ಹೊಸದಿಲ್ಲಿ: ರಾಜ್ಯಪಾಲರ ಹುದ್ದೆಯನ್ನೇ ರದ್ದು ಮಾಡಬೇಕು ಅಥವಾ ಕ್ಷುಲ್ಲಕ ರಾಜಕೀಯ ಮಾಡದ, ಘನತೆಯುಳ್ಳ ವ್ಯಕ್ತಿ ಗಳನ್ನು ಸಹಮತದಲ್ಲಿ ನೇಮಿಸಬೇಕು ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಪ್ರತಿಪಾದಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕ್ಷುಲ್ಲಕ ರಾಜಕೀಯಕ್ಕಾಗಿ ರಾಜ್ಯಪಾಲ ಹುದ್ದೆ ಬಳಕೆ ಮಾಡಬಾರದು ಎಂದು ಹೇಳಿದ್ದಾರೆ. ವಿಪಕ್ಷಗಳ ಆಡಳಿತ ಇರುವ ರಾಜ್ಯ ಸರಕಾರಗಳು ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ನಡೆಯುತ್ತಿರು ವಂತೆಯೇ ಮನು ಸಿಂಘ್ವಿ ಈ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿಗೆ ರಾಜ್ಯಪಾಲರು ಕರ್ತವ್ಯಕ್ಕೆ ಅಡ್ಡಿಯಾಗುತ್ತಾರೆ ಎಂದಾದರೆ ಅಂಥವರು ಹುದ್ದೆಯಿಂದ ಹೊರ ನಡೆಯ ಬೇಕು. ಮಸೂದೆಯನ್ನು 8-10 ಬಾರಿ ಅಂಗೀಕರಿಸಿ ದರೂ ರಾಜ್ಯಪಾಲರು ಸಹಿ ಹಾಕುವುದಿಲ್ಲ. ಹೀಗಾಗಿ ರಾಜ್ಯಗಳು ಕೋರ್ಟ್ ಮೊರೆ ಹೋಗಬೇ ಕಾಗಿದೆ. ಇದರಿಂದ ರಾಜ್ಯದ ಆಡಳಿತ ಸೊರಗುತ್ತದೆ ಎಂದರು.
“ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬಂದರೂ ಪ್ರಧಾನಿಯಾಗುವ ಹಕ್ಕನ್ನು ರಾಹುಲ್ ಗಾಂಧಿ ಪಡೆದಿದ್ದಾರೆ. ಅವರು ನುಡಿದಂತೆ ನಡೆವ ನಾಯಕ.”
ಅಭಿಷೇಕ್ ಮನು ಸಿಂಘ್ವಿ, ಕಾಂಗ್ರೆಸ್ ನಾಯಕ