Advertisement
ಅತ್ಯುತ್ತಮ ಶಾಲಾ ಪುರಸ್ಕಾರ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮನುಷ್ಯನ ಜೀವನದಲ್ಲಿ ಶಿಕ್ಷಣ ಅತೀ ಪ್ರಾಮುಖ್ಯ. ಆಧ್ಯಾತ್ಮಿಕ ವಿದ್ಯೆ ಎನ್ನುವುದು ಶುದ್ಧ ವಿಜ್ಞಾನವಾಗಿದ್ದು ಇದನ್ನು ಆಧುನಿಕ ಶಿಕ್ಷಣ ದೊಂದಿಗೆ ಮಕ್ಕಳಿಗೆ ಕಲಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಶಿಕ್ಷಕರು ಹಣ ಮಾಡುವ ಶಿಕ್ಷಣವನ್ನು ಕಲಿಸಿದರೆ ಅದು ಬದುಕಿಗೆ ಪೂರಕವಾಗದು. ಅಂತಹ ಶಿಕ್ಷಣ ಪಡೆದ ಮಕ್ಕಳು ತಮ್ಮ ವೈಯಕ್ತಿಕ ಜೀವನದಲ್ಲಿ ಬರುವಂತಹ ಸಣ್ಣ ಸಮಸ್ಯೆಯನ್ನೂ ಎದುರಿಸಲಾಗದ ಸ್ಥಿತಿಗೆ ತಲುಪುತ್ತಾರೆ ಎಂದು ಹೇಳಿದರು.
Related Articles
ಶೈಕ್ಷಣಿಕ ಅಭಿವೃದ್ಧಿ ನಡೆಸಿರುವ ಬೆಳ್ತಂಗಡಿಯ ನಡ ಸರಕಾರಿ ಪ್ರೌಢ ಶಾಲೆಗೆ ಒಂದು ಲಕ್ಷ ರೂ. ನಗದು ಮತ್ತು ಮೂಡಬಿದಿರೆ ತಾಕೊಡೆಯ ಆದರ್ಶ ಪ್ರೌಢಶಾಲೆಗೆ ಎರಡು ಲಕ್ಷ ರೂ. ಆರ್ಥಿಕ ನೆರವಿನ ಚೆಕ್ಕನ್ನು ವಿತರಿಸಲಾಯಿತು. ನಿಟ್ಟೆ ವಿ.ವಿ.ಯ ಕುಲಾಧಿಪತಿ ಎನ್. ವಿನಯ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಸನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭೂನಾಥ ಸ್ವಾಮೀಜಿ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ನಿಟ್ಟೆ ವಿ.ವಿ.ಯ ಉಪಕುಲಾಪತಿ ಡಾ| ಶಾಂತಾರಾಮ ಶೆಟ್ಟಿ, ಬೆಂಗಳೂರು ವಿ.ವಿ. ವಿಶ್ರಾಂತ ಉಪಕುಲಪತಿ ಡಾ| ಎನ್.ಆರ್. ಶೆಟ್ಟಿ, ಮಂಗಳೂರು ವಿ.ವಿ. ಉಪಕುಲಪತಿ ಪ್ರೊ| ಕೆ. ಭೈರಪ್ಪ, ಡಿಡಿಪಿಐ ವಾಲ್ಟರ್ ಡಿಮೆಲ್ಲೋ, ಟ್ರಸ್ಟಿಗಳಾದ ಬಿ.ಆರ್. ಹೆಗ್ಡೆ, ಗುರುಪ್ರಸಾದ್ ಅಡ್ಯಂತಾಯ ಉಪಸ್ಥಿತರಿದ್ದರು.
Advertisement
ಹಣಕಾಸು ವಿಭಾಗ ನಿರ್ದೇಶಕ ರಾಜೇಂದ್ರ ಎಂ. ಸ್ವಾಗತಿಸಿದರು. ಪಠ್ಯೇತರ ವಿಭಾಗದ ನಿರ್ದೇಶಕ ಪ್ರೊ| ರಾಜಶೇಖರ್ ಎಂ. ಕಾರ್ಯಕ್ರಮ ನಿರ್ವಹಿಸಿದರು ನಿಟ್ಟೆ ವಿ.ವಿ.ಯ ಕುಲ ಸಚಿವ ಡಾ| ಎಂ.ಎಸ್. ಮೂಡಿತ್ತಾಯ ವಂದಿಸಿದರು.