Advertisement

ಕುದೂರಿನಲ್ಲಿ ಕೋವಿಡ್ ತಡೆಗೆ ಅಜ್ಜಿಹಬ್ಬ ಆಚರಣೆ

03:44 PM Apr 29, 2021 | Team Udayavani |

ಕುದೂರು: ಗ್ರಾಮಕ್ಕೆ ಕೊರೊನಾ ಸೋಂಕುಹರಡದಂತೆ ಕುದೂರಿನ ಎಸ್‌.ಸಿ.ಕಾಲೋನಿಯಗ್ರಾಮಸ್ಥರೆಲ್ಲರೂ ಸೇರಿ ಬುದವಾರ ಅಜ್ಜಿ ಹಬ್ಬಆಚರಣೆ ಮಾಡಿ ವಿವಿಧ ಬಗೆಯ ತಿನುಸುಗಳನ್ನುಬೇವಿನ ಮರದ ಸುತ್ತಲೂ ಎಡೆ ಹಾಕಿದರು.ಗ್ರಾಮದ ಎಸ್‌.ಸಿ.ಕಾಲೋನಿಯಲ್ಲಿ ಅಜ್ಜಿ ಹಬ್ಬಆಚರಿಸಿ ಹೂರ ವಲಯದಬೇವಿನ ಮರದ ಸುತ್ತಲೂಹೋಳಿಗೆ, ಮೊಸರನ್ನ,ಒಂದು ಕುಡಿಕೆ, ದೀಪಾ,ಬಳೆ ಬಂಗಾರ, ಅರಿಶಿನಕುಂಕುಮ, ಎಡೆ ಹಾಕಿನಂತರ ಬೇವಿನ ಮರಕ್ಕೆವಿವಿಧ ಬಗೆಯಹೂವುಗಳಿಂದ ಸಿಂಗರಿಸಿತೆಂಗಿನ ಕಾಯಿ , ಬಾಳೆಹಣ್ಣುಅರ್ಪಿಸಿ ಅಗರಬತ್ತಿ, ಕರ್ಪೂರ ಹಚ್ಚಿಅಲ್ಲೇ ಬಿಟ್ಟು ಬಂದರು.

Advertisement

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರುಗ್ರಾಮಗಳಲ್ಲಿ ಪ್ಲೇಗ್‌, ಕಾಲರಾದಂಥ ಮಹಾಮಾರಿಕಾಯಿಲೆಗಳು ಬಂದಾಗಊರುಗಳಲ್ಲಿ ಅಜ್ಜಿ ಹಬ್ಬಗಳನ್ನುಆಚರಿಸುತ್ತಿದ್ದವು. ಇದರಿಂದ ಕಾಯಿಲೆ ಆಗ್ರಾಮದಿಂದ ಸಂಪೂರ್ಣವಾಗಿವಾಸಿಯಾಗುತ್ತಿತ್ತು ಎಂಬ ನಂಬಿಕೆ ಇತ್ತು.

ಅದೇರೀತಿ ನಾವು ಕೊರೊನಾ ಕಾಯಿಲೆ ಈ ಗ್ರಾಮಕ್ಕೆಬರದಂತೆ ಇರಲಿ ಎಂಬ ಹಿರಿಯರ ನಂಬಿಕೆಯಿಂದಈ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.ಹಳ್ಳಿಯ ಜನರಲ್ಲಿ ಆಚಾರ-ವಿಚಾರ ರೂಢಿ-ಸಂಪ್ರದಾಯಗಳು ಇನ್ನೂಜೀವಂತವಾಗಿರುವುದರಿಂದ ಗ್ರಾಮದಲ್ಲಿ ಶಾಂತಿನೆಮ್ಮದಿ ಇದೆ. ಕೊರೊನಾ ರೋಗ ತಡೆಯಲುಎಲ್ಲರೂ ಸೇರಿ ಅಜ್ಜಿ ಹಬ್ಬ ಆಚರಿಸುತ್ತಿದ್ದೇವೆ ಎಂದುಗ್ರಾಮದ ರಾಜಣ್ಣ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಚಿಕ್ಕರಾಜುಮಾತನಾಡಿ. ದೇಶದಲ್ಲಿ ಸಂಪ್ರದಾಯಗಳನ್ನುನಂಬಲಾಗುತ್ತದೆ. ಕೊರೊನಾ ವೈರಸ್‌ಹರಡುವುದನ್ನು ತಡೆಯಲು ಸರ್ಕಾರ ನಾನಾಪ್ರಯತ್ನಗಳನ್ನು ಮಾಡುತ್ತಿದೆ. ಇಂಥ ವೇಳೆ ರಾಜ್ಯದಹಲವೆಡೆ ಜನರು ಅಜ್ಜಿ ಹಬ್ಬದ ಮೊರೆ ಹೋಗಿದ್ದಾರೆ.

ಅದೇ ರೀತಿ ನಾವು ಕೂಡ ಅಜ್ಜಿ ಹಬ್ಬ ಮಾಡುತ್ತಿದ್ದೇವೆಎಂದರು. ಹಿಂದಿನ ಕಾಲದಲ್ಲಿ ಪ್ಲೇಗ್‌ ಕಾಲರಾಮುಂತಾದ ಸಾಂಕ್ರಾಮಿಕ ರೋಗಗಳು ಬಂದಾಗಜನರು ಗ್ರಾಮಗಳನ್ನು ಬಿಟ್ಟು ಬೇರೆಡೆಹೋಗುತ್ತಿದ್ದರು. ಅಲ್ಲದೆ ದೇವರ ಮೊರೆ ಹೊಗಿರೋಗ ಹರಡದಂತೆ ನಮ್ಮನ್ನು ಕಾಪಾಡುತಾಯಿಎಂದು ಎಲ್ಲರೂ ಒಟ್ಟಾಗಿ ಬೇಡಿಕೊಳ್ಳುತ್ತಾ ಪೂಜಿಸುತ್ತಿದ್ದರು.

Advertisement

ಮತ್ತೆ ಕೆಲವಡೆ ಅಮ್ಮ ಬಂದರೆಈರೀತಿ ಗ್ರಾಮ ದೇವತೆಯ ಮೊರೆ ಹೋಗಿಪೂಜೆಯನ್ನು ಸಲ್ಲಿಸಿ ಮೊಸರನ ° ಎಡೆಸಲ್ಲಿಸುತ್ತಿದ್ದರು. ಹೀಗಾಗಿ ಸಾಂಕ್ರಾಮಿಕ ರೋಗಹರಡದಿರಲಿ ದೂರ ತೊಲಗಲಿ ಎಂಬಉದ್ದೇಶದಿಂದ ಕೊರೊನಾ ವೈರಸ್‌ ನಮ್ಮಗ್ರಾಮಗಳಿಗೆ ವಕ್ಕರಿಸದೆ ಇರಲಿ ಎಂಬ ಕಾರಣಕ್ಕೆಈ ಅಜ್ಜಿ ಹಬ್ಬವನ್ನು ಆಚರಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next