Advertisement
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಮಹಾ ನಗರಪಾಲಿಕೆ ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಗಳು ಮತ್ತು 176 ನಗರ ಸ್ಥಳೀಯ ಸಂಸ್ಥೆಗಳಿಗೆ ಮೂರು ವರ್ಷಗಳಲ್ಲಿ ಆಸ್ತಿ ಮಾಲಕರಿಂದ 3,200 ಸಾವಿರ ಕೋಟಿ ರೂ. ತೆರಿಗೆ ಪಾವತಿಯಾಗದಿರುವುದೇ ಇದಕ್ಕೆ ಸಾಕ್ಷಿ.
Related Articles
Advertisement
ಇದನ್ನೂ ಓದಿ:ಲಖೀಂಪುರ ಹಿಂಸೆ: ಆಶಿಷ್ ಮಿಶ್ರಾ ಬಂಧನ; ಸತತ 8 ಗಂಟೆ ಎಸ್‌ಐಟಿ ವಿಚಾರಣೆ25 ಲಕ್ಷ ರೂ.ಗಳಿಗೂ ಅಧಿಕ ತೆರಿಗೆ ಬಾಕಿ
ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ 25 ಲಕ್ಷ ರೂ.ಗಳಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 156 ಪ್ರಕರಣಗಳಿವೆ. ಬಿಬಿಎಂಪಿಯಲ್ಲಿ 71 ಪ್ರಕರಣ ಗಳಿದ್ದರೆ, ಉಳಿದ ಮನಪಾಗಳಲ್ಲಿ 85 ಪ್ರಕರಣಗಳಿವೆ. ಮೈಸೂರು, ತುಮಕೂರು, ಬಳ್ಳಾರಿ, ಹುಬ್ಬಳ್ಳಿ- ಧಾರವಾಡ, ಕಲಬುರಗಿ ಮನಪಾಗಳಲ್ಲಿ 25 ಲಕ್ಷ ರೂ.ಗಳಿಗೆ ಅಧಿಕ ತೆರಿಗೆ ಬಾಕಿಯಾದ 85 ಪ್ರಕರಣ ಇದ್ದು, ಬಾಕಿ ಮೊತ್ತ 58 ಕೋಟಿ ರೂ. ಆಗಿದೆ. ಆಸ್ತಿ ಮುಟ್ಟುಗೋಲು; ದಂಡಾಸ್ತ್ರ
ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಬಾಕಿ ಪ್ರಕರಣಗಳಲ್ಲಿ ಮೊದಲು ಶೋಕಾಸ್ ನೋಟಿಸ್ ನೀಡಿ ಬಳಿಕ ಜಪ್ತಿ ವಾರಂಟ್ ಹೊರಡಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ 202-21ನೇ ಸಾಲಿನ ವರೆಗೆ ಪ್ರತೀ ತಿಂಗಳು ಶೇ. 2ರಷ್ಟು ಬಡ್ಡಿ, 2021-2ನೇ ಸಾಲಿನಿಂದ ವಾರ್ಷಿಕ ಶೇ. 9ರಷ್ಟು ಬಡ್ಡಿ ವಸೂಲು ಮಾಡಲಾಗುತ್ತದೆ. ಉಳಿದ ಮನಪಾಗಳಲ್ಲಿ ಆಸ್ತಿ ತೆರಿಗೆ ಪಾವತಿಸದಿದ್ದಲ್ಲಿ ಮಾಸಿಕ ಶೇ. 2ರಷ್ಟು ಬಡ್ಡಿ ದರದ ದಂಡದೊಂದಿಗೆ ತೆರಿಗೆ ವಸೂಲಿ ಮಾಡಲಾಗುವುದು, ಬಡ್ಡಿ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ. - ರಫೀಕ್ ಅಹ್ಮದ್