ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು 64 ಸ್ನಾತಕೋತ್ತರ ಪದವಿ, 19 ಪಿಎಚ್‌ಡಿ ಪದವಿಪಡೆಯುವ ಮೂಲಕ ವಿಶ್ವಜ್ಞಾನದ ಮೇರುಪರ್ವತ ವಾ ಗಿ ದ್ದಾರೆಎಂದು ಜಿಪಂ ಅಧ್ಯಕ್ಷೆ ಎಂ.ಅಶ್ವಿನಿ ಅಭಿಪ್ರಾಯಪಟ್ಟರು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬುಧವಾರ,ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಭಾರತ ರತ್ನ,ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರ 130ನೇಜನ್ಮದಿನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆದರ್ಶವಾಗಲಿ: ವಿಶ್ವಾದ್ಯಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಸಮತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ತಮ್ಮ ಜೀವಿತಕಾಲದಲ್ಲಿ ದೀನ ದಲಿತರು,ಹಿಂದುಳಿದ ವರ್ಗ, ಮಹಿಳೆಯರ ವಿಮೋಚನೆ ಶ್ರಮಿಸಿದ್ದಾರೆ.ಅಂಬೇಡ್ಕರ್ ಅವರನ್ನು ನಾವೆಲ್ಲರೂ ಆದರ್ಶವಾಗಿಟ್ಟುಕೊಂಡು ಅವರು ತೋರಿದ ಹಾದಿಯಲ್ಲಿ ನಡೆದು ಅವರಿಗೆಗೌರವ ಸಲ್ಲಿಸಬೇಕು ಎಂದು ತಿಳಿಸಿದರು.ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಇಡೀ ವಿಶ್ವವೇ ಮೆಚ್ಚುವ ಸಂವಿಧಾನವನ್ನು ಭಾರ ತಕ್ಕೆಅಂಬೇಡ್ಕರ್ ನೀಡಿದರು.
ಅವರ ಚಿಂತನಾಶೀಲ ಬರಹಗಳನ್ನುಎಲ್ಲರೂ ಓದಬೇಕು ಎಂದರು.ಜಿಪಂ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ದೇಶದಲ್ಲಿ ಎಲ್ಲರ ಸಮಾನತೆ ಕನಸು ಕಂಡಿದ್ದರು. ಆದರೆ,ಅವರ ಮೌಲ್ಯಯುತ ಚಿಂತನೆ ಅರ್ಥಮಾಡಿಕೊಳ್ಳುವಲ್ಲಿನಾವು ಎಡವುತ್ತಿದ್ದೇವೆ. ಇದು ದುರಂತವೇ ಸರಿ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ಮಾತನಾಡಿ,ಭಾರತ ಸರ್ವಜನಾಂಗದ ಶಾಂತಿಯ ತೋಟ. ಬಹುಜನಹಿತಾಯ, ಬಹುಜನ ಸುಖಾಯವೆಂಬುದು ಅಂಬೇಡ್ಕರ್‌ಧ್ಯೇಯವಾಕ್ಯವಾಗಿತ್ತು ಎಂದರು.
ಜಾತಿಗೆ ಸೀಮಿತರಲ್ಲ: ಮುಖ್ಯ ಭಾಷಣ ಮಾಡಿದ ಕೇಂದ್ರಸಾಹಿತ್ಯ ಅಕಾಡೆಮಿ ಸದಸ್ಯ, ಡಾ. ಎಲ್.ಎನ್.ಮುಕುಂದರಾಜ್, ದೇಶದ ಸ್ವಾತಂತ್ರಕ್ಕೆ 75 ವರ್ಷಗಳೇ ತುಂಬುತ್ತಿದ್ದರೂಅಂಬೇಡ್ಕರ್‌ರನ್ನು ಕೇವಲ ಒಂದೇ ಸಮುದಾಯಕ್ಕೆಸೀಮಿತಗೊಳಿಸಲಾಗಿದೆ. ಇದು ಸರಿಯಲ್ಲ ಎಂದರು.ತಿ.ನರಸೀಪುರದ ನಳಂದ ಬುದ್ಧ ವಿಹಾರದ ಭೋದಿರತ್ನಬಂತೇಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ, ಚಿಂತನೆ ಪ್ರಭಾವದಿಂದ ಇಂದುಅವರನ್ನು ಎಲ್ಲರೂ ಸ್ವೀಕರಿಸಿದ್ದಾರೆಂದರು.ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಮೇಶ್, ಸದಸ್ಯ ಎ.ಆರ್.ಬಾಲರಾಜು, ನಗರಸಭೆ ಅಧ್ಯಕ್ಷೆಆಶಾ ನಟರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿಮಾತನಾಡಿದರು.ನಗರಸಭೆ ಉಪಾಧ್ಯಕ್ಷೆ ಸುಧಾ, ಎಸ್ಪಿ ದಿವ್ಯಾ ಸಾರಾಥಾಮಸ್, ಜಿಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾಗೀರಥಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ,ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷಚಂದ್ರಶೇಖರ್ ಇದ್ದರು. ಈ ಮುನ್ನ ಗಣ್ಯರು ಜಿಲ್ಲಾಡಳಿತಭವನದ ಮುಂಭಾಗದ ಅಂಬೇಡ್ಕರ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.