Advertisement

ಪ್ರಾಧ್ಯಾಪಕರು ಆಧುನಿಕತೆಗೆ ಒಗ್ಗಿಕೊಳ್ಳಬೇಕಿದೆ

12:46 PM Jun 30, 2017 | Team Udayavani |

ಮೈಸೂರು: ನರ್ಸಿಂಗ್‌ ಕಾಲೇಜುಗಳ ಪ್ರಾಧ್ಯಾಪಕರೂ ಸಹ ಆಧುನಿಕತೆಗೆ ಒಗ್ಗಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜಾnನ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಎಸ್‌.ರವೀಂದ್ರನಾಥ್‌ ಹೇಳಿದರು.

Advertisement

ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜುವತಿಯಿಂದ ಆಯೋಜಿಸಿರುವ 21ನೇ ಶತಮಾನದಲ್ಲಿ ಫ್ರೆಮ್‌ ವರ್ಕ್‌ ಫಾರ್‌ ಎಜುಕೇಟರ್ಸ್‌ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯಾಗುತ್ತಿದೆ.

ಅಂತೆಯೇ ವೈದ್ಯಕೀಯ ಕ್ಷೇತ್ರ ಬೆಳೆಯುವ ಜತಗೆ ಬದಲಾವಣೆಯಾಗುತ್ತಿದ್ದು, ಅದಕ್ಕನುಗುಣವಾಗಿ ಪ್ರಾಧ್ಯಾಪಕರ ಬೋಧನಾ ಕ್ರಮವೂ ಬದಲಾಗಬೇಕಿದೆ ಎಂದರು. ಪ್ರಾಧ್ಯಾಪಕರಲ್ಲಾದ ಬದಲಾವಣೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಯುವ ಪ್ರಮಾಣ ಹೆಚ್ಚಾಗಲಿದ್ದು, ತನ್ಮೂಲಕ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತ ಮವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿ 1500 ಕಾಲೇಜುಗಳು ಬಿಎಸ್ಸಿ ಪದವಿ ಮತ್ತು ನರ್ಸಿಂಗ್‌ ಕೋರ್ಸ್‌ಗಳನ್ನು, 2500 ಕಾಲೇಜುಗಳು ನರ್ಸಿಂಗ್‌ ಕೋರ್ಸ್‌ಗಳನ್ನು ನಡೆಸುತ್ತಿದೆ. ಕರ್ನಾಟಕದಲ್ಲಿ 280 ನರ್ಸಿಂಗ್‌ ಕಾಲೇಜುಗಳು ರಾಜೀವ್‌ ಗಾಂಧಿ ವಿಶ್ವವಿದ್ಯಾನಿಲಯದೊಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿವಿ ನರ್ಸಿಂಗ್‌ ವಿಭಾಗದಲ್ಲಿ ಪಿಎಚ್‌.ಡಿ ಪದವಿ ಪ್ರಾರಂಭಿಸುವ ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದರು.

ಕಾಲೇಜುಗಳಲ್ಲಿ ಮೂಲ ಸೌಕರ್ಯ, ಪ್ರಯೋಗಾಲಯ, ಅತ್ಯಾಧುನಿಕ ಗ್ರಂಥಾಲಯ, ಉತ್ತಮ ಬೋಧಕರು, ಸಮುದಾಯ ಶಿಕ್ಷಕರು ಹಾಗೂ ಹೆಚ್ಚು ಕಲಿಸಬಲ್ಲ ಮತ್ತು ಧನಾತ್ಮಕವಾಗಿ ಪೋ›ತ್ಸಾಹಿಸಬಲ್ಲ ಶಿಕ್ಷಕರು ಮುಖ್ಯವಾಗುತ್ತಾರೆ. ಆದರೆ ಶೇ. 50 ರಿಂದ 60 ರಷ್ಟು ಕಾಲೇಜುಗಳಲ್ಲಿ ಮಾತ್ರ ಮೂಲ ಸೌಕರ್ಯ ಮತ್ತು ಉತ್ತಮ ಶಿಕ್ಷಕರು ಇದ್ದು ಉಳಿದ ವಿದ್ಯಾಸಂಸ್ಥೆಗಳಲ್ಲಿ ಮೂಲಸೌಕರ್ಯ ಇಲ್ಲದ ಸ್ಥಿತಿ ಇದೆ.

Advertisement

ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಉತ್ತಮ ತಂತ್ರಜಾnನಗಳನ್ನು ಬಳಸಿ ವಿದ್ಯಾರ್ಥಿಗಳ ಬುದ್ಧಿಮಟ್ಟ ಅಳೆಯುವುದು, ಬಯೋಮೆಟ್ರಿಕ್‌ ಹಾಜರಾತಿಗಳ ವ್ಯವಸ್ಥೆಗಳು ಬರಬೇಕಿದೆ. ಅಲ್ಲದೆ, ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಲ್ಲಿ ಶಿಕ್ಷಣದ ಮಟ್ಟ ಕುಸಿತ ಕಾಣುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ರೀತಿಯ ಪದ್ಧತಿಗಳು ಬರುತ್ತಲಿದ್ದು ತಂತ್ರಜಾnನಗಳ ಬಳಕೆ ಹೆಚ್ಚುತ್ತ‌ಲಿದೆ. ಆಡಿಯೋ ಮತ್ತು ವಿಡಿಯೋ ಬಳಸಿ ಬೋಧನೆ ಮಾಡಬೇಕಿದೆ ಇಲ್ಲವಾದರೆ ಮಕ್ಕಳನ್ನು ಸೆಳೆಯಲು ಆಗುವುದಿಲ್ಲ. ನರ್ಸಿಂಗ್‌ನಲ್ಲಿ ವೈವಿಧ್ಯತೆಗಳು ಹುಟ್ಟಿಕೊಳ್ಳುತ್ತಿದೆ ಇದರ ಪರಿಣಾಮ ಶುಶ್ರೂಷಕರ ಪ್ರಾಮುಖ್ಯತೆ ಹೆಚ್ಚುತ್ತಿದೆ ಎಂದು ಹೇಳಿದರು.

ಜೆಎಸ್‌ಎಸ್‌ ಆಸ್ಪತ್ರೆ ನಿರ್ದೇಶಕ ಡಾ.ಎಂ.ಡಿ.ರವಿ, ಜೆಎಸ್‌ಎಸ್‌ ವಿಶ್ವವಿದ್ಯಾನಿಲಯದ ಶೈಕ್ಷಣಿಕ ನಿರ್ದೇಶಕ ಡಾ.ಪಿ.ಎ.ಕುಶಾಲಪ್ಪ, ಡೀನ್‌ ವಿವೇಕಾನಂದ, ಜೆಎಸ್‌ಎಸ್‌ ಮಹಾವಿದ್ಯಾಪೀಠ ವೈದ್ಯಕೀಯ ಶಿಕ್ಷಣ ವಿಭಾಗ ನಿರ್ದೇಶಕ ಆರ್‌.ಮಹೇಶ್‌, ನರ್ಸಿಂಗ್‌ ಕಾಲೇಜು ಪ್ರಾಂಶುಪಾಲರಾದ ಶೀಲಾ ವಿಲಿಯಂ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next