Advertisement

ಉರ್ವದಲ್ಲಿ ಪ್ರಸ್‌ಕ್ಲಬ್‌ ದಿನಾಚರಣೆ

10:53 AM Jan 08, 2018 | |

ಲೇಡಿಹಿಲ್‌: ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ
ಪಾಲು ಮಹತ್ತರವಾಗಿದೆ. ಜವಾಬ್ದಾರಿಯುತ ಕರ್ತವ್ಯ ನಿರ್ವಹಣೆ ಮೂಲಕ ಎಲ್ಲರೂ ಒಟ್ಟಾಗಿ ಜಿಲ್ಲೆಯನ್ನು ಮಾದರಿಯಾಗಿಸಬೇಕು ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಆಶಿಸಿದರು.

Advertisement

ಮಂಗಳೂರು ಪ್ರಸ್‌ಕ್ಲಬ್‌, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್‌ನ ಆಶ್ರಯದಲ್ಲಿ ಲೇಡಿಹಿಲ್‌ ಉರ್ವ ಚರ್ಚ್‌ ಹಾಲ್‌ನಲ್ಲಿ ಶನಿವಾರ ನಡೆದ ಪ್ರಸ್‌ಕ್ಲಬ್‌ ದಿನಾಚರಣೆ ಮತ್ತು ಪ್ರಸ್‌ಕ್ಲಬ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.

ಜಿಲ್ಲೆ ಕೆಲವೊಂದು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭ ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುವ ಹೊಣೆ ಮಾಧ್ಯಮ ಮತ್ತು ಜಿಲ್ಲಾಡಳಿತದ ಮೇಲಿದೆ. ಸರಕಾರ ಮತ್ತು ಜಿಲ್ಲಾಡಳಿತದ ಜತೆಗೆ ಮಾಧ್ಯಮಗಳೂ ಸಹಕರಿಸಿಬೇಕು ಎಂದು ಅವರು ಹೇಳಿದರು.

ಗಣೇಶ್‌ ಕಾಮತ್‌ ಮಾತನಾಡಿ, ಜೀವನಕ್ಕೆ ಎದುರಾದ ಆಘಾತದಿಂದ ಬದುಕೇ ಕಷ್ಟವೆಂದು ಕುಳಿತಾಗ ಆಪ್ತವರ್ಗ,
ಹಿತೈಷಿಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರ ಫಲವಾಗಿ ಮತ್ತು ಇಂದಲ್ಲ ನಾಳೆ ಬದುಕಿನಲ್ಲಿ ಔನ್ನತ್ಯಕ್ಕೇರುವ ಧೈರ್ಯ ತುಂಬಿದ್ದರಿಂದಾಗಿ ಪ್ರಸ್ತುತ ಉದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು ಎಂದರು.

ಸಮ್ಮಾನ
ಸಾಧಕ ಪತ್ರಕರ್ತರಾದ ಮನೋಹರ ಪ್ರಸಾದ್‌, ಯು. ಕೆ. ಕುಮಾರನಾಥ್‌, ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌, ಪಿ.ಬಿ.
ಹರೀಶ್‌ ರೈ, ಕೇಶವ ಕುಂದರ್‌, ಜಗನ್ನಾಥ ಶೆಟ್ಟಿ ಬಾಳ, ಡಾ| ಯು.ಪಿ. ಶಿವಾನಂದ, ಮುಹಮ್ಮದ್‌ ಆರಿಫ್‌ ಪಡುಬಿದ್ರಿ, ಡಾ| ಸೀತಾಲಕ್ಷ್ಮೀ ಕರ್ಕಿಕೋಡಿ, ನರೇಶ್‌ ಸಸಿಹಿತ್ಲು, ಅಪುಲ್‌ ಆಳ್ವ ಇರಾ, ತಾರಾನಾಥ ಕಾಪಿಕಾಡ್‌, ದೇವಿಪ್ರಸಾದ್‌, ಕೆ.ಪಿ. ಮಂಜುನಾಥ್‌, ಗೋಪಾಲ್‌ ಅಂಚನ್‌, ಮೌನೇಶ್‌ ವಿಶ್ವಕರ್ಮ, ಕಿಶೋರ್‌ ಪೆರಾಜೆ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಾದ ಸಿಂಧು ಪಿ. ರೈ, ಅಂಕಿತಾ ಎನ್‌., ಋತು ಎನ್‌ ಫೆರ್ನಾಂಡಿಸ್‌, ಸಾತ್ವಿಕ್‌ ಕೆ. ಕುಂದರ್‌ ಅವರನ್ನು ಗೌರವಿಸಲಾಯಿತು. ಪತ್ರಕರ್ತರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪತ್ರಕರ್ತರಿಗೆ ಯಕ್ಷಗಾನ ಕಲಿಸಿದ ಯಕ್ಷಗುರು ರಾಮಚಂದ್ರ ಭಟ್‌ ಅವರನ್ನು ಅಭಿನಂದಿಸಲಾಯಿತು.

Advertisement

ಮಂಗಳೂರು ಪ್ರಸ್‌ಕ್ಲಬ್‌ ಅಧ್ಯಕ್ಷ ಡಾ| ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರಕುಮಾರ್‌, ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪಕುಮಾರ ಕಲ್ಕೂರ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು. ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ಕೆ. ಆನಂದ ಶೆಟ್ಟಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅಶ್ವನಿಕುಮಾರ್‌ ಎನ್‌. ಕೆ. ಆರ್‌. ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಜರಗಿತು. ಬಳಿಕ ಪತ್ರಕರ್ತರಿಂದ ‘ಶಕ್ರಾರಿ ಕಾಳಗ’ ಯಕ್ಷಗಾನ ಪ್ರದರ್ಶನಗೊಂಡಿತು.

ಸಂಪ್ರದಾಯ ಪಾಲನೆ
ನನ್ನ ವೃತ್ತಿ ಜೀವನದಲ್ಲಿ ನೋಡಿದ ಪತ್ರಿಕಾ ರಂಗದ ಪೈಕಿ ದ. ಕ.ಜಿಲ್ಲೆಯ ಮಾಧ್ಯಮ ಉತ್ತಮ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿನ ಮಾಧ್ಯಮ ಮಂದಿ ಮಾಧ್ಯಮ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.
– ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ಪ್ರಸ್‌ಕ್ಲಬ್‌ ಪ್ರಶಸ್ತಿ ಪ್ರದಾನ 
ವಿದ್ಯುತ್‌ ಅವಘಡದಿಂದಾಗಿ ಎರಡೂ ಕೈಗಳಲ್ಲಿ ಶಕ್ತಿ ಕಳೆದುಕೊಂಡರೂ ಎದೆಗುಂದದೆ ಬದುಕನ್ನು ಎದುರಿಸಿ ಯಶಸ್ವಿ ಉದ್ಯಮಿಯಾದ ಮೂಡಬಿದಿರೆಯ ಜಿ.ಕೆ. ಡೆಕೋರೇಟರ್ನ ಗಣೇಶ್‌ ಕಾಮತ್‌ ಅವರಿಗೆ ಪ್ರಸ್‌ಕ್ಲಬ್‌ ಪ್ರಶಸ್ತಿ ಪ್ರದಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next