Advertisement
ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ಜನರನ್ನು ನಾಳೆ ಬನ್ನಿ, ಇವತ್ತು ಬನ್ನಿ ಎಂದು ಸತಾಯಿಸದೇ ಯಾವ ಇಲಾಖೆಯಲ್ಲಿ ಕೆಲಸ ಆಗಬೇಕು ಎಂಬುದನ್ನು ತಿಳಿಸಿ. ಜಿಲ್ಲಾಧಿಕಾ ರಿಗಳ ಹತ್ತಿರ ಹೋಗಬೇಕು ಎಂದು ಹೇಳಬೇಡಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದರೆ ತಾಲೂಕು ಅಭಿವೃದ್ಧಿ ಸಾಧ್ಯ. ತಾಲೂಕಿನಲ್ಲಿ ಯಾವುದೇ ಸರ್ಕಾರದ ಸೌಲಭ್ಯ ಒದಗಿಸುವ ಮುನ್ನ ನಮ್ಮ ಗಮನಕ್ಕೆ ತನ್ನಿ. ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪುವಂತೆ ಆಗಬೇಕು. ಅಂಗನವಾಡಿಮತ್ತು ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಜಾಗದಕೊರತೆಯಿದ್ದರೆ ತಕ್ಷಣ ಜಾಗ ಗುರ್ತಿಸಬೇಕು.ವಿಜಯಪುರ ಮತ್ತು ದೇವನಹಳ್ಳಿ ಪಟ್ಟಣಗಳಲ್ಲಿ ಅಂಗನವಾಡಿಗಳಿಗೆ ಜಾಗದ ಕೊರತೆಯಿದ್ದು ಕೂಡಲೇ ಪುರಸಭಾ ಮುಖ್ಯಾಧಿಕಾರಿಗಳು ಜಾಗವನ್ನು ಗುರ್ತಿಸಿ ಸಂಬಂಧಪಟ್ಟ ಇಲಾಖೆಗೆ ನೀಡಬೇಕು ಎಂದು ಹೇಳಿದರು.
Related Articles
Advertisement
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ಸ್ ಪೆಕ್ಟರ್ ಮುತ್ತುರಾಜ್ ಮಾತನಾಡಿ, ಸುಮಾರು ಹತ್ತು ಹಳ್ಳಿಯ ಜನರಿಗೆ ವಿಮಾನ ನಿಲ್ದಾಣಕ್ಕೆ ಬರಲು ಕಷ್ಟವಾಗುತ್ತಿದೆ. ಬಸ್ ಸೌಲಭ್ಯ, ಹಾಗೂ ಇತರೆ ಸೌಲಭ್ಯಗಳು ಇಲ್ಲ. ವಿಮಾನ ನಿಲ್ದಾಣದಲ್ಲಿಯೇ ಪೋಲೀಸ್ ಠಾಣೆ ಇದ್ದರೆ ಅನುಕೂಲವಾಗುತ್ತದೆ. ಹಲವಾರು ಕೆಲಸಕಾರ್ಯಗಳು ಹೆಚ್ಚಿರುತ್ತದೆ. ಕನ್ನಮಂಗಲ ಹತ್ತಿರ ಔಟ್ ಪೊಲೀಸ್ ಠಾಣೆ ಮಾಡಿದ ರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ.ಶೇ.75ರಷ್ಟು ಪ್ರಕರಣಗಳು ವಿಮಾನ ನಿಲ್ದಾಣದಿಂದಬರಲಿದೆ. ಶೇ.40ರಷ್ಟು ಪ್ರಕರಣಗಳು ಗ್ರಾಮೀಣಪ್ರದೇಶಗಳಿಂದ ಬರಲಿದೆ ಎಂದು ಹೇಳಿದರು.
ನೀರು ಪೂರೈಕೆಗೆ ಬೋರ್‌ವೆಲ್: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ಸೋಮಶೇಖರ್ ಮಾತನಾಡಿ, ತಾಲೂಕಿನಲ್ಲಿ ಎರಡು ಕಡೆ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆರು ಕಡೆಗಳಲ್ಲಿ ಖಾಸಗಿ ಬೋರ್‌ವೆಲ್‌ಗಳ ಮೂಲಕನೀರನ್ನು ನೀಡುತ್ತಿದ್ದೇವೆ. ಬೂದಿಗೆರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದ ಬೋರ್‌ವೆಲ್‌ಗಳನ್ನು ಹಾಕಿಸಿ ನೀರನ್ನು ಒದಗಿಸಲಾಗುತ್ತಿದೆ. ಆದರೂ ಸಹ ಸಮಸ್ಯೆ ಬರುತ್ತಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ತಹಶೀಲ್ದಾರ್ ಶಿವರಾಜ್, ತಾಪಂಇಒ ಎಚ್.ಡಿ.ವಸಂತಕುಮಾರ್, ಕೆಡಿಪಿ ಸದಸ್ಯರಾದ ನಾಗವೇಣಿ, ಭಗವಾನ್, ಗೋವಿಂದರಾಜು, ಮುನಿಕೃಷ್ಣಪ್ಪ, ತಾಪಂ ಸಹಾಯಕ ನಿರ್ದೇಶಕ ಸುನಿಲ್, ತಾಲೂಕು ಮಟ್ಟದ ಅಧಿಕಾರಿಗಳು, ಇದ್ದರು.