ಕಲಬುರಗಿ: ವೃತ್ತ ಪತ್ರಿಕೆ ಹಾಳೆಯಲ್ಲಿ ಆಹಾರ ಕಟ್ಟಿ ಕೊಡುವುದು ಮತ್ತು ಅದರಲ್ಲಿಯೇ ಆಹಾರ ಹಾಕಿಕೊಂಡು ಉಣ್ಣುವುದು ಸೇರಿದಂತೆ ಇತರೆ ಬಳಕೆಗೆ ಪೇಪರ್ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ ಪ್ರಾಧಿಕಾರದ ಅಂಕಿತ ಅಧಿಕಾರಿ ಆರ್.ಎಸ್. ಬಿರಾದಾರ ಹೇಳಿದ್ದಾರೆ.
ನಗರದ ಹಲವು ಹೋಟೆಲ್ ಮತ್ತು ಅಂಗಡಿಗಳಿಗೆ ಗುರುವಾರ ಭೇಟಿ ನೀಡಿ ಜನ ಸಾಮಾನ್ಯರಿಗೆ ನ್ಯೂಸ್ ಪೇಪರ್‌ನಲ್ಲಿ ಆಹಾರ ಪೊಟ್ಟಣದಲ್ಲಿ ಕಟ್ಟಿ ಕೊಡುವುದು ಸೇರಿದಂತೆ ಇತರೆ ಬಳಕೆಗೆ ಪೇಪರ್ ನಿಷೇಧ ಮಾಡಲಾಗಿದೆ. ಕೂಡಲೇ ನಿಲ್ಲಿಸಬೇಕು ಎಂದು ಜಾಗೃತಿ ಮೂಡಿಸಿದರು.
ನ್ಯೂಸ್ ಪೇಪರಿನ ಮಸಿ ಮತ್ತು ಪೇಪರಿಗೆ ಅಂಟಿಕೊಂಡಿರುವ ವಿಷಕಾರಿ ಮಸಿ ಆಹಾರ ಪದಾರ್ಥ ತಿಂದರೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವುದು ಎಂದು ಹೇಳಿದರು. ಸುಣ್ಣದ ಪ್ಯಾಕ್ ಮತ್ತು ಸುಣ್ಣದ ಟ್ಯೂಬ್ ಮಾರಾಟ ಮಾಡುವುದು ಹಾಗೂ ಮಶಿ ಅಳಿಸುವ ದ್ರವ ಮತ್ತು ಥಿನ್ನರ್, ಉಗುರು ಪಾಲೀಸ್ ರಾಜ್ಯಾದ್ಯಂತ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಆದ್ದರಿಂದ ಜಿಲ್ಲೆಯಲ್ಲಿ ಇದೆಲ್ಲವನ್ನು ಮಾರಾಟ ಮಾಡುವ ಮತ್ತು ಹೋಟೆಲ್, ಇತರೆ ಅಂಗಡಿಗಳು, ಬಂಡಿಗಳಲ್ಲಿ ವ್ಯಾಪಾರ ಮಾಡುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮನವರಿಕೆ ಮಾಡಿದರು. ಸುಣ್ಣದ ಪ್ಯಾಕೇಟ್ ಒಡೆದಾಗ ಕಣ್ಣಿನಲ್ಲಿ ಬೀಳುವ ಸಂಭವವಿದ್ದು, ಮಕ್ಕಳು ಮತ್ತು ಸುಣ್ಣವನ್ನು ಉಪಯೋಗಿಸುತ್ತಿರುವ ಜನಸಮಾನ್ಯರಿಗೆ ಸುಣ್ಣದ ಟ್ಯೂಬ್ ಮತ್ತು ಸುಣ್ಣದ ಪ್ಯಾಕೇಟ್ ಮಾರಾಟ ಮಾಡದಂತೆಯೂ ನಿಷೇಧಿಸಿದೆ.
ಮಷಿ ಅಳಿಸುವ ದ್ರವ ಮತ್ತು ಉಗುರು ಪಾಲೀಸ್ ರಿಮೂವರ್ ಮುಂತಾದವುಗಳನ್ನು ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರು ಬಳಸುವುದರಿಂದ ಮಕ್ಕಳ, ಮಹಿಳೆಯರ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಇಷ್ಟು ಮಾಹಿತಿ ಮತ್ತು ನಿಷೇಧದ ಬಳಿಕವೂ ಯಾರಾದರೂ ಪೇಪರ್ ಬಳಕೆ ಮತ್ತು ಸುಣ್ಣದ ಟ್ಯೂಬ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ಬಳಕೆ ಮಾಡುತ್ತಿದ್ದರೆ ಸಾರ್ವಜನಿಕರು ಈ ಕುರಿತು ಅಂಕಿತ ಅಧಿಕಾರಿಗಳು ಆಹಾರ ಸುರûಾತಾ ಮತ್ತು ಗುಣಮಟ್ಟ ಪ್ರಾಧಿಧಿಕಾರ, ಹಳೆ ಎಸ್.ಪಿ. ಕಚೇರಿ ಹಿಂಭಾಗ ಕಲಬುರಗಿ ಕಚೇರಿಗೆ ದೂರು ಸಲ್ಲಿಸಬಹುದು ಎಂದು ಕೋರಿದ್ದಾರೆ.