Advertisement

Ullal: ಬಾವಿಗೆ ಬಿದ್ದ ಹೋರಿ; ಅಗ್ನಿಶಾಮಕ ದಳದ ಸಿಬಂದಿಯಿಂದ ರಕ್ಷಣೆ

08:18 PM Oct 27, 2024 | Team Udayavani |

ಉಳ್ಳಾಲ: ಆವರಣ ಗೋಡೆಯಿಲ್ಲದೆ ಪಾಳು ಬಿದ್ದಿರುವ ಸರಕಾರಿ ಬಾವಿಯೊಂದಕ್ಕೆ ಹೋರಿಯೊಂದು ಬಿದ್ದು ನೀರಲ್ಲಿ ಒದ್ದಾಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬಂದಿ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೋರಿಯನ್ನ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರುಪಲ್ಲ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

Advertisement

ಪಿಲಾರು ಪಲ್ಲದಲ್ಲಿರುವ ಸರಕಾರದ ತೆರೆದ ಬಾವಿಗೆ ಹೋರಿ ಬಿದ್ದು ಒದ್ದಾಡುತ್ತಿದ್ದುದನ್ನು ಕಂಡ ಸ್ಥಳೀಯ ಸಮಾಜ ಸೇವಕ ಉದಯ ಗಟ್ಟಿ ಪಿಲಾರು ಅವರು ತತ್‌ಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಘಟನ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬಂದಿ ಸತತ ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿ ಹೋರಿಯನ್ನ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ತೆರೆದ ಪಾಳುಬಿದ್ದ ಬಾವಿ ಇದಾಗಿದ್ದು, ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಮುಂದಕ್ಕೂ ಈ ಬಾವಿಯಿಂದ ಅಪಾಯ ಸಂಭವಿಸುವ ಸಾಧ್ಯತೆಗಳಿದ್ದು, ತತ್‌ಕ್ಷಣ ತಡೆಗೋಡೆಯನ್ನು ಇಲ್ಲಿ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next