Advertisement
ವಿಶ್ವ ಪ್ರಸಿದ್ಧಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಹೊಂದಿರುವ ಬೆಂಗಳೂರಿಗೆ ಇವೆರಡೂ ಪಾರ್ಕ್‌ಗಿಂತ ದೊಡ್ಡದಾದ ಮತ್ತೂಂದು ಪಾರ್ಕ್ ನಿರ್ಮಾಣಕ್ಕೆ ತೋಟಗಾರಿಕಾ ಸಚಿವ ಮುನಿರತ್ನ ಮುಂದಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದು, ಅವರು ಪಾರ್ಕ್ ನಿರ್ಮಾಣಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಆದರೆ, ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದ್ದು, ಇಷ್ಟು ವರ್ಷ ಕಳೆದರೂ, ಸ್ವಾತಂತ್ರ್ಯ ನಂತರದ ಯಾವ ಸರ್ಕಾ ರವೂ ಈ ಎರಡೂ ಉದ್ಯಾನಗಳಿಗೆ ಪರ್ಯಾಯ ಅಥವಾ ಇವುಗಳಿ ಗಿಂತಲೂ ಹೆಚ್ಚು ಆಕರ್ಷಣಿಯ ಉದ್ಯಾ ನವನವನ್ನು ಯಾರೂ ನಿರ್ಮಾಣ ಮಾಡಿಲ್ಲ ಎಂಬ ನೋವು ಮತ್ತು ಬೇಸರ ಹಾಲಿ ತೋಟಗಾರಿಕಾ ಸಚಿವ ಮುನಿರತ್ನ ಅವರಿಗೆ ಕಾಡುತ್ತಿದೆಯಂತೆ.
ಬೆಂಗಳೂರು ಉತ್ತರ ಭಾಗದಲ್ಲಿ ಪಾರ್ಕ್: ಅದೇ ಕಾರಣಕ್ಕೆ ಎರಡೂ ಪಾರ್ಕ್ ಗಳಿಗಿಂತಲೂ ದೊಡ್ಡದಾದ ಕನಿಷ್ಠ ಒಂದು ಎಕರೆ ಪ್ರದೇಶವಾದರೂ ಹೆಚ್ಚಿಗೆ ವಿಸ್ತೀರ್ಣ ಹೊಂದಿರುವ ಉದ್ಯಾನವನವನ್ನು ಬೆಂಗಳೂರಿನ ಉತ್ತರ ಭಾಗದಲ್ಲಿ ನಿರ್ಮಾಣ ತೋಟಗಾರಿಕಾ ಸಚಿವ ಮುನಿರತ್ನ ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ಬೆಂಗಳೂರು ಉತ್ತರ ಭಾಗದಲ್ಲಿ ಕನಿಷ್ಠ 240 ಎಕರೆ ಪ್ರದೇಶಕ್ಕಿಂತಲೂ ಹೆಚ್ಚಿರುವ ಸರ್ಕಾರಿ ಗೋಮಾಳ ಅಥವಾ ಸರ್ಕಾರದ ಇತರ ಇಲಾಖೆ ವ್ಯಾಪ್ತಿಯಲ್ಲಿರುವ ಜಮೀನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಉತ್ತರ ಭಾಗದಲ್ಲಿರುವ ಯಲಹಂಕ, ನಂದಿಬೆಟ್ಟದ ತಪ್ಪಲು ಸೇರಿದಂತೆ ನಾಲ್ಕು ಕಡೆಗಳಲ್ಲಿ ಉದ್ಯಾನವನ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ ಎಂದು ತಿಳಿದು ಬಂದಿದ್ದು, ಒಂದೆಡೆ ಅರಣ್ಯ ಇಲಾಖೆಗೆ ಸೇರಿದ ಸುಮಾರು 600 ಎಕರೆ ಪ್ರದೇಶ ಲಭ್ಯವಿದೆ ಎಂದು ತಿಳಿದು ಬಂದಿದ್ದು, ಅದರಲ್ಲಿ ಸುಮಾರು 300 ಎಕರೆ ಪ್ರದೇಶವನ್ನು ಪಾರ್ಕ್ ನಿರ್ಮಾಣಕ್ಕೆ ಬಳಸಿಕೊಂಡು, ಅದಕ್ಕೆ ಪರ್ಯಾಯವಾಗಿ ಅರಣ್ಯ ಇಲಾಖೆಯಿಂದ ಪಡೆದುಕೊಂಡ ಜಮೀನಿನ ಎರಡ ರಷ್ಟು ಅಂದರೆ ಸುಮಾರು 600 ಎಕರೆ ಸರ್ಕಾರಿ ಜಮೀ ನನ್ನು ಅರಣ್ಯ
ಇಲಾಖೆಗೆ ಬಿಟ್ಟು ಕೊಡುವ ಬಗ್ಗೆಯೂ ತೋಟಗಾರಿಕೆ ಇಲಾಖೆ ಆಲೋಚನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತಂತೆ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು?
ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಅಜರಾಮರವಾಗಿಸಲು ಹೊಸದಾಗಿ ನಿರ್ಮಾಣ ಮಾಡುವ ಪಾರ್ಕ್‌ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್ ಎಂದು ನಾಮಕರಣ ಮಾಡಲು ಸಚಿವ ಮುನಿರತ್ನ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಎರಡು ಪಾರ್ಕ್‌ಗಳು ನಿರ್ಮಾಣವಾಗಿವೆ. ಆದರೆ, ಸ್ವಾತಂತ್ರ್ಯ ಬಂದ ನಂತರ ನಮ್ಮದು ಎಂದು ಹೇಳಿಕೊಳ್ಳಲು ಯಾವ ಸರ್ಕಾರವೂ ಪಾರ್ಕ್ ನಿರ್ಮಾಣ ಮಾಡಿಲ್ಲ. ಹೀಗಾಗಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ಗಿಂತ ದೊಡ್ಡದಾದ ಪಾರ್ಕ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ.
ಮುನಿರತ್ನ, ತೋಟಗಾರಿಕಾ ಸಚಿವ