ಬೆಂಗಳೂರು: ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ ನಡೆದಿರುವ ಪ್ರಕರಣದಲ್ಲಿ ದರ್ಶನ್ ಅವರ ಮೇಲಿನ ಪ್ರೀತಿ, ಅಭಿಮಾನದಿಂದ ಭಾಗಿಯಾದೇ ಹೊರತು ಇದಕ್ಕೂ ನನಗೂ ಸಂಬಂಧವೇ ಇಲ್ಲ, ಪ್ರಕರಣ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ವಿಷಯ ಏನೆಂದು ಗೊತ್ತಾಗಲಿದೆ, ಈಗಲೇ ಅನುಮಾನ, ಹೇಳಿಕೆಗಳು, ತರಾತುರಿಯ ಮಾತುಗಳು, ಆರೋಪಗಳು ಏಕೆ ಎಂದು ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಕೇಳಿದರು.
ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತಾಡಿದ ಅವರು, ಇಲ್ಲಿ ನನ್ನ ಮರ್ಯಾದೆ ಕಳೆಯುವ ಪ್ರಯತ್ನ ನಡೆಯುತ್ತಿದೆ ಅಷ್ಟೆ. ದರ್ಶನ್ ಮುಗ್ದತೆ ಉಪಯೋಗಿಸಿಕೊಂಡು ಹೀಗೆಲ್ಲ ಮಾಡುತ್ತಿದ್ದಾರೆ. ಅರುಣಾ ಕುಮಾರಿ ಹೇಳಿದ ಮಾತ್ರಕ್ಕೆ ಎಲ್ಲವೂ ನಿಜವಾಗುವುದಿಲ್ಲ. ಆಕೆಗೆ ಯಾರೋ ಹೇಳಿಕೊಡುತ್ತಿದ್ದಾರೆ. ಪೊಲೀಸರ ಶೈಲಿಯಲ್ಲಿ ವಿಚಾರಣೆ ನಡೆದರೆ ಸತ್ಯ ಗೊತ್ತಾಗುತ್ತೆ. ಇಲ್ಲಿ ಫೇಕ್ ದಾಖಲೆ ಸೃಷ್ಟಿ ಮಾಡಿ ಆಟ ಆಡುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅರುಣಾ ಕುಮಾರಿ ನನಗೆ ಏಪ್ರಿಲ್ನಿಂದ ಸಂಪರ್ಕದಲ್ಲಿದ್ದರು. ಸೀಸ್ ಆಗಿರುವ ಪ್ರಾಪರ್ಟಿ ಖರೀದಿ ಸಂಬಂಧ ಸಂಪರ್ಕ. ಬಳಿಕ ದರ್ಶನ್ ವಿಚಾರ ಪ್ರಸ್ತಾಪ ಮಾಡಿದರು ಲೋನ್ಗೆ ಏನಾದರೂ ಶ್ಯೂರಿಟಿ ಹಾಕ್ತಿದ್ದೀರಾ ಎಂದಿದ್ದರು. ಬಳಿಕ ದರ್ಶನ್ ಏನಾದರೂ ಶ್ಯೂರಿಟಿ ಹಾಕ್ತಿದ್ದೀರಾ ಎಂದಿದ್ದರು. ನಾನು ಇಬ್ಬರೂ ಶ್ಯೂರಿಟಿ ಹಾಕಿಲ್ಲ ಎಂದು ಹೇಳಿದ್ದೆ. ದರ್ಶನ್ ಯಾವುದೇ ರಿಯಾಕ್ಟ್ ಮಾಡಬೇಡಿ ಎಂದಿದ್ದರು. ನಾನು ಆಡಿಯೋದಲ್ಲಿ ಯಾವುದೇ ಅಶ್ಲೀಲ ಪದ ಬಳಸಿಲ್ಲ. ದರ್ಶನ್ ಸರ್ ಕೇಳಿ ನಾನು ಆಧಾರ್ ಕಾರ್ಡ್ ಕಳಿಸಿದ್ದೆ. ನಾನಾಗಲಿ, ಆಕೆಯಾಗಲಿ ಅಶ್ಲೀಲವಾಗಿ ಮಾತನಾಡಿಲ್ಲ. ನನ್ನ ಮೇಲಿನ ಆರೋಪ ಬಂದ ಬಳಿಕ ಸಾಬೀತುಪಡಿಸಬೇಕು ಎಂದು ಉಮಾಪತಿ ಹೇಳಿದರು.
ದರ್ಶನ್ ಸರ್ ಅವರು ನನ್ನ ಹೆಸರನ್ನು ಇಲ್ಲಿ ಹೇಳುತ್ತಿಲ್ಲ, ನಾನೇ ಮಾಡಿಸಿದ್ದು ಎಂದು ಆರೋಪ ಮಾಡಿಲ್ಲ, ಅವರು ನನ್ನ ಬಗ್ಗೆ ಪ್ರೀತಿ, ಮರ್ಯಾದೆ ಇಟ್ಟುಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡುವಾಗಲೂ ನನ್ನನ್ನು ಕೇಳಿಯೇ ನೀಡಿದ್ದಾರೆ. ಅವರ ಸುತ್ತಮುತ್ತಲಿರುವವರು, ಅವರ ಸ್ನೇಹಿತರು ನನ್ನ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ.
ನನಗೆ ಚಿತ್ರರಂಗದ ಮೇಲೆ ಗೌರವವಿದೆ, 25 ಕೋಟಿ ರೂಪಾಯಿಗೆ ನಾನು ದರ್ಶನ್ ಸರ್ ಅವರ ಪ್ರೀತಿ, ವಿಶ್ವಾಸವನ್ನು ಕಳೆದುಕೊಳ್ಳುವ ಕೆಲಸ ಏಕೆ ಮಾಡಲಿ, ಅವರ ಸ್ನೇಹಿತ ಹರ್ಷ ಅವರೇ ಇದನ್ನು ಏಕೆ ಮಾಡಿಸಿರಬಾರದು, ನನ್ನನ್ನು ಎಲ್ಲರೂ ಸೇರಿ ಈ ಪ್ರಕರಣದಲ್ಲಿ ಗುರಿಯಾಗಿಸಿರುತ್ತಾರೆ, ಹರ್ಷ ಮೆಲಂಟ್ ಅವರೇ ಮಾಡಿಸಿರಲೂಬಹುದು ಎಂದು ಆರೋಪಿಸಿದ್ದಾರೆ.