Advertisement

ಯೋಜನೆಗಳು ಫಲಾನುಭವಿಗಳ ತಲುಪಿದರಷ್ಟೇ ಉದ್ದೇಶ ಸಫಲ

05:10 PM Mar 11, 2022 | Team Udayavani |

ಬಳ್ಳಾರಿ: ಕಾರ್ಮಿಕ ಇಲಾಖೆ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸಾಂಪ್ರದಾಯಿಕ ಸಪ್ತಾಹ ಮತ್ತು ಪಿಂಚಣಿ ಸಪ್ತಾಹ ಎಂಬ ಘೋಷವಾಕ್ಯದಡಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್‌, ಇ-ಶ್ರಮ್‌ ಹಾಗೂ ವಿವಿಧ ಕಾರ್ಮಿಕ ಇಲಾಖೆಗಳ ಯೋಜನೆಗಳ ಜಾಗೃತಿ ಕಾರ್ಯಕ್ರಮ ಸಿರಗುಪ್ಪ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.

Advertisement

ಸಿವಿಲ್‌ ನ್ಯಾಯಾಧಿಧೀಶ ಸಿ.ಎನ್‌.ಲೋಕೇಶ್‌ ಮಾತನಾಡಿ, ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳು ನಿಗದಿಪಡಿಸಿದ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಅದರ ಉದ್ದೇಶ ಈಡೇರಲು ಸಾಧ್ಯ ಎಂದರು.

ಕಾರ್ಮಿಕ ಇಲಾಖೆ ಅಧಿಕಾರಿ ಮಾರಿಕಾಂಬ ಹುಲಿಕೋಟಿ, ಕಮಲ್‌ ಶಾ ಅಲ್ತಫ್‌ ಅಹಮದ್‌ ಮಾತನಾಡಿ, ಎಲ್ಲ ವಲಯದ ಅಸಂಘಟಿತ ಕಾರ್ಮಿಕರು ನೋಂದಾಯಿಸುವ ಇ-ಶ್ರಮ್‌ ಕಾರ್ಡ್‌ ಹಾಗೂ ಅದರ ಪ್ರಯೋಜನಗಳು, ಸೌಲಭ್ಯಗಳ ಕುರಿತಾಗಿ ವಿವರಿಸಿದರು. ಸಿರುಗುಪ್ಪದ ಕಾರ್ಮಿಕ ನಿರೀಕ್ಷಕ ಸಿ.ಎನ್‌.ರಾಜೇಶ್‌ ಮತ್ತು ವಿವಿಧ ಅಸಂಘಟಿತ ಕಾರ್ಮಿಕರು ಮತ್ತು ಕಾರ್ಮಿಕ ಇಲಾಖೆಯ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next