Advertisement

ಕಟ್ಟಡ ಪುನರ್‌ನಿರ್ಮಾಣಕ್ಕೆ ಪ್ರಸ್ತಾವನೆ 

12:47 PM Jul 06, 2018 | |

ಕಡಬ : ಶಿಥಿಲಗೊಂಡು ಕುಸಿದು ಬೀಳುವ ಭೀತಿ ಎದುರಿಸುತ್ತಿರುವ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ
ಪ್ರೌಢಶಾಲಾ ವಿಭಾಗದ ಹಳೆಯ ತರಗತಿ ಕೊಠಡಿಯ ಕಟ್ಟಡವನ್ನು ತೆರವುಗೊಳಿಸಿ ಪುನರ್ನಿರ್ಮಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಕ್ಕಾಗಿ ಗುರುವಾರ ಕಟ್ಟಡಗಳ ಪರಿಶೀಲನೆ ನಡೆಸಲಾಯಿತು.

Advertisement

ತರಗತಿ ಕೊಠಡಿಗಳಿರುವ ಹಳೆಯ ಕಟ್ಟಡ ಶಿಥಿಲಗೊಂಡು ಗೋಡೆಗಳು ಬಿರುಕುಬಿಟ್ಟು ಕುಸಿದುಬೀಳುವ ಅಪಾಯ ಇರುವುದರ ಬಗ್ಗೆ ಕೆಲ ದಿನಗಳ ಹಿಂದೆ ಉದಯವಾಣಿ ಸುದಿನ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು. ಜಿಲ್ಲಾ ಪಂಚಾಯತ್‌ ಕಿರಿಯ ಇಂಜಿನಿಯರ್‌ ಭರತ್‌ ಅವರು ಶಿಥಿಲಗೊಂಡಿರುವ ತಲಾ 5 ತರಗತಿ ಕೊಠಡಿಗಳಿರುವ 2 ಕಟ್ಟಡಗಳನ್ನು ತೆರವುಗೊಳಿಸಿ ಪುನರ್ನಿರ್ಮಾಣ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಲು ಅಂದಾಜುಪಟ್ಟಿ ತಯಾರಿಸುವ ಸಲುವಾಗಿ ಮಾಹಿತಿ ಪಡೆದುಕೊಂಡರು.

ಮಾತನಾಡಿದ ಜಿಲ್ಲಾ ಪಂಚಾಯತ್‌ ಸದಸ್ಯ ಪಿ.ಪಿ.ವರ್ಗೀಸ್‌ ಅವರು ಹಳೆಯ ಶಿಥಿಲಗೊಂಡಿರುವ ಕಟ್ಟಡವನ್ನು ತೆರವುಗೊಳಿಸಲು ಕ್ರಮಕೈಗೊಳ್ಳು ವುದರೊಂದಿಗೆ ಈಗಾಗಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಗಮನಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸಚಿವರಿಗೆ ಒತ್ತಡ ಹೇರುವುದಾಗಿ ತಿಳಿಸಿದರು. ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಅಬ್ದುಲ್‌ ಖಾದರ್‌ ಅವರು ಪೂರಕ ಮಾಹಿತಿ ನೀಡಿದರು. ಕಡಬ ಗ್ರಾಮ ಪಂಚಾಯತ್‌ ಅಧ್ಯಕ್ಷ ಬಾಬು ಮುಗೇರ, ಸದಸ್ಯ ಎ.ಎಸ್‌. ಶರೀಫ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next