Advertisement

ಬಿಳಿಗಿರಿರಂಗನಬೆಟ್ಟದ ನೂತನ ತೇರಿಗೆ ಪೂಜೆ

03:06 PM Apr 16, 2021 | Team Udayavani |

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ನೂತನ ದೊಡ್ಡ ತೇರಿಗೆಪಟ್ಟಣದ ಭೂಲಕ್ಷ್ಮೀ ವರಾಹಸ್ವಾಮಿದೇಗುಲದ ಬಳಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.ಪ್ರಧಾನ ಶಿಲ್ಪಿ ಬಸವರಾಜ್‌ ಬಡಿಗೇರ ಹಾಗೂ 15 ಕ್ಕೂ ಹೆಚ್ಚು ಸಹ ಶಿಲ್ಪಿಗಳಿಂದ 16ಅಡಿ ಎತ್ತರ, 14 ಅಡಿ ಉದ್ದದ ರಥದನಿರ್ಮಾಣದ ಕೆಲಸವನ್ನು 1 ವರ್ಷದಿಂದ ಬೆಂಗಳೂರಿನಲ್ಲಿ ಆರಂಭಿಸಿ ಪೂಣ ಗೊಳಿಸಲಾಗಿತ್ತು.

Advertisement

ಗುರುವಾರ ಬೆಳಿಗ್ಗೆ ಯಳಂದೂರು ಪಟ್ಟಣಕ್ಕೆ ಲಾರಿಗಳಲ್ಲಿ ಇದನ್ನು ತರಲಾಯಿತು. ಭೂಲಕ್ಷ್ಮೀ ವರಾಹಸ್ವಾಮಿ ದೇಗುಲದ ಬಳಿಮಂಗಳವಾದ್ಯದ ಸಮೇತ ಪೂಜೆಯನ್ನು ಸಲ್ಲಿಸಲಾಯಿತು. ಕೆಲ ಕಾಲ ರಥವನ್ನುಹೊತ್ತು ತಂದಿದ್ದ ಲಾರಿಗಳು ಇಲ್ಲೇ ನಿಂತಿದ್ದವು.ಸಾರ್ವಜನಿಕರು ರಥವನ್ನು ವೀಕ್ಷಿಸಿ ಇದನ್ನುಕಣ್ತುಂಬಿಕೊಂಡು ಭಕ್ತಿಯಿಂದ ನಮಿಸಿದರು.ನಂತರ ಪಟ್ಟಣದ ಬಳೇಪೇಟೆಯವರೆಗೂ ಮಂಗಳವಾದ್ಯಗಳ ಸಮೇತ ಮೆರವಣಿಗೆಮಾಡಿ ಇದಕ್ಕೆ ಬೀಳ್ಕೊಡಲಾಯಿತು.

ಮೂರು ಭಾಗಗಳಾಗಿರುವ ರಥವನ್ನುಜೋಡಿಸುವ ಕೆಲಸ ಅಂದಾಜು 8 ದಿನಗಳಕಾಲ ನಡೆಯುತ್ತದೆ. ಏ. 26 ರಂದು ದೊಡ್ಡರಥೋತ್ಸವದ ದಿನಾಂಕವಾಗಿದೆ. ಇದರೊಳಗೆಇದನ್ನು ಪೂರ್ಣಗೊಳಿಸಲಾಗುವುದು ಎಂದುಮಾಜಿ ಧರ್ಮದರ್ಶಿ ಎನ್‌. ದೊರೆಸ್ವಾಮಿಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next