Advertisement
ನಗರದಲ್ಲಿ ತಾಲೂಕು ಪಂಚಾಯ್ತಿಯಲ್ಲಿ ತಾಪಂ ಆಡಳಿತಾಧಿಕಾರಿ ಪಿ.ರಾಧ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಭಯ ಅಧಿಕಾರಿಗಳು ಮಾತನಾಡಿದರು.
Related Articles
Advertisement
ನ್ಯಾನೋ ಯೂರಿಯಾ ಬಳಕೆ ಬಗ್ಗೆ ರೈತರಿಗೆ ಅರಿವು: ಮುಂಗಾರು ಮುನ್ನವೇ ತಾಲೂಕಿಗೆ ಅಗತ್ಯವಿರುವ ರಸಗೊಬ್ಬರವನ್ನು ದಾಸ್ತಾನು ಇರಿಸಲಾಗಿದೆ. ಅಗತ್ಯ ಪ್ರಮಾಣದಲ್ಲಿ ಎಲ್ಲಾರಸಗೊಬ್ಬರವನ್ನು ದಾಸ್ತಾನಿರಿಸಿದ್ದು, ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಹಿಪ್ಪು ನೇರಳೆ,ಬೇಬಿ ಕಾರ್ನ್ ಬೆಳೆಗಳಿಗೆ ಯೂರಿಯಾದಅಗತ್ಯವಿದೆ. ಈ ಬೆಳೆಗಳಿಗೆ ಯೂರಿಯಾಕೊರತೆ ನೀಗಿಸುವ ಉದ್ದೇಶದಿಂದ ನ್ಯಾನೋಯೂರಿಯಾ ಬಳಕೆ ಬಗ್ಗೆ ರೈತರಿಗೆ ಅರಿವುಮೂಡಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ರಸ್ತೆ ಗುಂಡಿಗಳ ಬಗ್ಗೆ ಚರ್ಚೆ: ಪಿ.ಡಬ್ಲ್ಯು.ಡಿ ಇಲಾಖೆಯ ಇಂಜಿನಿಯರ್ ಅವರು ತಮ್ಮಇಲಾಖೆಯ ಪ್ರಗತಿಯ ಬಗ್ಗೆ ಅಂಕಿ- ಅಂಶಗಳನ್ನು ಮಂಡಿಸಿದಾಗ, ತಾಲೂಕಿನ ರಸ್ತೆಗಳಲ್ಲಿರುವ ಗುಂಡಿಗಳಿಂದಾಗಿ ಅಪಘಾತ ಸಂಭವಿಸಿದರೆ, ಯಾರನ್ನು ಹೊಣೆ ಮಾಡಬೇಕು ಎಂಬವಿಷಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ರಸ್ತೆ ಗುಂಡಿಯಿಂದ ಸಂಭವಿಸುವಅಪಘಾತಕ್ಕೆ ಇಲಾಖೆಯನ್ನೇ ಹೊಣೆಮಾಡಬಹುದೇ ಎಂದು ಸಭೆಯಲ್ಲಿದ್ದ ಕೆಡಿಪಿ ಸದಸ್ಯರು ಪ್ರಶ್ನಿಸಿದರು.
ಗುಂಡಿಗಳಿಂದಾಗಿ ಸಂಭವಿಸುವ ಅಪಘಾತಗಳು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿಕೊಳ್ಳುವುದಿಲ್ಲ ಎಂದು ಕೆಲವರು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿ ಕ್ರಿಯಿಸಿದ ತಹಶೀಲ್ದಾರರು ದೂರು ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದರು. ತಮ್ಮ ಇಲಾಖೆಗೆ ಹೊಣೆ ಹೊರಿಸುವುದನ್ನುನಿರಾಕರಿಸಿದ ಪಿಡಬ್ಲ್ಯುಡಿ ಇಂಜಿನಿಯರ್‌ಪ್ರದೀಪ್, ನಮ್ಮಿಂದ ಗುಂಡಿ ನಿರ್ಮಾಣವಾಗುವುದಿಲ್ಲ, ಮಳೆಯಿಂದಾಗಿ ನಿರ್ಮಾಣವಾಗುತ್ತಿದೆ. ಇಲಾಖೆಗೆ ಸಾಕಷ್ಟು ಅನುದಾನ ಇಲ್ಲದ ಕಾರಣ ಗುಂಡಿಗಳನ್ನುಮುಚ್ಚಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ
ಸರ್ಕಾರವೂ ಹೇಳುತ್ತದೆ ಯಾದರೂ ಗುಂಡಿಗೆಇಲಾಖೆಯೇ ಪೂರ್ಣ ಜವಾಬ್ದಾರಿಯಲ್ಲ ಎಂದು ಸಮಜಾಯಿಷಿ ನೀಡಿದರು.
ಈಗಾಗಲೇ ತಾಲೂಕಿನಲ್ಲಿ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ. ಕಾಂಕ್ರೀಟ್ ಹಾಕಿ ರಸ್ತೆ ಗುಂಡಿಯನ್ನು ಮುಚ್ಚುವ ಪ್ರಯತ್ನವನ್ನು ಮಾಡಲಾಗುತ್ತಿದೆ.ಮಳೆಯ ಕಾರಣದಿಂದ ರಸ್ತೆ ಗುಂಡಿಯನ್ನುಮುಚ್ಚಲು ಸಮಸ್ಯೆಯಾಗಿದೆ. ಮಳೆ ನಿಂತಬಳಿಕ ರಸ್ತೆಗುಂಡಿಯನ್ನು ಮುಚ್ಚಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕೆಡಿಪಿ ಸಮಿತಿ ಸದಸ್ಯರಾದ ಶಭೀರ್‌ವುಲ್ಲಾಬೇಗ್,ಯೋಗೀಶ್, ತಾರಕೇಶ್, ರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.