Advertisement

ಕಾಲು ಕಳೆದು ಕೊಂಡ ಕಡಲಾಮೆಯ ರಕ್ಷಣೆ

06:25 AM Jul 10, 2018 | |

ಕೋಟ: ಎಡಗಾಲು ಕಳೆದುಕೊಂಡು ಈಜಲು ಅಸಾಹಯಕವಾಗಿ ದಡ ಸೇರಿದ್ದ  ಕಡಲಾಮೆಯನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆಯವರು ಕಾರ್ಯಚರಣೆ  ನಡೆಸಿ ರಕ್ಷಿಸಿದ ಘಟನೆ ಸೋಮವಾರ ಕೋಟ ಪಡುಕರೆಯಲ್ಲಿ ನಡೆಯಿತು.

Advertisement

ಆಮೆ ಸಮುದ್ರದಲ್ಲಿ ಈಜಲು ಅಸಾಧ್ಯವಾಗಿ ಬಸವಳಿದು ದಡ ತಲುಪಿದ್ದು ಸ್ಥಳೀಯ ಮೀನುಗಾರರು ಇದನ್ನು  ನೋಡಿ ಸ್ಥಳೀಯ ಗೀತಾನಂದ ಫೌಂಡೇಶನ್‌ ಸಮಾಜಸೇವಾ ವಿಭಾಗದ ರವಿಕಿರಣ್‌ ಹಾಗೂ ಸಾಸ್ತಾನ ಮಿತ್ರರು ಸಂಘಟನೆಯ ವಿನಯ್‌ಚಂದ್ರ ಮೂಲಕ ಅರಣ್ಯ ಇಲಾಖೆಗೆ ವಿಷಯ ತಿಳಿಸಿ ರಕ್ಷಣೆ ನಡೆಸಿದ್ದಾರೆ.

ಆಮೆಯ ಒಂದು ಕಾಲು ತುಂಡಾಗಿರುವುದರಿಂದ  ಸಮುದ್ರದಲ್ಲಿ ಈಜಲು ಕಷ್ಟ. ಆದರೆ  ಹಿನ್ನೀರಿನಲ್ಲಿ ಬದುಕಲು ಸಾಧ್ಯವಿದೆ ಎನ್ನುವ ನಿಟ್ಟಿನಲ್ಲಿ ಇದನ್ನು ಬ್ರಹ್ಮಾವರದ ಹಂದಾಡಿ ಹೊಳೆಗೆ ಬಿಡಲಾಯಿತು.

ಅರಣ್ಯ ಇಲಾಖೆಯ ಅಧಿಕಾರಿಗಳಾದ ಜೀವನ್‌ದಾಸ್‌ ಶೆಟ್ಟಿ, ಶಿವಪ್ಪ ನಾಯ್ಕ, ಪರಷುರಾಮ್‌ ಸ್ಥಳೀಯರಾದ ಪ್ರದೀಪ್‌, ಮಂಜುನಾಥ, ಎಫ್‌.ಎಸ್‌.ಐ.ಎಲ್‌. ಸಾಮಾಜಿಕ ಸೇವಾ ಸಂಘಟನೆಯ ಸದಸ್ಯರು  ಕಾರ್ಯಚರಣೆಯಲ್ಲಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next