ಸೇಡಂ: ಮಾನವ ಹಕ್ಕು ರಕ್ಷಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಉಡುಪಿ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಡಾ| ರವೀಂದ್ರನಾಥ ಶಾನಭಾಗ ಹೇಳಿದರು.
ಪಟ್ಟಣದ ಜೆ.ಎನ್.ಆರ್. ಲಡ್ಡಾ ಕಾನೂನು ಮಹಾವಿದ್ಯಾಲಯದಲ್ಲಿ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಮಾನವ ಹಕ್ಕುಗಳ ಶಿಕ್ಷಣ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿನಿತ್ಯ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಾ ಬಂದಿದೆ. ಆದರೆ ಈ ಕುರಿತು ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಈ ರೀತಿಯ ಬೆಳವಣಿಗೆ ತಡೆಯಬೇಕಾದರೆ ಎಲ್ಲರಿಗೂ ಹಕ್ಕುಗಳ ಅರಿವಾಗಬೇಕು. ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಅನೇಕ ಕಾನೂನುಗಳಿದ್ದು, ಅವುಗಳ ಮುಖಾಂತರ ಜನರ ಹಕ್ಕುಗಳು ರಕ್ಷಿಸಬೇಕು ಎಂದರು.
ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಗೌರವಾಧ್ಯಕ್ಷ ಡಾ| ನಾಗರೆಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಶರಣಗೌಡ ಪಾಟೀಲ ಸ್ವಾಗತಿಸಿದರು. ಪ್ರೊ| ಶೋಭಾದೇವಿ ಚೆಕ್ಕಿ ಪ್ರಾರ್ಥಿಸಿದರು. ಆರತಿ ಕಡಗಂಚಿ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಆಡಳಿತಾಧಿಕಾರಿ ಶಿವಯ್ಯ ಮಠಪತಿ, ಸುವರ್ಣ ವಝೆ, ವಿಜಯಶಂಕರ ಹೊಸಪೇಟ್, ಪ್ರವೀಣ ಕುಲಕರ್ಣಿ, ಸುಧಿಧೀಂದ್ರ ಕುಲಕರ್ಣಿ, ಶ್ರೀನಿವಾಸರೆಡ್ಡಿ, ಭೈರವನಾಥ ನಾಗೇಶ್ವರಿ, ಬಸವಂತರಾಯ, ಬಡಿಗೇರ ಚನ್ನಪ್ಪ ಹಾಜರಿದ್ದರು.