Advertisement

ಸೇನಾಧಿಕಾರಿಗಳ ನಿವೃತ್ತಿ ವಯಸ್ಸು ಹೆಚ್ಚಿಸಲು ಪ್ರಸ್ತಾವ

01:27 AM Nov 06, 2020 | mahesh |

ಹೊಸದಿಲ್ಲಿ: ಪಿಂಚಣಿಗೆ ಕತ್ತರಿ ಹಾಕುವ ಸಂಬಂಧ ಸೇನೆಯ ಪ್ರಮುಖ ಹುದ್ದೆಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಸೇನಾ ವ್ಯವಹಾರಗಳ ಖಾತೆ (ಡಿಎಂಎ) ಚಿಂತಿಸಿದೆ. ಈ ಕುರಿತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಇದರ ಅನ್ವಯ, ಭೂ- ವಾಯು- ನೌಕಾಪಡೆ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 54ರಿಂದ 57ಕ್ಕೆ, ಬ್ರಿಗೇಡಿಯರ್‌ಗಳಿಗೆ 56ರಿಂದ 58ಕ್ಕೆ ಹಾಗೂ ಮೇಜರ್‌ ಜನರಲ್‌ಗ‌ಳಿಗೆ ನಿವೃತ್ತಿ ವಯಸ್ಸನ್ನು 58ರಿಂದ 59ಕ್ಕೆ ಹೆಚ್ಚಿಸಲಾಗಿದೆ. 60 ವರ್ಷಕ್ಕೆ ನಿವೃತ್ತಿಯಾಗುವ ಲೆಫ್ಟಿನೆಂಟ್‌ ಜನರಲ್‌ ವಿಭಾಗದಲ್ಲಿ ಯಾವುದೇ ಬದಲಾವಣೆ ಪ್ರಸಾವಗೊಂಡಿಲ್ಲ. ಇದುವರೆಗೆ ಜ್ಯೂನಿಯರ್‌ ಕಮಿಷನ್ಡ ಅಧಿಕಾರಿಗಳು 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದರು. ಇವರಿಗೆ ನಿವೃತ್ತಿ ವಯಸ್ಸನ್ನು 57 ವರ್ಷಕ್ಕೆ ವಿಸ್ತರಿಸಲು ಚಿಂತಿಸಲಾಗಿದೆ.

ಲೆಕ್ಕಾಚಾರವೇನು?: ಪ್ರಸ್ತಾವಗೊಂಡ ವರದಿ ಪ್ರಕಾರ, 26-30 ವರ್ಷ ಸೇವೆಗೈದ ಸೇನಾಧಿಕಾರಿಗೆ ಶೇ.60ರಷ್ಟು ಪಿಂಚಣಿ, 31-35 ವರ್ಷ ಸೇವೆ ಮಾಡಿ ದವರು ಶೇ.75ರಷ್ಟು ಪಿಂಚಣಿಗೆ ಅರ್ಹರಾಗುತ್ತಾರೆ.  35 ವರ್ಷಕ್ಕಿಂತ ಹೆಚ್ಚು ಸೇವೆ ಮಾಡಿದ ವರಷ್ಟೇ ಪೂರ್ಣ ಪಿಂಚಣಿಗೆ ಅರ್ಹರಾಗುತ್ತಾರೆ. ಆದರೆ, ಇದಕ್ಕೆ ಸೇನಾಧಿಕಾರಿಗಳು ಹಾಗೂ ನಿವೃತ್ತ ಯೋಧರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next