Advertisement
ಪಟ್ಟಣದ ದಿವಂಗತ ವೀರಪ್ಪನವರ ಮಗ ವೈ.ವಿ.ಚಂದ್ರಶೇಖರ್ ಮನೆಯಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ದಿ.ಮಾಸ್ತಿವೆಂಕಟೇಶ್ ಅಯ್ಯಂಗಾರ್ ಇವರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಜೊತೆಗೆ, ಕವಿಗಳಿರಬಹುದು, ಕನ್ನಡದಲ್ಲಿ ವಿಶೇಷ ಸ್ಥಾನಮಾನವನ್ನು ಗಳಿಸಿ ಶ್ರೇಷ್ಠವಾದ ಸಾಧನೆ ಮಾಡಿರುವಂತಹ ವ್ಯಕ್ತಿಗಳನ್ನು ಗುರುತಿಸಿ, ಗೌರವಿಸಿ ಅವರನ್ನು ಪ್ರತಿ ತಿಂಗಳು ಅವರ ವಿಚಾರಧಾರೆಗಳನ್ನು ಸ್ಮರಿಸುವ ಕೆಲಸ ಕಸಾಪ ಹಮ್ಮಿಕೊಂಡಿರುವುದು ಸಂತಸದ ವಿಷಯ. ಪ್ರತಿ ತಿಂಗಳೂ ಸಹ ಒಂದು ಗಂಟೆ ಸಾಹಿತ್ಯಾಸಕ್ತರು ಒಂದೆಡೆ ಸೇರಿ ಅವರ ಸಾಧನೆಗಳನ್ನು ಸ್ಮರಿಸಿಕೊಂಡಾಗ ನಮಗೂ ಸಂತಸ ಆಗುವುದರ ಜೊತೆಗೆ ಅಂತಹವರ ಆತ್ಮಕ್ಕೆ ತೃಪ್ತಿಯಾಗುವುದಲ್ಲದೆ ಪರಿಷತ್ತಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
Related Articles
Advertisement
ಕಾರ್ಯಕ್ರಮದಲ್ಲಿ ಲಕ್ಷ್ಮೀನಾಗರಾಜ್ ಇವರ ಪ್ರಾರ್ಥನೆಯೊಂದಿಗೆ ಚಾಲನೆ ಗೊಂಡಿತು. ಕೆ.ಶಿವಕುಮಾರಾಚಾರಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಗುಪ್ತ ಸ್ವಾಗತಿಸಿ, ಕೋಶಾಧ್ಯಕ್ಷ ಎಚ್.ಟಿ.ನರಸಿಂಹ ಶೆಟ್ಟಿ ವಂದಿಸಿದರು.
ಜಿಲ್ಲಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಮಾಸ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಳ್ಳಿ ಮೈಸೂರು ಪಿಯು ಕಾಲೇಜಿನ ಪ್ರಾಂಶುಪಾಲಾರದ ಎಚ್.ಎಸ್. ಪ್ರಭುಶಂಕರ್ ಮಾತನಾಡಿ, ಮಾಸ್ತಿಯವರು ಎರಡು ಶತಮಾನಗಳನ್ನು ಕಂಡ ವರು. ಇವರು 1891ಜೂನ್ 6ರಲ್ಲಿ ಕೋಲಾರ ಜಿಲ್ಲೆ, ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ರಾಮಸ್ವಾಮಿ ಅಯ್ಯಂಗಾರ್ ಮತ್ತು ತಿರುಮಲಾಂಬ ದಂಪತಿಗಳ ಮಗನಾಗಿ ಜನಿಸಿದರು.
ಮೂಲತಃ ತಮಿಳಿನವರು. ಕಡು ಬಡತನದಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಉನ್ನತ ಮಟ್ಟದವರೆಗೂ ತಲುಪಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಕವಿಯಾಗಿದ್ದವರು. ಇವರು ಸಣ್ಣಕಥೆ ಗಳ ಜನಕ ಅಂತಲೂ ಪ್ರಸಿದ್ಧಿ ಪಡೆದು ಇವರು ಬರೆದ ಚಿಕ್ಕವೀರ ರಾಜೇಂದ್ರ ಕೃತಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು.
ನಾಲ್ಕು ಸಣ್ಣಕಥೆಗಳ ಸಂಪುಟವನ್ನು ಹೊರತರುವುದರ ಜೊತೆಗೆ ಇವರು ಬರೆದ ನಾಟಕ ಕಾಕನಕೋಟೆ ಹೆಚ್ಚು ಪ್ರಸಿದ್ಧಿ ಪಡೆಯುತ್ತದೆ. 1929ರಲ್ಲಿ ಬೆಳಗಾವಿಯಲ್ಲಿ ನಡೆದ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿ 1986 ಜೂನ್ 6ರಲ್ಲಿ ದೈವಾದೀನರಾದರು ಎಂದು ತಿಳಿಸಿದರು. ಇಂತಹವರ ಸಾಧನೆ ಸ್ಮರಿಸುವುದು ಕಸಾಪ ಕರ್ತವ್ಯ ಎಂದರು.