Advertisement

60 ಗ್ರಾಪಂಗಳ 1000 ಸದಸ್ಯರಿಗೆ ಸನ್ಮಾನ

07:52 PM Mar 02, 2021 | Adarsha |

ಮುದ್ದೇಬಿಹಾಳ: ಮಾ. 2ರಂದು ಮಧ್ಯಾಹ್ನ 3 ಗಂಟೆಗೆ ಮುದ್ದೇಬಿಹಾಳದ ವಿಜಯಪುರ ರಸ್ತೆ ಪಕ್ಕದಲ್ಲಿರುವ ದಾಸೋಹ ನಿಲಯದಲ್ಲಿ ದೇವರಹಿಪ್ಪರಗಿ ಹಾಗೂ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಅಂದಾಜು 60 ಗ್ರಾಪಂಗಳ ನೂತನ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ 1000 ಸದಸ್ಯರನ್ನು ಪಕ್ಷಾತೀತವಾಗಿ ಗೌರವಿಸಿ ಸನ್ಮಾನಿಸುವ ಸಮಾರಂಭ ಏರ್ಪಡಿಸಲಾಗಿದೆ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ತಿಳಿಸಿದರು.

Advertisement

ದಾಸೋಹ ನಿಲಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲೇ ಇದೊಂದು ವಿನೂತನ ಸಮಾರಂಭ ಎನ್ನಿಸಿಕೊಳ್ಳಲಿದೆ. ನನ್ನ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿಯವರ ಸಲಹೆ ಮೇರೆಗೆ ಎಲ್ಲರಿಗೂ ವಿಶೇಷ ಉಡುಗೊರೆ ಮತ್ತು ಅಶೋಕಸ್ತಂಭ, ರಾಷ್ಟ್ರಧ್ವಜ, ಚಿಕ್ಕಗಡಿಯಾರ ಹೊಂದಿರುವ ವಿನೂತನ ಮಾದರಿಯ ಸ್ಮರಣಿಕೆಯನ್ನು ಕೊಡಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮ ಮುಕ್ತಾಯದ ನಂತರ ಎಲ್ಲರಿಗೂ ಔತಣಕೂಟ ಏರ್ಪಡಿಸಲಾಗಿದೆ ಎಂದರು.

ನಾನು ಗ್ರಾಪಂ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಗ್ರಾಪಂ ಚುನಾವಣೆಗಳು ಪಕ್ಷಾತೀತವಾಗಿ ನಡೆದಿವೆ. ನೂತನವಾಗಿ ಆಯ್ಕೆಯಾಗಿರುವ ಎಲ್ಲ ಸದಸ್ಯರನ್ನೂ ನಾನು ಪûಾತೀತವಾಗಿ ಗೌರವಿಸಿಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಪ್ರತಿಯೊಬ್ಬ  ಚುನಾಯಿತ ಸದಸ್ಯರನ್ನೂ ವೈಯುಕ್ತಿಕವಾಗಿಮಾತನಾಡಿಸಿ, ಅವರು ಪ್ರತಿನಿ ಧಿಸುವ ವಾರ್ಡ್‌, ಗ್ರಾಮದ ಕುಂದುಕೊರತೆ ಆಲಿಸಿ, ಅವರಿಗೆ ಮಹಾತ್ಮ ಗಾಂ ಧೀಜಿಯವರ ಗ್ರಾಮಸ್ವರಾಜ್ಯದ ಕನಸನ್ನು ನನಸು ಮಾಡುವುದು ಹೇಗೆ ಎನ್ನುವ ಪರಿಕಲ್ಪನೆ ಮೂಡಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next