Advertisement

ಸಾಹಿತ್ಯದಿಂದ ವಾಸ್ತವ ವಿಚಾರ ಪ್ರಚುರಪಡಿಸಿ

11:35 AM Jan 10, 2022 | Team Udayavani |

ಕಲಬುರಗಿ: ಸಾಹಿತ್ಯ ಎಂಬುದು ಇಡೀ ಸಮೂಹದ ದೃಷ್ಟಿಕೋನವನ್ನು ಒಟ್ಟಾಗಿಸಿಕೊಂಡು ಗ್ರಹಿಸಿ ಅರ್ಥೈಸಿಕೊಂಡು ಅದನ್ನು ಅಭಿವ್ಯಕ್ತಗೊಳಿಸುವ ಮಾಧ್ಯಮವಾಗಿದೆ. ಜತೆಗೆ ಸರ್ವ ಜನರ ಆಶಯ, ಬದುಕಿನ ಚಿತ್ರಣ ಮತ್ತು ವಾಸ್ತವದ ಆಲೋಚನಾ ವಿಚಾರಗಳನ್ನು ಸಾಹಿತ್ಯದ ಮುಖಾಂತರ ಸಮಾಜಕ್ಕೆ ತಲುಪಿಸಬೇಕಾಗಿದೆ ಎಂದು ಸುತ್ತೂರು ಶ್ರೀ ಮಠದ ಜಗದ್ಗುರು ಡಾ| ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ನುಡಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸಲ್ಲಿಸಿದ ಗೌರವ ಸತ್ಕಾರ ಸ್ವೀಕರಿಸಿ ಸಂದೇಶ ನೀಡಿದ ಶ್ರೀಗಳು, ಒಟ್ಟಾರೆಯಾಗಿ ಜನಸಮೂಹದ ಧ್ವನಿಯಾಗಿ ಸಾಹಿತ್ಯ ಹೊರಹೊಮ್ಮಬೇಕಾಗಿದ್ದು ಈಗಿನ ಪ್ರಸ್ತುತತೆಯಾಗಿದೆ. ಈ ನಿಟ್ಟಿನಲ್ಲಿ ಸಮಾಜದ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾಹಿತ್ಯ ರಚನೆ ಆಗಲಿ. ಪರಿಷತ್ತಿನ ಚಟುವಟಿಕೆಗಳು ಕಾರ್ಯೋನ್ಮುಖವಾಗಲಿ ಎಂದು ಹಾರೈಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಫ‌.ಗು. ಹಳಕಟ್ಟಿ ಶರಣರು ತಮ್ಮ ಬದುಕಿನುದ್ದಕ್ಕೂ ವಚನ ಸಾಹಿತ್ಯ ಮತ್ತು ಕನ್ನಡವನ್ನು ಉಸಿರಾಗಿಸಿಕೊಂಡಿದ್ದರಿಂದ, ವಿಚಾರಧಾರೆಗಳನ್ನು ಈಗಿನ ಹೊಸ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ “ಹಳಕಟ್ಟಿ ಹೊಸಸೃಷ್ಟಿ’ ಎಂಬ ವಿಚಾರ ಸಂಕಿರಣವನ್ನು ಪರಿಷತ್‌ ವತಿಯಿಂದ ಏರ್ಪಡಿಸಲಾಗುವುದು ಎಂದರು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ಡಾ| ಶರಣರಾಜ್‌ ಛಪ್ಪರಬಂದಿ, ಶಿವರಾಜ ಅಂಡಗಿ, ಪ್ರಮುಖರಾದ ಪ್ರೊ| ಯಶ ವಂತರಾಯ ಅಷ್ಟಗಿ, ಅಪ್ಪಾರಾವ್‌ ಅಕ್ಕೋಣಿ, ಬಿ.ಎಂ.ಪಾಟೀಲ ಕಲ್ಲೂರ, ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ, ಜಗದೀಶ ಮರಪಳ್ಳಿ, ರಾಜೇಂದ್ರ ತೆಗನೂರ, ವಿದ್ಯಾ ಸಾಗರ ದೇಶಮುಖ, ರವೀಂದ್ರಕುಮಾರ ಭಂಟನಳ್ಳಿ, ಸುರೇಶ ಪಾಟೀಲ, ಶ್ರೀಕಾಂತ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next