ತುಮಕೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಆದರ್ಶ ವನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸಮಾಜದಲ್ಲಿರುವ ಅಸಮತೋಲನವನ್ನು ನಿವಾರಿಸಲು ಮುಂದಾ ಗಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇ ಡ್ಕರ್130ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತ ನಾಡಿದಅವರು, ಅಂಬೇಡ್ಕರ್ ಬರೆದ ಸಂವಿಧಾನದಿಂದ ದೇಶದಪ್ರತಿಯೊಬ್ಬರಿಗೂ ಸ್ಥಾನಮಾನ ದೊರೆತಿದೆ.
ಇದಕ್ಕೆ ಪ್ರಮುಖಕಾರಣ ಅಂಬೇಡ್ಕರ್. ತುಳಿತಕ್ಕೆ ಒಳಪಟ್ಟ ಜನಾಂಗಸಮಾಜದ ಮುಖ್ಯವಾಹಿನಿಗೆ ಬರಲು ಅಂಬೇ ಡ್ಕರ್‌ಸಂವಿಧಾನವೇ ಬಹುಮುಖ್ಯ ಕಾರಣವಾಗಿದೆ. ಹಾಗಾಗಿಅಂಬೇಡ್ಕರ್‌ರವರ ತತ್ವಾದರ್ಶ, ಸಿದ್ಧಾಂತವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.ಸಮಾನತೆ ಅಗತ್ಯ:ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ಸರ್ಕಾರ ಗಳುನಿರ್ಧಾರ ತೆಗೆದುಕೊಳ್ಳುವಂತಹ ಮಹತ್ವದ ಕೆಲಸ ಗಳುಆಗುತ್ತಿವೆ. ಪ್ರಜಾಪ್ರಭುತ್ವ ನಿಲ್ಲಬೇಕಾದರೆ ಸಮಾ ನತೆಅಗತ್ಯವಿದೆ.
ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕಿದೆ ಎಂಬುದನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದಾರೆ ಎಂದರು.ಅಂಬೇಡ್ಕರ್‌ರವರಿಗೆ ಇದ್ದ ಅಗಾಧವಾದ ಜ್ಞಾನದಿಂದಸಂವಿಧಾನ ರಚಿಸುವಂತಹ ಅತ್ಯಂತ ಮುಖ್ಯ ಹುದ್ದೆನಿಭಾಯಿಸುವಂತಹ ಅವಕಾಶ ದೊರೆಯಿತು. 1947ರನಂತರ ಅತ್ಯಂತ ಪ್ರಭಾವಿತ ವ್ಯಕ್ತಿ ಯಾರು ಎಂದು ಸರ್ವೆಮಾಡಿದ ಸಂದರ್ಭದಲ್ಲಿ ಅತ್ಯಂತ ಪ್ರಭಾವಿತರು ಎಂಬಸಾಲಿನಲ್ಲಿ ನಿಂತವರು ಅಂಬೇಡ್ಕರ್ ಅವರು. ಇವರನ್ನುಗೌರವಿಸದಂತಹ ವ್ಯಕ್ತಿಗಳೇ ಇಲ್ಲ ಎಂದರು.ಮೇಯರ್ ಬಿ.ಜಿ. ಕೃಷ್ಣಪ್ಪ, ಜಿ.ಪಂ. ಉಪಾಧ್ಯಕ್ಷೆಶಾರದಾ, ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ. ಜಿ.ಪಂ.ಸಿಇಒ ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ,ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್‌ಕುಮಾರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕಿ ಪ್ರೇಮ, ಡಿಎಚ್‌ಒ ಡಾ.ಎಂ.ಬಿ. ನಾಗೇಂದ್ರಪ್ಪ,ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.