Advertisement

Rajasthan Elections: ಯುಪಿಎ ವಿರುದ್ಧ ಜೆ.ಪಿ.ನಡ್ಡಾ ವಾಗ್ಧಾಳಿ

09:51 PM Jul 16, 2023 | Team Udayavani |

ಜೈಪುರ:“ಕಾಂಗ್ರೆಸ್‌ ನೇತೃತ್ವದ ಯುಪಿಎ ಎಂದರೆ “ಉತ್ಪಿದಾನ್‌(ದಮನ), ಪಕ್ಷಪಾತ್‌(ಪಕ್ಷಪಾತ) ಮತ್ತು ಅತ್ಯಾಚಾರ್‌(ದೌರ್ಜನ್ಯ)’ ಎಂದು ಅರ್ಥ. ಇಂಥ ಪಕ್ಷಕ್ಕೆ ಒಂದು ನಿಮಿಷವೂ ರಾಜಸ್ಥಾನದಲ್ಲಿ ಅಧಿಕಾರದಲ್ಲಿರಲು ನೈತಿಕತೆ ಇಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

Advertisement

ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಅಧಿಕೃತ ಪ್ರಚಾರ ಅಭಿಯಾನ “ನಹೀ ಸಹೇಗಾ ರಾಜಸ್ಥಾನ್‌’ಗೆ ಚಾಲನೆ ಕೊಟ್ಟು ಭಾನುವಾರ ಮಾತನಾಡಿ, ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು.

ಜತೆಗೆ, ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು, ಉದಯಪುರದಲ್ಲಿ ಕನ್ಹಯ್ಯಲಾಲ್‌ ಹತ್ಯೆ, ಕೋಮುಗಲಭೆ ಸೇರಿದಂತೆ ಇತರೆ ವಿಚಾರಗಳನ್ನು ಒಳಗೊಂಡ ಥೀಮ್‌ ವಿಡಿಯೋವನ್ನೂ ಬಿಡುಗಡೆ ಮಾಡಿದರು.

ಜತೆಗೆ, ಪ್ರತಿಪಕ್ಷಗಳು ತಮ್ಮ ವಂಶಾಡಳಿತ ರಾಜಕಾರಣವನ್ನು ರಕ್ಷಿಸಿಕೊಳ್ಳುವ ಸಲುವಾಗಿ “ಮೈತ್ರಿ’ ಮಾಡಿಕೊಳ್ಳಲು ಮುಂದಾಗಿವೆ. ಅದು “ಪೇಟ್ರಿಯಾಟಿಕ್‌ ಡೆಮಾಕ್ರಾಟಿಕ್‌ ಅಲಯನ್ಸ್‌'(ದೇಶಭಕ್ತ ಪ್ರಜಾಸತ್ತಾತ್ಮಕ ಮೈತ್ರಿ) ಅಲ್ಲ, ಬದಲಿಗೆ “ಪ್ರೊಟೆಕ್ಷನ್‌ ಆಫ್ ಡೈನಾಸ್ಟೀಸ್‌ ಅಲಯನ್ಸ್‌'(ವಂಶಾಡಳಿತ ರಕ್ಷಣೆಯ ಮೈತ್ರಿ) ಎಂದೂ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next