Advertisement

ಪ್ರವಾದಿ ಮೊಹಮ್ಮದ್ ಮಾಂಸ ಸೇವಿಸುತ್ತಿರಲಿಲ್ಲ, ಇಂದ್ರೇಶ್ ಸಲಹೆ ಏನು?

03:16 PM Jun 06, 2017 | Sharanya Alva |

ನವದೆಹಲಿ:ಭಾರತದಲ್ಲಿರುವ ಮುಸ್ಲಿಮರು ಮಾಂಸ ತಿನ್ನುವುದನ್ನು ಬಿಟ್ಟುಬಿಡಬೇಕು. ಯಾಕೆಂದರೆ ಇಸ್ಲಾಂ ಧರ್ಮಗುರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರಾಗಲಿ, ಅವರ ಅನುಯಾಯಿಗಳು ಯಾವತ್ತೂ ಮಾಂಸ ಸೇವನೆ ಮಾಡಿಲ್ಲ. ಮಾಂಸ ಸೇವನೆಯಿಂದ ಖಾಯಿಲೆ ಬರುತ್ತದೆ ಎಂದು ಅವರು ನಂಬಿರುವುದಾಗಿ ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ!

Advertisement

ಆರ್ ಎಸ್ ಎಸ್ ನ ಮುಸ್ಲಿಂ ಘಟಕದ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ಎಂ) ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಇಂದ್ರೇಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಸ್ಲಿಂ ರಾಷ್ಟ್ರೀಯ ಮಂಚ್ ಭಾರತೀಯ ಮುಸ್ಲಿಮರಲ್ಲಿ ಮೂರು ಪ್ರಾಥಮಿಕ ಮನವಿಯನ್ನು ಮಾಡಿಕೊಂಡಿದೆ ಎಂದು ತಿಳಿಸಿದರು.

ಮೊದಲನೆಯದಾಗಿ ಮಸೀದಿ, ದರ್ಗಾ ಹಾಗೂ ತಮ್ಮ ಪ್ರದೇಶದ ಸುತ್ತಮುತ್ತ ಗಿಡ, ಮರಗಳನ್ನು ಬೆಳೆಸಬೇಕು. 
ಇದರಿಂದ ಮಾಲಿನ್ಯ ತಡೆಗಟ್ಟಲು ಸಾಧ್ಯ. ಅಷ್ಟೇ ಅಲ್ಲ ಪರಿಸರವನ್ನು ರಕ್ಷಿಸಿದಂತಾಗುತ್ತದೆ. ಎರಡನೇಯದು ಮುಸ್ಲಿಮರು ತಮ್ಮ ಮನೆಯ ಮುಂಭಾಗದಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು. ಮೂರನೇಯದಾಗಿ ಪ್ರವಾದಿ ಮೊಹಮ್ಮದ್ ಹಾಗೂ ಅವರ ಅನುಯಾಯಿಗಳು ಮಾಂಸಹಾರ ಸೇವಿಸುತ್ತಿರಲಿಲ್ಲ. ಮಾಂಸ ಸೇವನೆ ರೋಗಕಾರಕ, ಹಾಲು ಸೇವನೆ ಆರೋಗ್ಯಕರ ಎಂದು ಹೇಳಿದರು.

ಇಸ್ಲಾಂ ಅನ್ನು ಸುಂದರ ಧರ್ಮವನ್ನಾಗಿಸಲು ಭಾರತೀಯ ಮುಸ್ಲಿಮರು ಶ್ರಮ ಪಡಬೇಕಾಗಿದೆ ವಿನಃ ಅದರಿಂದ ವಿಮುಖರನ್ನಾಗಿಸಬಾರದು ಎಂದು ಇಂದ್ರೇಶ್ ಸಲಹೆ ನೀಡಿದ್ದಾರೆ. ಏತನ್ಮಧ್ಯೆ ಆರ್ಎಸ್ಎಸ್ ನ ಇಂದ್ರೇಶ್ ಕುಮಾರ್ ಅವರನ್ನು ಆಹ್ವಾನಿಸಿದ್ದಕ್ಕೆ ಯೂನಿರ್ವಸಿಟಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಎಡೆಮಾಡಿಕೊಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next