ಚಡಚಣ: ಸಾಲ ಪಡೆದುಕೊಂಡ ಸದಸ್ಯರ ಸಹಕಾರ ಮತ್ತು ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ಕಂತನ್ನು ತುಂಬಿ ಈ ವರ್ಷ 1 ಕೋಟಿ ರೂಪಾಯಿ ನಿಮ್ಮ ಬ್ಯಾಂಕ್ ಲಾಭದತ್ತ ಹೆಜ್ಜೆ ಹಾಕಿದೆ ಎಂದು ಹೊರ್ತಿಯ ರೇವಣಸಿದ್ಧೇಶ್ವರ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಅಣ್ಣಪ್ಪ ಸಾಹುಕಾರ ಖೈನೂರ ಸಭೆಗೆ ತಿಳಿಸಿದರು.
ಹೊರ್ತಿ ಗ್ರಾಮದ ಮಲ್ಲಿಕಾರ್ಜುನ ಮಂಗಲ ಕಾರ್ಯಾಲಯದಲ್ಲಿ ಜರುಗಿದ 27ನೇ ಸೊಸೈಟಿಯ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಸರ್ವ ಸದಸ್ಯರುಗಳಿಗೆ ಪ್ರತಿ ವರ್ಷ 25 ಪ್ರತಿಶತ ಡಿವಿಡೆಂಡ್ ನೀಡುತ್ತಾ ಬಂದಿದೆ. ಸೊಸೈಟಿ ರಾಜ್ಯದಲ್ಲಿ ಪ್ರಥಮ ಸಹಕಾರಿ ಬ್ಯಾಂಕ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇಂಡಿ ತಾಲೂಕಿನಲ್ಲಿ 5 ಶಾಖೆಗಳನ್ನು ಹೊಂದಿ ಪ್ರಗತಿಯಲ್ಲಿದ್ದು, ವ್ಯಾಪಾರಿಗಳಿಗೆ ನೆರವಾಗಿದೆ ಎಂದು ತಿಳಿಸಿದರು.
ಬ್ಯಾಂಕಿನಲ್ಲಿರುವ ಒಟ್ಟು ನಿಧಿಗಳು-10,83,50,240. ಲಾಭ-1.01,05,243. ಸದಸ್ಯರ ಸಂಖ್ಯೆ – 5583, ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ- 66 ಕೋಟಿ ಇರುತ್ತದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ನಿರ್ದೇಶಕರಾದ ಮಲ್ಲಿಕಾರ್ಜುನ ಮೆಂಡೆಗಾರ, ಅಣ್ಣಪ್ಪಗೌಡ ಪಾಟೀಲ, ಗುರಪ್ಪ ರೂಗಿ, ಶ್ರೀಶೈಲ ಶಿವುರ, ರಮೇಶಗೌಡ ಬಿರಾದಾರ, ಬುದ್ದಪ್ಪ ಭೋಸಗಿ, ರಫೀಕ ಸೋಫೆಗಾರ, ಎಸ್.ಎಸ್. ಪೂಜಾರಿ, ಸಂಗಪ್ಪ ಕಡಿಮನಿ, ಸೀತಾರಾಮ ಚವ್ಹಾಣ, ಸಿದ್ದಪ್ಪ ಹಿಟ್ನಳ್ಳಿ, ಪ್ರಕಾಶಚಂದ ಶಹಾ, ಗಂಗಾರಾಮ ರಾಠೊಡ, ಪ್ರಧಾನ ವ್ಯವಸ್ಥಾಪಕರಾದ ಬಸವರಾಜ ತೇಲಿ, ಶರಣಬಸು ಡೋಣಗಿ ಇದ್ದರು. ಬಸವರಾಜ ಜಂಬಗಿ ನಿರೂಪಿಸಿದರು.