Advertisement

41 ಹೊಸ ತಾಲೂಕುಗಳಲ್ಲಿ ಸಿಡಿಪಿಒಗೆ ಪ್ರಸ್ತಾವನೆ: ಸಚಿವ ಹಾಲಪ್ಪ ಆಚಾರ್‌

08:36 PM Dec 23, 2022 | Team Udayavani |

ಸುವರ್ಣ ವಿಧಾನಸೌಧ: ನಲವತ್ತೂಂದು ಹೊಸ ತಾಲೂಕುಗಳಲ್ಲಿ ಶಿಶು ಅಭಿವೃದ್ಧಿ ಯೋಜನೆಯನ್ನು ಮಂಜೂರು ಮಾಡಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ಪ್ರಶ್ನೋತ್ತರ ವೇಳೇ ಬಿಜೆಪಿಯ ದೊಡ್ಡಗೌಡರ ಮಹಾಂತೇಶ ಬಸವಂತರಾಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, 2020ರಲ್ಲಿ ಕರ್ನಾಟಕ ಒಳಗೊಂಡಂತೆ ಎಲ್ಲ ರಾಜ್ಯಗಳಿಗೆ ಮಂಜೂರು ಮಾಡಿತ್ತು. ಮುಂಬರುವ ಹಂತದಲ್ಲಿ ಅಂಗನವಾಡಿ ಸೇವೆಗಳ ಯೋಜನೆಯನ್ನು ಪರಿಷ್ಕರಿಸುವ ಮತ್ತು ಅಧಿಕ ಯೋಜನೆಗಳು ಲಭ್ಯವಾಗುವ ಸಂದರ್ಭದಲ್ಲಿ ರಾಜ್ಯದ ಪ್ರಸ್ತಾವನೆ ಪರಿಗಣಿಸುವುದಾಗಿ ಕೇಂದ್ರ ತಿಳಿಸಿದೆ ಎಂದರು.

2021 ಡಿಸೆಂಬರ್‌ 4 ಹಾಗೂ 2022 ಫೆ.7ರಂದು ಹೊಸ ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನೆಯನ್ನು ಮಂಜೂರು ಮಾಡಲು ಕೇಂದ್ರಕ್ಕೆ ಕೋರಲಾಗಿದೆ ಎಂದು ವಿವರಿಸಿದರು.

ಹೊಸ ಅಂಗನವಾಡಿ ಆರಂಭಕ್ಕೆ ತಕ್ಷಣ ಕ್ರಮ
ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಹೊಸದಾಗಿ 4244 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ತಕ್ಷಣವೇ ಆರಂಭಿಸಲು ಕ್ರಮವಹಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್‌ ತಿಳಿಸಿದರು.

ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಆನಂದ್‌ ನ್ಯಾಮಗೌಡರ ಪ್ರಶ್ನೆಗೆ ಉತ್ತರಿಸಿ, ಹೆಚ್ಚಾಗಿ ವಲಸೆ ಮತ್ತು ಭೂ ರಹಿತ ಕಾರ್ಮಿಕರನ್ನು ಒಳಗೊಂಡಿರುವ ಗ್ರಾಮಾಂತರ ಪ್ರದೇಶದಲ್ಲಿ 1655 ಮತ್ತು ನಗರ ಪ್ರದೇಶಗಳಲ್ಲಿ 2589 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಈಗಾಗಲೇ ಜಿಲ್ಲೆಗಳಿಂದ 3538 ಬೇಡಿಕೆ ಸ್ವೀಕರಿಸಲಾಗಿದೆ ಎಂದರು.

Advertisement

ಸ್ಥಳೀಯ ಶಾಲೆ ಕಟ್ಟಡ, ಸಮುದಾಯ ಭವನ, ಸಂಘ-ಸಂಸ್ಥೆಗಳ ಜಾಗಗಳಿದ್ದರೆ ಅದನ್ನು ಬಳಸಿಕೊಂಡು ಸ್ಥಳೀಯ ಸಮುದಾಯದವರನ್ನೇ ಬಳಸಿ ಅಂಗನವಾಡಿ ಆರಂಭಿಸಿ, ನಂತರ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next