Advertisement

Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

08:32 AM May 28, 2024 | Team Udayavani |

ಬೆಂಗಳೂರು: ಕನ್ನಡದ ಖ್ಯಾತ ನಿರ್ಮಾಪಕ, ವಿತರಕ ಸ್ವಾಗತ್‌ ಬಾಬು ನಿಧನರಾಗಿದ್ದಾರೆ.

Advertisement

ನಿರ್ಮಾಪಕರಾಗಿ ಹಾಗೂ ವಿತರಕರಾಗಿ ಕಳೆದ 35 ವರ್ಷಗಳಿಂದ ಚಿತ್ರರಂಗದಲ್ಲಿ ಯಶಸ್ಸಿನ ಹಾದಿಯನ್ನಿಟ್ಟಿದ್ದ ಅವರ ನಿಧನಕ್ಕೆ ಚಂದನವನ ಕಂಬನಿ ಮಿಡಿದಿದೆ. ಸ್ವಾಗತ್‌ ಬಾಬು ಬಂಡವಾಳ ಹಾಗೂ ವಿತರಣೆ ಮಾಡಿದ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿತ್ತು.

ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರಾಗಿದ್ದ ಅವರು, ʼಚಂದ್ರಮುಖಿ ಪ್ರಾಣಸಖಿʼ, ʼಶ್ರೀರಸ್ತು ಶುಭಮಸ್ತುʼ, ʼಸ್ಮೈಲ್ʼ ಮುಂತಾದ ಸಿನಿಮಾಗಳಿಗೆ ಅವರು ಬಂಡವಾಳ ಹಾಕಿದ್ದರು. ಈ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಹಿಟ್‌ ಆಗಿದ್ದವು.

ಸ್ವಾಗತ್‌ ಬಾಬು ಅವರ ನಿಧನಕ್ಕೆ ಚಂದನವನ ಕಂಬನಿ ಮಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next