Advertisement

ಕಳಪೆ ಬಿತ್ತನೆ ಬೀಜ ಮಾರಾಟ ಕಂಡರೆ ಕ್ರಮ

06:01 PM Jul 12, 2022 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಕೇಂದ್ರಗಳನ್ನು ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಿ ಕಳಪೆ ಮಾರಾಟಕಂಡು ಬಂದಲ್ಲಿ ನಿಯಮಾನುಸಾರ ಕ್ರಮಕೈಗೊಂಡು ಜಿಲ್ಲಾಡಳಿತಕ್ಕೆ ವರದಿ ನೀಡುವಂತೆಜಿಲ್ಲಾಧಿಕಾರಿ ಎಸ್‌.ಅಶ್ವತಿ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀ ಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಫ್‌ಐಆರ್‌ ದಾಖಲಿಸಿ: ತಾಲೂಕು ಮಟ್ಟದ ಕೃಷಿ ಅಧಿಕಾರಿಗಳು ಚುರುಕಾಗಿ ಕೆಲಸ ನಿರ್ವಹಿಸಬೇಕು.ಪ್ರತಿ ಮಾಹೆ ಗುರಿ ನಿಗದಿಪಡಿಸಿಕೊಂಡು ಮಾರಾಟಕೇಂದ್ರಗಳ ಪರಿಶೀಲನೆ ನಡೆಸಬೇಕು. ಯಾವುದೇ ಅಕ್ರಮ ಕಂಡು ಬಂದರೆ ತಕ್ಷಣ ಎಫ್‌ಐಆರ್‌ ದಾಖಲು ಮಾಡಿ ಎಂದರು.

ತೊಂದರೆಯಾಗದಂತೆ ಕ್ರಮ ವಹಿಸಿ: ಜಿಲ್ಲೆಯಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಬಿತ್ತನೆ ಬೀಜದ ಅಗತ್ಯ ದಾಸ್ತಾನು ಮಾಡಿ ಸರಿಯಾದ ಸಮಯಕ್ಕೆ ರೈತರಿಗೆ ದೊರೆಯಬೇಕು. ವಿವಿಧ ರೀತಿಯ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬೇಡಿಕೆ, ಬಫರ್‌ನಲ್ಲಿರುವ ದಾಸ್ತಾನು, ವಿವಿಧ ಮಾರಾಟದ ಹಂತದಲ್ಲಿರುವರಸಗೊಬ್ಬರದ ದಾಸ್ತಾನಿನ ವಿವರವನ್ನು ನಿಗದಿತವಾಗಿ ಪರಿಶೀಲಿಸಿಕೊಳ್ಳಬೇಕು ಎಂದರು.

ಬೆಳೆ ವಿಮೆಗೆ ನೋಂದಾಯಿಸಲು ಸೂಚನೆ: ಮುಂಗಾರು ಹಂಗಾಮಿನಲ್ಲಿ ಅಧಿಸೂಚನೆ ಘಟಕಗಳಲ್ಲಿ ಬೆಳೆ ವಿಮೆ ನೋಂದಾಯಿಸಲು ಅವಕಾಶವಿದ್ದು, ರೈತರುಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿ ನೈಸರ್ಗಿಕ ವೈಪರೀತ್ಯಗಳ ವಿರುದ್ಧ ತಮ್ಮ ಕೃಷಿಯನ್ನು ಸುರಕ್ಷಿತಪಡಿಸಿಕೊಳ್ಳಿ ಎಂದು ತಿಳಿಸಿದರು.

Advertisement

ಅರ್ಜಿ ಸಲ್ಲಿಕೆರೆ ಜು.31ರಂದು ಕೊನೇ ದಿನ: ಟೊಮೆಟೋ, ಎಲೆ ಕೋಸು ಮತ್ತು ಅಲಸಂದೆ (ಮಳೆಆಶ್ರಿತ) ಬೆಳೆಗಳಿಗೆ ಜು.15 ವಿಮೆ ಮಾಡಿಸಲು ಕೊನೇ ದಿನವಾಗಿದೆ. ಭತ್ತ (ನೀರಾವರಿ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ) ಬೆಳೆಗಳಿಗೆ ಆ.16 ಮತ್ತು ನೆಲಗಡಲೆ(ಮಳೆ ಆಶ್ರಿತ) ಬೆಳೆಗೆ ಜು.31 ವಿಮೆ ಮಾಡಿಸಲು ಕೊನೇ ದಿನವಾಗಿದೆ ಎಂದರು.

ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಿ: 2022-23ನೇ ಸಾಲಿನ ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆಯ ಮುಂಗಾರು ಹಂಗಾಮಿನಲ್ಲಿ 17970 ರೈತರು ನೋಂದಣಿಯಾಗಿದೆ. ರೈತರಿಗೆ ಹೆಚ್ಚಿನ ಮಾಹಿತಿ ನೀಡಿ ವಿಮೆ ಮಾಡುವಂತೆ ಜಾಗೃತಿ ಮೂಡಿಸಬೇಕು. ರೈತರಿಗೆ ವಿಮೆಯಿಂದ ದೊರಕಿರುವ ಸೌಲಭ್ಯಗಳ ಬಗ್ಗೆ ರೈತರಿಗೆ ತಿಳಿಸಿ ಎಂದರು.

ಬಿತ್ತನೆ ಬೀಜ ವಿತರಣೆ: ಜಂಟಿ ಕೃಷಿ ನಿರ್ದೇಶಕ ಅಶೋಕ್‌ ಮಾತನಾಡಿ, ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 2000 ಕ್ವಿಂಟಲ್‌ ರಾಗಿ, 15000 ಕ್ವಿಂಟಲ್‌ ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, ರಾಗಿಯನ್ನು ರೈತ ಸಂಪರ್ಕ ಕೇಂದ್ರದ ಮೂಲಕ ಹಾಗೂ ಭತ್ತವನ್ನು ವಿವಿಧ ಸಹಕಾರ ಸಂಘಗಳ ಮೂಲಕ ವಿತರಣೆ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ರಸಗೊಬ್ಬರ ಕೊರತೆ ಇಲ್ಲ: ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೂ ವಿವಿಧ ರೀತಿಯ ರಸಗೊಬ್ಬರ ಒಳಗೊಂಡಂತೆ 52491 ಮೆಟ್ರಿಕ್‌ ಟನ್‌ ಬೇಡಿಕೆಯಿದ್ದು, 59876 ಮೆಟ್ರಿಕ್‌ ಟನ್‌ ಸರಬರಾಜು ಮಾಡಲಾಗಿದೆ. 26209 ಮೆಟ್ರಿಕ್‌ ಟನ್‌ ವಿತರಣೆ ಮಾಡಲಾಗಿದ್ದು, 33667 ಮೆಟ್ರಿಕ ಟನ್‌ ರಸಗೊಬ್ಬರ ಕಾಪು ದಾಸ್ತಾನು ಸೇರಿ ವಿವಿಧ ಹಂತದಲ್ಲಿ ಲಭ್ಯವಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವ್ಯ ಪ್ರಭು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ್‌, ಡಿಡಿಪಿಐ ಜವರೇಗೌಡ, ಲೀಡ್‌ ಬ್ಯಾಂಕ್‌ ಮ್ಯನೇಜರ್‌ ದೀಪಕ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸೌಮ್ಯಶ್ರೀ, ಮಾಲತಿ, ಪ್ರಿಯ ದರ್ಶಿನಿ, ಮಮತಾ ಮತ್ತಿತರರು ಉಪಸ್ಥಿತರಿದ್ದರು.

ಗುಣಮಟ್ಟ  ಪರಿಶೀಲಿಸಿ: ರಸಗೊಬ್ಬರ, ಬಿತ್ತನೆ ಬೀಜ, ಬಯೋ ಪೆಸ್ಟಿಸೈಡ್‌,= ಸಾವಯವ ಗೊಬ್ಬರ ಸೇರಿದಂತೆ ಅವುಗಳ ಗುಣಮಟ್ಟ ಪರಿಶೀಲಿಸಲು ಗುರಿ ನಿಗದಿ ಮಾಡಿದೆ. ಗುರಿಗೆ ಮಾತ್ರ ಸೀಮಿತಮಾಡಿಕೊಳ್ಳದೇ ಹೆಚ್ಚು ಸ್ಯಾಂಪಲ್‌ ಸಂಗ್ರಹಿಸಿ ಗುಣಮಟ್ಟದ ಪರೀಕ್ಷೆ ಮಾಡಿಸಿ, ಇದರಿಂದ ಬಹಳಷ್ಟು ತೊಂದರೆಗಳನ್ನು ಪ್ರಾಥಮಿಕ ಹಂತದಲ್ಲಿ ಪರಿಹರಿಸಬಹುದು ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಸಲಹೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next