Advertisement
ಮಕ್ಕಳಾದ ರಶ್ಮಿತಾ (14), ಉದಯ (12) ಮತ್ತು ದಕ್ಷಾ (6) ಮೃತಪಟ್ಟವರು.
ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್ ಎಸಿಪಿ ಮಹೇಶ್ ಕುಮಾರ್, ಮೂಲ್ಕಿ ಠಾಣಾಧಿಕಾರಿ ಕುಸುಮಾಧರ್ ಭೇಟಿ ನೀಡಿದ್ದಾರೆ.
Related Articles
Advertisement
ಮಾನಸಿಕ ಖನ್ನತೆಹಿತೇಶ್ ಸ್ವಲ್ಪ ಸಮಯ ಎಂಆರ್‌ಪಿಎಲ್‌ನ ಕ್ಯಾಂಟಿನ್‌ನಲ್ಲಿ ಕೆಲಸ ಮಾಡಿದ್ದು ಕಳೆದ 6 ತಿಂಗಳಿನಿಂದ ಮನೆಯ ಸಮೀಪ ಸೀಯಾಳ ಹಾಗೂ ಹೂವಿನ ವ್ಯಾಪಾರ ಮಾಡುತ್ತಿದ್ದ. ಮನೆಯ ಪಕ್ಕದಲ್ಲಿ ಅಂಗಡಿ ಕೋಣೆಯನ್ನು ಕಟ್ಟಿಸಿದ್ದ. ಮಳೆಗಾಲ ಆರಂಭವಾದ ಬಳಿಕ ಸೀಯಾಳ ವ್ಯಾಪಾರವನ್ನು ನಿಲ್ಲಿಸಿದ್ದನು. ಕೆಲವು ದಿನಗಳಿಂದ ಮಾನಸಿಕವಾಗಿ ಕ್ಷೀಣಿಸಿದಂತೆ ಕಾಣಿಸುತ್ತಿದ್ದು, ಹೆಚ್ಚಿನ ಸಮಯ ಮನೆಯಲ್ಲೇ ಮೌನವಾಗಿ ಇರುತ್ತಿದ್ದ ಎಂದು ಪಕ್ಕದ ಮನೆಯವರು ತಿಳಿಸಿದ್ದಾರೆ. ಹಗ್ಗದ ಮೂಲಕ ದಂಪತಿ ರಕ್ಷಣೆ
ಪತ್ನಿ ಲಕ್ಷ್ಮೀ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೂಗಿದಾಗ ರಸ್ತೆಬದಿಯಲ್ಲಿ ಹೂ ಮಾರುತ್ತಿದ್ದ ನಾಸೀರ್ ಹಾಗೂ ಮತ್ತಿಬ್ಬರು ಬಾವಿಯ ಬಳಿ ಬಂದು ಹಿತೇಶ್ ಮತ್ತು ಲಕ್ಷ್ಮೀ ಅವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ. ಕೂಡಲೇ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಹಾಯದಿಂದ ಮೂಲ್ಕಿ ಪೊಲೀಸರು ಮೂವರೂ ಮಕ್ಕಳನ್ನು ಮೇಲೆಕ್ಕೆತ್ತಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಮಕ್ಕಳು ಮೃತಪಟ್ಟಿದ್ದಾರೆ.
ಹಿತೇಶ್ ಶೆಟ್ಟಿಗಾರ್ ಅರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ತಾಯಿಯ ಆರ್ತನಾದ
ಮೂವರೂ ಮಕ್ಕಳನ್ನು ಕಳೆದುಕೊಂಡ ಹೆತ್ತಬ್ಬೆ ಕಂಗಾಲಾಗಿದ್ದಾಳೆ. ನನ್ನ ಮಕ್ಕಳನ್ನು ತಂದು ಕೊಡಿ. ಬಾವಿಯಲ್ಲಿ ಇದ್ದ ನನ್ನ ಮಗ, ಮಗಳು ಎಲ್ಲಿ ಹೋದರು. ಅವರನ್ನು ನೋಡಬೇಕು. ನನಗೆ ಮಕ್ಕಳು ಬೇಕು ಎನುತ್ತ ಕಣ್ಣೀರು ಹಾಕುತ್ತಿದ್ದಾರೆ. ಮನೆಯೊಳಗಿನ ದೇವರ ಚಿತ್ರದ ಮುಂದೆಯೂ ಬಿಕ್ಕಿ ಬಿಕ್ಕಿ ಅಳುತ್ತ ಮಕ್ಕಳನ್ನು ನೆನೆದು ರೋದಿಸುತ್ತಿರುವುದನ್ನು ಕಂಡು ಅಲ್ಲಿ ಸೇರಿದವರ ಕರುಳನ್ನೂ ಚುರುಕ್ ಅನ್ನಿಸುವಂತಿತ್ತು.