Advertisement

ನಂದಿನಿ ಉತ್ಪನ್ನ ಖರೀದಿಯಿಂದ ಹೈನುಗಾರಿಕೆಗೆ ಉತ್ತೇಜನ

05:21 PM Jul 02, 2022 | Team Udayavani |

ಗುಳೇದಗುಡ್ಡ: ರಾಜ್ಯದ ರೈತರು ಬೆಳೆಸಿದ ಆಕಳು ಎಮ್ಮೆಗಳಿಂದ ಕೆಎಮ್‌ಎಫ್‌ ಹಾಲು ಖರೀದಿಸುತ್ತದೆ. ರಾಜ್ಯದ ಜನರು ನಂದಿನಿ ಹಾಲಿನ ಉತ್ಪನಗಳು ಖರೀದಿ ಮಾಡಿದರೆ ರಾಜ್ಯದಲ್ಲಿ ಹೈನುಗಾರಿಕೆ ಉತ್ತೇಜನ ನೀಡಿದಂತಾಗುತ್ತದೆ. ಅಲ್ಲದೇ ರಾಜ್ಯದ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸಾಧ್ಯವಾಗುತ್ತದೆ ಎಂದು ಕೆಎಂಎಫ್‌ ಬಾಗಲಕೋಟೆ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ವಿ.ಆರ್‌.ಯಡಹಳ್ಳಿ ಹೇಳಿದರು.

Advertisement

ಪಟ್ಟಣದ ಬಾಲಕೀಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ನಂದಿನಿ ಹಾಲು ಮತ್ತು ಹಾಲಿನ ಪುಡಿ, ಇನ್ನಿತರ ಉತ್ಪನ್ನಗಳ ಬಳಕೆ ಮಾಡುವ ಕುರಿತು ಮಹಿಳೆಯರಿಗೆ ಜಾಗೃತಾ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ನಂದಿನಿ ಹಾಲಿನ ಯಾವುದೇ ಉತ್ಪನಗಳು ಕಲಬೆರೆಕೆಯಾಗಿರುವುದಿಲ್ಲ. ವ್ಯಕ್ತಿಯ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಕೆಎಂಎಫ್‌ ರಾಜ್ಯದ ರೈತರಿಂದ ನೇರವಾಗಿ ಹಾಲು ಖರೀದಿಸುತ್ತದೆ.

ಅಲ್ಲದೇ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತದೆ. ಹೆಚ್ಚು ನಂದಿನಿ ಉತ್ಪನಗಳನ್ನು ಖರೀದಿಸಿ, ಕಲಬೆರೆಕೆಯುಕ್ತ ಹಾಲು ಸೇರಿದಂತೆ ಉತ್ಪನ ಸೇವಿಸುವುದಕ್ಕಿಂತ ಗುಣಮಟ್ಟದ ಹಾಲು ಸೇರಿದಂತೆ ಇನ್ನಿತರ ಉತ್ಪನ ನೀಡುವ ಕೆಎಂಎಫ್‌ನ ನಂದಿನಿ ಉತ್ಪನ್ನ ಖರೀದಿಸಿ ಎಂದು ಹೇಳಿದರು.

ಕೆಎಂಎಫ್‌ ಅ ಧಿಕಾರಿ ಬಿ.ಎಚ್‌.ಮುತ್ತುರ ನಂದಿನಿ ಹಾಲು ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ವೈ.ಜಿ.ತಳವಾರ, ಸಿ.ಎಂ. ಕುರುಬರ, ಎಲ್‌.ಎಸ್‌.ಪತ್ತಾರ, ಎಸ್‌.ಎಸ್‌. ಪಟ್ಟಣಶೆಟ್ಟಿ, ಎಲ್‌.ಐ.ಅಂಗಡಿ, ಎಸ್‌.ಎನ್‌ .ಬೇಸಗರ, ಪಿ.ಆರ್‌.ಮೂಲಂಗಿ, ದೇವಗಿರಿಕರ, ಎಸ್‌.ಭಾಗ್ಯಮ್ಮ, ಎಸ್‌.ಎಚ್‌.ಚಳ್ಳಗಿಡದ, ಎಸ್‌. ಎಸ್‌.ಬಿರಾದಾರ, ದೇವರಾಜ ಅಡ್ಡಿ, ಎಂ.ಎಂ. ಹೋಬಾಲಿ, ಎಸ್‌.ಎಸ್‌.ಉಳ್ಳಾಗಡ್ಡಿ, ಬಿ.ಎಂ. ಗಣೆಕಲ್‌, ನಂದಿನಿ ಪ್ರಾಂಚೈಸಿ ಯಮನೂರ ನಿಂಬಲಗುಂದಿ, ಹಾಲು ವಿತರಕರಾದ ವಿ.ಐ. ಭಾವಿ, ಚಂದ್ರಶೇಖರ ಉಣಚಗಿ, ಚಂದ್ರಶೇಖರ ಗೊಬ್ಬಿ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next