Advertisement
ಸರ್ಕಾರದ ಪತನ ಭೀತಿ ನಡುವೆ ಎರಡು ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆಯ ಪದೋನ್ನತಿ ಸಮಿತಿ (ಡಿಪಿಸಿ) ಸಭೆಯಲ್ಲಿ 800ಕ್ಕೂ ಹೆಚ್ಚು ಎಂಜಿನಿಯರ್‌ಗಳಿಗೆ ಸಹಾಯಕ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಗೆ ಬಡ್ತಿ ನೀಡಲು ಪಟ್ಟಿ ಅಖೈರುಗೊಳಿಸಲಾಗಿದೆ. ಹೀಗಾಗಿ, ಬಡ್ತಿ ಪಟ್ಟಿಯಲ್ಲಿÉರುವ ಎಂಜಿನಿಯರ್‌ಗಳೆಲ್ಲ ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದಾರೆ.
Related Articles
Advertisement
417 ಎಂಜಿನಿಯರ್‌ಗಳ ನೇಮಕಾತಿ ಸಕ್ರಮಗೊಳಿಸುವಲ್ಲಿಯೇ ಹಲವು ದೋಷಗಳಿವೆ. ಅಂಕ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸಿರುವುದು ಜತೆಗೆ ಇತರ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎನ್ನುವುದು ಪ್ರಮುಖ ಆರೋಪ. ಅಲ್ಲದೆ ಕೆಲವೊಬ್ಬರು ಸುಳ್ಳು ಜಾತಿ ಪ್ರಮಾಣ ಪತ್ರ ಹಚ್ಚಿ ಸೇವೆಗೆ ಸೇರಿರುವ ಗಂಭೀರ ಪ್ರಕರಣಗಳೂ ಇವೆ. ಅಂತವರ ಹೆಸರುಗಳು ಸಹ ಬಡ್ತಿ ಪಟ್ಟಿಯಲ್ಲಿರುವುದು ಆಶ್ಚರ್ಯ ಮೂಡಿಸಿದೆ.
ಪಟ್ಟಿ ಪಡೆಯಲು ಪ್ರಯತ್ನ: 800 ಎಂಜಿನಿಯರ್‌ಗಳ ಬಡ್ತಿಯಲ್ಲಿ ಕೃಷ್ಣಾ ಜಲಾಯನ ಪ್ರದೇಶದ 417 ಎಂಜಿನಿಯರ್‌ಗಳ ಪೈಕಿ 205 ಎಂಜಿನಿಯರ್‌ಗಳು ಸೇರಿದ್ದು, ಪಟ್ಟಿಯನ್ನು ಅಖೈರುಗೊಳಿಸಲಾಗಿದೆ. ಆದರೆ, ಪಟ್ಟಿ ಪಡೆಯಲು ಪ್ರಯತ್ನಿಸಿದರೂ ಯಾರಿಗೂ ಪಟ್ಟಿ ನೀಡದಿರುವಂತೆ ಸೂಚನೆ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
417 ಎಂಜಿನಿಯರ್‌ಗಳ ಸೇವೆ ಕಾಯಂ ಸಲುವಾಗಿ ಹೋರಾಟ ರೂಪಿಸಿ ಸರ್ಕಾರದ ಮೇಲೆ ಒತ್ತಡ ತಂದು ಬಹುತೇಕ ಯಶಸ್ವಿಯಾಗಿದ್ದೇವೆ. ಆದರೆ, ಇದರಲ್ಲಿ 205 ಎಂಜಿನಿಯರ್‌ಗಳ ಬಡ್ತಿಯಾಗಿರುವುದು ಗೊತ್ತಾಗಿದೆ. ಆದರೆ, ಈ ಕುರಿತು ಯಾರೂ ವಿವರಣೆ ನೀಡಿಲ್ಲ. ಕಾಯಂ ಸಲುವಾಗಿ ಹೋರಾಟ ನಡೆದಿರುವಾಗಲೇ ಬಡ್ತಿ ಹೊಂದಿರುವುದು ಸಂತೋಷದ ವಿಷಯ. ಆದರೆ, ಬಡ್ತಿ ಸಮರ್ಪಕ ಆಗಿರಬೇಕೆಂಬುದು ನಮ್ಮ ಬಯಕೆ.-ಲಕ್ಷ್ಮಣ ದಸ್ತಿ, ಹೋರಾಟಗಾರ * ಹಣಮಂತರಾವ ಭೈರಾಮಡಗಿ