುವ ಈ ಮೂರು ಸುಗ್ರೀವಾಜ್ಞೆಗಳನ್ನು ಶಾಸನವಾಗದಂತೆ ನೋಡಿಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ: ಇದೇ ವೇಳೆ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವಕ್ವಾರಿ ಕಾರ್ಮಿಕರ ಸಂಘದ ವತಿಯಿಂದ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಕಟ್ಟಡ ಕಾರ್ಮಿಕರು ಮಂಡಳಿಗೆ ಸಹಾಯಧನ ಕೋರಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ ಪ್ರೋತ್ಸಾಹಧನ, ಮದುವೆ, ವೈದ್ಯಕೀಯ, ವಯೋವೃದ್ಧರಿಗೆ ಪಿಂಚಣಿ, ವಸತಿ ಸೇರಿದಂತೆ ಅಕಾಲಿಕ ಮರಣ ಹೊಂದಿದರೆ ಅಂತಹವರಿಗೆ ಸಹಾಯಧನ ನೀಡುತ್ತಿಲ್ಲ. ಕಾರ್ಮಿಕ ಇಲಾಖೆ ಅಧಿ ಕಾರಿಗಳು ಸರಕಾರದ ನಿಯಮವನ್ನು ಗಾಳಿಗೆ ತೂರಿ ನಿರ್ಲಕ್ಷ್ಯ ವಹಿಸಿದ್ದಾರೆ. ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಭಾರತ ಕಮ್ಯೂನಿಸ್ಟ್‌ ಪಕ್ಷದ ಕಾರ್ಯದರ್ಶಿ ಮಹಮ್ಮದ್‌ ಭಾಷಾ, ಸಹ ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಹಾಲಮ್ಮ, ಮಾದಿಹಳ್ಳಿ ಮಂಜಪ್ಪ, ಕರಿಬಸಪ್ಪ, ಶಾಂತವೀರಮ್ಮ, ಚನ್ನಮ್ಮ, ಶಶಿಕಲಾ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೀರಣ್ಣ, ಯುವರಾಜ್‌, ಮಧು, ರಮೇಶ್‌, ಖಾದರ್‌ ಷರೀಫ್‌, ಮಹಮ್ಮದ್‌ ಖಯೀಂ, ತಿಪ್ಪೇಸ್ವಾಮಿ, ಮಹಮ್ಮದ್‌ ಅಲಿ, ಬಸವರಾಜ್‌, ನಾಗರಾಜ್‌, ಸುರೇಶ್‌, ನೌಷಾದ್‌, ಚೇತನ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next