Advertisement

ವಿರುಪಾಪುರ ಗಡ್ಡೆಯಿಂದ 550 ಪ್ರವಾಸಿಗರ ರಕ್ಷಣೆ

11:30 PM Aug 13, 2019 | Lakshmi GovindaRaj |

ಕೊಪ್ಪಳ: ತುಂಗಭದ್ರಾ ನೀರಿನ ಪ್ರವಾಹದಿಂದ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸಿಲುಕಿದ್ದ ವಿದೇಶಿಯರೂ ಸೇರಿ 550 ಪ್ರವಾಸಿಗರನ್ನು ಎರಡು ದಿನಗಳ ಕಾರ್ಯಾಚರಣೆ ನಡೆಸಿ ವಾಯು ಸೇನೆ ರಕ್ಷಣೆ ಮಾಡಿದೆ. ಹಂಪಿ ಸೇರಿ ಈ ಭಾಗದ ಪ್ರವಾಸಿ ತಾಣಗಳ ವೀಕ್ಷಣೆಗೆ ಆಗಮಿಸಿದ್ದ 27 ವಿದೇಶಿಗರು ಸೇರಿ 500ಕ್ಕೂ ಹೆಚ್ಚು ಪ್ರವಾಸಿಗರು ವಿರುಪಾಪುರ ಗಡ್ಡೆಯಲ್ಲಿ ಸಿಲುಕಿದ್ದರು.

Advertisement

ಸೋಮವಾರ ಕೊಪ್ಪಳ ಜಿಲ್ಲಾಡಳಿತ ಎರಡು ಹೆಲಿಕಾಪ್ಟರ್‌ ಮೂಲಕ ನಿರಂತರ ಕಾರ್ಯಾಚರಣೆ ನಡೆಸಿತ್ತು. ಸೋಮವಾರ 314 ಜನರ ರಕ್ಷಣೆ ಮಾಡಲಾಗಿತ್ತು. ಆದರೆ, ಸಂಜೆಯಾಗುತ್ತಿದ್ದಂತೆ ವಾಯು ಸೇನೆ ರಕ್ಷಣಾ ಕಾರ್ಯ ಸ್ಥಗಿತ ಮಾಡಿತ್ತು. ಹೀಗಾಗಿ, ಗಡ್ಡೆಯಲ್ಲಿನ ಪ್ರವಾಸಿಗರಿಗೆ ಧೈರ್ಯ ಹೇಳಲು ಕೊಪ್ಪಳ ಎಸಿ ಸಿ.ಡಿ.ಗೀತಾ, ಗಂಗಾವತಿ ಠಾಣೆ ಪೊಲೀಸ್‌ ಪಡೆ ರಾತ್ರಿ ವಾಸ್ತವ್ಯ ಹೂಡಿತ್ತು.

ಮಂಗಳವಾರ ಬೆಳಗ್ಗೆ 8.30ಕ್ಕೆ ಮತ್ತೆ ರಕ್ಷಣಾ ಕಾರ್ಯ ಆರಂಭವಾಯಿತು. ಗುಡ್ಡದ ಮೇಲೆ ಹೆಲಿಕಾಪ್ಟರ್‌ ನಿಲ್ಲಿಸಿ ಜನರ ರಕ್ಷಣೆ ಮಾಡಿ ಬಳ್ಳಾರಿಯ ಜಿಂದಾಲ್‌ ವಿಮಾನ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಯಿತು. ಅಲ್ಲಿಯೂ ಪ್ರವಾಸಿಗರಿಗೆ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ನೇರವಾಗಿ ಹೊಸಪೇಟೆ ಬಸ್‌ ನಿಲ್ದಾಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಿ ಪ್ರವಾಸಿಗರು ತಮ್ಮ ಸ್ಥಳಗಳಿಗೆ ತೆರಳಲು ಅನುವು ಮಾಡಿ ಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next