Advertisement

ಬೆಳಕಿನ ಹಬ್ಬದಲ್ಲಿ ‘ಸ್ಥಳೀಯ ಅಸ್ಮಿತೆ’ಬೆಳಗಲಿ

12:26 AM Nov 10, 2020 | mahesh |

ಲಕ್ನೋ: ಈ ದೀಪಾವಳಿಯಲ್ಲಿ ಸ್ಥಳೀಯವಾಗಿ ತಯಾರಿಸಲಾದ ವಸ್ತುಗಳನ್ನೇ ಖರೀದಿಸುವ ಮೂಲಕ “ಸ್ಥಳೀಯ ಅಸ್ಮಿತೆ’ಗೆ ಆದ್ಯತೆ ನೀಡಿ. ಇದು ದೇಶದ ಆರ್ಥಿಕತೆಗೆ ಉತ್ತೇಜನ ನೀಡುವಲ್ಲೂ ಸಹಕಾರಿಯಾಗಲಿದೆ. ಸ್ಥಳೀಯ ಸಣ್ಣ ಉದ್ಯಮಿಗಳ ಬಾಳಲ್ಲೂ ಬೆಳಕು ಮೂಡಿಸಲಿದೆ. ಪ್ರಧಾನಿ ಮೋದಿ ದೇಶವಾಸಿಗಳಿಗೆ ಹೀಗೊಂದು ಸಲಹೆ ನೀಡಿದ್ದಾರೆ. ವಾರಾಣಸಿಯಲ್ಲಿ ಸೋಮವಾರ 614 ಕೋ.ರೂ. ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ನಡೆಸಿ ಮಾತನಾಡಿ, ದೇಶ ವಾಸಿಗಳಿಗೆ ಬೆಳಕಿನ ಹಬ್ಬದ ಶುಭಾಶಯ ಕೋರಿದರು. “ಸ್ಥಳೀಯ ಉತ್ಪನ್ನಗಳ ಖರೀದಿ ಸ್ಥಳೀಯ ಅಸ್ಮಿತೆ ಯನ್ನು ಬಲಿಷ್ಠಗೊಳಿಸುವುದು ಮಾತ್ರವಲ್ಲ, ಆ ಉತ್ಪನ್ನ ತಯಾರಕರ ಬಾಳಲ್ಲೂ ಬೆಳಕು ಹೊಮ್ಮಿಸಲಿದೆ’ ಎಂದರು.

Advertisement

ಉತ್ತಮ ಸಂದೇಶ ರವಾನೆ
ಸ್ಥಳೀಯ ಉತ್ಪನ್ನಗಳ ಖರೀದಿಗೆ ಪ್ರೋತ್ಸಾಹ ನೀಡುವಂಥ “ವೋಕಲ್‌ ಫಾರ್‌ ಲೋಕಲ್‌’ ಮಂತ್ರದೊಂದಿಗೆ ಈಗ “ದೀಪಾವಳಿ ಗಾಗಿ ಸ್ಥಳೀಯತೆ’ ಎಂಬ ಮಂತ್ರವೂ ಅನು ರಣಿಸತೊಡಗಿದೆ. ಒಬ್ಬ ವ್ಯಕ್ತಿ ಹೆಮ್ಮೆಯಿಂದ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿದಾಗ ಅಂಥ ಉತ್ಪನ್ನಗಳ ಬಗ್ಗೆ ಜನರು ಮಾತನಾಡತೊಡಗುತ್ತಾರೆ, ಹೊಗಳ ತೊಡಗುತ್ತಾರೆ. ಸ್ಥಳೀಯ ವಸ್ತು ಗಳೇ ಚೆನ್ನಾಗಿರುತ್ತವೆ ಎಂಬ ಸಂದೇಶವೂ ರವಾನೆ ಯಾಗುತ್ತದೆ. ಈ ಸಂದೇಶ ಬಹಳ ದೂರದ ವರೆಗೆ ಹೋಗುತ್ತದೆ ಎಂದೂ ಮೋದಿ ಹೇಳಿದ್ದಾರೆ.

ದೀಪವಷ್ಟೇ ಅಲ್ಲ
“ಲೋಕಲ್‌ ಫಾರ್‌ ದೀಪಾವಳಿ’ ಎಂದರೆ ದೀಪಗಳ ಖರೀದಿಯಷ್ಟೇ ಅಲ್ಲ, ಹಬ್ಬಕ್ಕೆ ನೀವು ಬಳಸುವ ಪ್ರತಿಯೊಂದು ವಸ್ತು ವನ್ನೂ ಸ್ಥಳೀಯ ತಯಾರಕರಿಂದಲೇ ಖರೀದಿಸಿ. ಅದರಿಂದ ಅದನ್ನು ಅವರಿಗೂ ಉತ್ತೇಜನ ಸಿಗುತ್ತದೆ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಸ್ಥಳೀಯ ಆರ್ಥಿಕತೆಗೆ “ಹಬ್ಬ’
ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ಹಳಿ ತಪ್ಪಿದೆ. ಪರಿಸರಸ್ನೇಹಿ ಯಾಗಿ ಹಬ್ಬ ಆಚರಿಸುವುದರ ಜತೆಗೆ ಸಣ್ಣ ವ್ಯಾಪಾರಿಗಳ ಕಣ್ಣಲ್ಲಿ “ಸಂಭ್ರಮದ ಬೆಳಕು’ ಮೂಡಿಸಲು ಪ್ರಯತ್ನಿಸಬಹುದು.

ಗೋಮಯ ದೀಪ
ದೇಸೀ ಸಂಸ್ಕೃತಿಯ ಪ್ರತೀಕವಾದ ಗೋಮಯ ದೀಪಗಳಂತಹ ಉತ್ಪನ್ನಗಳ ಖರೀದಿಗೆ ಒಲವು ತೋರಬಹುದು.

Advertisement

ಹೋಂ ಮೇಡ್‌ ಚಾಕೊಲೇಟ್‌
ಈ ದೀಪಾವಳಿಗೆ ನಮ್ಮ ಸುತ್ತಮುತ್ತ ಹೆಂಗಳೆಯರು ಮನೆಯಲ್ಲೇ ತಯಾರಿಸಿದ ಚಾಕೊಲೇಟ್‌ ಕೊಳ್ಳೋಣ. ಬೆಂಗಳೂರು, ಮಂಗಳೂರು, ಕೊಡಗು ಸಹಿತ ವಿವಿಧೆಡೆ ಹೋಂ ಮೇಡ್‌ ಚಾಕೊಲೇಟ್‌ಗಳು ಲಭ್ಯವಿವೆ.

ಆಕಾಶಬುಟ್ಟಿ
ವಿದೇಶಿ ಮೂಲದ ಆಕಾಶಬುಟ್ಟಿಗಳು ಮಾರುಕಟ್ಟೆಯಲ್ಲಿ ಲಭ್ಯ. ಆದರೆ ಇಂತಹ ಉತ್ಪನ್ನಗಳಿಗೆ ಮನಸೋಲದೆ ಸ್ವದೇಶದಲ್ಲೆ ತಯಾರಾದ ಆಕಾಶ ಬುಟ್ಟಿಗಳನ್ನು ಖರೀದಿಸಬಹುದು. ಮನೆಯಲ್ಲಿ ನಾವೇ ತಯಾರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next