Advertisement
ಅವರು ತಮ್ಮ ಮೂವರು ಸಹ ಆಟಗಾರರೊಂದಿಗೆ ಗುವಾಹಟಿಯಿಂದ ಶಿಲ್ಲಾಂಗ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರು ದಿಕ್ಕಿನಿಂದ ಬರುತ್ತಿದ್ದ 12 ಚಕ್ರಗಳ ಟ್ರೈಲರ್ ರಸ್ತೆ ವಿಭಜಕವನ್ನು ದಾಟಿ ಶಾಂಗ್‌ಬಾಂಗ್ಲಾದಲ್ಲಿ ಕಾರಿಗೆ ಢಿಕ್ಕಿ ಹೊಡೆದು ಕಮರಿಗೆ ಧುಮುಕಿತು.
Related Articles
Advertisement
ದೀನದಯಾಳನ್ ಅವರ ತಂದೆ ಮತ್ತು ಅವರ ಇಬ್ಬರು ಕುಟುಂಬ ಸದಸ್ಯರು ಇಂದು ರಾತ್ರಿ ಗುವಾಹಟಿಗೆ ಆಗಮಿಸಲಿದ್ದು, ಅವರ ಶವವನ್ನು ಸೋಮವಾರ ಬೆಳಗ್ಗೆ ಚೆನ್ನೈಗೆ ಕೊಂಡೊಯ್ಯಲಾಗುವುದು.
ದೀನದಯಾಳನ್, ಹಲವಾರು ರಾಷ್ಟ್ರೀಯ ಶ್ರೇಯಾಂಕದ ಪ್ರಶಸ್ತಿಗಳು ಮತ್ತು ಅಂತರರಾಷ್ಟ್ರೀಯ ಪದಕಗಳನ್ನು ಹೊಂದಿರುವ ಭರವಸೆಯ ಆಟಗಾರರಾಗಿದ್ದರು, ಏಪ್ರಿಲ್ 27 ರಿಂದ ಆಸ್ಟ್ರಿಯಾದ ಲಿಂಜ್‌ನಲ್ಲಿ ನಡೆದ WTT ಯುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಬೇಕಾಗಿತ್ತು.
ಅಣ್ಣಾನಗರದಲ್ಲಿರುವ ಕೃಷ್ಣಸ್ವಾಮಿ ಟಿಟಿ ಕ್ಲಬ್‌ನಳ್ಳಿ ತರಬೇತು ಪಡೆದ ಕೆಡೆಟ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದರು.
ಲೊಯೊಲಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಈ ಜನವರಿಯಲ್ಲಿ ಡೆಹ್ರಾ ಡನ್ ರಾಷ್ಟ್ರೀಯ ಶ್ರೇಯಾಂಕ ಟೂರ್ನಮೆಂಟ್‌ನಲ್ಲಿ 19 ವರ್ಷದೊಳಗಿನ ಬಾಲಕರ ಪ್ರಶಸ್ತಿಯನ್ನು ಗೆದ್ದಿದ್ದರು.