Advertisement

ಬಡ್ತಿ ಮೀಸಲು ವಿಳಂಬ: ಸಾಮೂಹಿಕ ರಜೆ ಎಚ್ಚರಿಕೆ

10:57 PM Jul 01, 2019 | Team Udayavani |

ಬೆಂಗಳೂರು: ಸುಪ್ರೀಂ ಕೋರ್ಟ್‌ ಆದೇಶದಂತೆ ಬಡ್ತಿ ಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಎಸ್ಸಿ ಎಸ್ಟಿ ನೌಕರರು ಸಾಮೂಹಿಕ ರಜೆ ಹಾಕುವ ಬೆದರಿಕೆ ಹಾಕಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ಗೆ ಪತ್ರ ಬರೆದಿದ್ದಾರೆ.

Advertisement

ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ. ಶಿವಶಂಕರ್‌ ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಬಡ್ತಿ ಮೀಸಲಾತಿ ಆದೇಶಗಳು 1978, 79, 97ರ ಆದೇಶಗಳಿಗೆ ವಿರುದ್ಧವಾಗಿ ಮತ್ತು ಕರ್ನಾಟಕ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017ರ ಮೂಲ ಉದ್ದೇಶಕ್ಕೆ ದಕ್ಕೆ ತರುವ ರೀತಿಯಲ್ಲಿ ಸುತ್ತೋಲೆ ಸಿದ್ದಪಡಿಸಲು ಕಾರಣಕರ್ತರಾದ ಎಲ್ಲ ಅಧಿಕಾರಿಗಳ ಮೇಲೆ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 ರ ನಿಯಮದಂತೆ ಪ್ರಕರಣ ದಾಖಲಿಸಬೇಕು.

ನಿವೃತ್ತ ಅಧಿಕಾರಿಗಳಾದ ದೇವರಾಜ್‌ ಮತ್ತು ಅಬ್ದುಲ್‌ ಖಾದೀರ್‌ ಅವರು, ಬಡ್ತಿ ಮೀಸಲಾತಿ ವಿರೋಧಿಗಳಾಗಿದ್ದು, ಅವರು ಅಹಿಂಸಾ ನೌಕರರ ಜೊತೆ ಶಾಮೀಲಾಗಿ ಮೀಸಲಾತಿ ವಿರೋಧಿ ಸುತ್ತೋಲೆ ಹೊರಡಿಸಲು ಸಹಭಾಗಿಗಳಾಗಿದ್ದಾರೆ. ಅವರಿಗೆ 65 ವರ್ಷ ಮೀರಿರುವುದರಿಂದ ಸಮಾಲೋಚಕರ ಹುದ್ದೆಯಿಂದ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಬಡ್ತಿ ಮೀಸಲಾತಿಗೆ ಸಂಬಂಧಿಸಿದ ಆದೇಶ ಮತ್ತು ಸುತ್ತೋಲೆಗಳನ್ನು ಸರ್ಕಾರಿ ನೌಕರರೆ ಹೊರಡಿಸುವಂತೆ ನೋಡಿಕೊಳ್ಳಬೇಕು.

ಈ ಬೇಡಿಕೆಗಳನ್ನು ಮೂರು ದಿನದಲ್ಲಿ ಈಡೇರಿಸದಿದ್ದರೆ, ಸರ್ಕಾರಿ ಎಸ್ಸಿ ಎಸ್ಟಿ ನೌಕರರು ಸಾಮೂಹಿಕ ರಜೆ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next