Advertisement

ಸೀನಿಯರ್  ತಪ್ಪು ಮಾಡಿದವರಿಗೆ ಬುದ್ದಿ ಹೇಳಬೇಕು : ಜಗ್ಗೇಶ್ ಗೆ ಸಂದೇಶ್ ನಾಗರಾಜ್ ಕಿವಿಮಾತು

06:54 PM Feb 24, 2021 | Team Udayavani |

ಬೆಂಗಳೂರು : ನಟ ಜಗ್ಗೇಶ್ ಅವರು ಈ ಪ್ರಕರಣದಲ್ಲಿ ಶಿವರಾಜ್‌ಕುಮಾರ್, ರವಿಚಂದ್ರನ್‌, ರಮೇಶ್‌ ಹೆಸರುಗಳನ್ನು ಯಾಕೆ ತರಬೇಕಿತ್ತು? ಅದರ ಅಗತ್ಯತೆ ಏನಿದೆ ?  ಸೀನಿಯರ್ ಆದವರು ತಪ್ಪು ಮಾಡಿದವರಿಗೆ ಬುದ್ದಿ ಹೇಳಬೇಕು ಎಂದು ನಿರ್ಮಾಪಕ ಸಂದೇಶ ನಾಗರಾಜ್ ಹೇಳಿದ್ದಾರೆ.

Advertisement

ಇಂದು (ಫೆ.24) ಮಾಧ್ಯಮಗೋಷ್ಟಿ ನಡೆಸಿ ಈ ಘಟನೆ ಇಲ್ಲಿಗೆ ಮುಗಿಸಬೇಕೆಂದು ಜಗ್ಗೇಶ್ ಅವರಿಗೆ ಮನವಿ ಮಾಡಿದ ನಾಗರಾಜ್ , ದರ್ಶನ್‌ ಇಷ್ಟೆಲ್ಲ ಅದರೂ ಏನೂ ಮಾತಾಡಿಲ್ಲ. ಇವರು ಕೂಡ ಜಗ್ಗೇಶ್‌ ಥರನೇ ಮಾತಾಡ್ಕೊಂಡು ಹೋದರೆ, ಅದು ದೊಡ್ಡ ಸಮಸ್ಯೆ ಆಗುತ್ತದೆ. ಇಬ್ಬರು ಜಿದ್ದಿಗೆ ಬಿದ್ದರೆ ಪರಿಸ್ಥಿತಿ ಏನಾಗಬಹುದು ಅಂತ ನಮಗೆ ಗೊತ್ತು. ಆದರೆ, ಅದು ಆಗಬಾರದು ಎಂದರು.

‘ಜಗ್ಗೇಶ್ ಬನ್ನೂರಿನ ಅತ್ತಹಳ್ಳಿಯಲ್ಲಿ ನಡೆದ ಘಟನೆಯನ್ನು ಅಲ್ಲಿಗೆ ಕೈ ಬಿಟ್ಟಿದ್ದರೆ ಒಳ್ಳೆಯದಾಗುತ್ತಿತ್ತು. ಆದರೆ, ಆನಂತರವೂ ಅವರು ಹೇಳಿಕೆಗಳನ್ನು ನೀಡುತ್ತಿರುವುದು ಬಹಳ ತಪ್ಪು. ಅವರು ಒಂದು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಒಂದು ಸಲ ಗಲಾಟೆ ಆಯ್ತು. ಅಭಿಮಾನಿಗಳಿಗೆ ಗಲಾಟೆ ಮಾಡಿ ಎಂದು ದರ್ಶನ್ ಹೇಳಿರಲಿಲ್ಲ. ಆದರೂ ಅಭಿಮಾನಿಗಳು ಗಲಾಟೆ ಮಾಡಿದರು. ಜಗ್ಗೇಶ್‌ ಕೂಡ ನಂದು ತಪ್ಪಾಯ್ತು ಎಂದೆಲ್ಲ ಹೇಳಿದ್ರು. ಮೊದಲು, ‘ನಾನು ಹೇಳಿಯೇ ಇಲ್ಲ’ ಅಂದ್ರು. ಆಮೇಲೆ ‘ದರ್ಶನ್‌ಗೆ ಹೇಳಿದ್ದಲ್ಲ’ ಅಂದ್ರು. ಆಮೇಲೆ ‘ಇದು ನನ್ನ ಧ್ವನಿಯೇ ಅಲ್ಲ’ ಎಂದರು. ಹೀಗೆ ಒಂದಾದ ಮೇಲೊಂದು ನಾನಾ ಥರ ಹೇಳಿಕೆ ನೀಡಿದರು’. ಬೇಕಾದರೆ, ಜಗ್ಗೇಶ್ ಅವರಿಗೆ ನಾನು ಫೋನ್ ಮಾಡಿ, ಇಲ್ಲಿಗೆ ನಿಲ್ಲಿಸಿ ಎಂದು ಮಾತಾಡ್ತಿನಿ ಎಂದರು.

ಜಗ್ಗೇಶ್‌ ಮತ್ತು ದರ್ಶನ್ ಅಣ್ಣ-ತಮ್ಮಂದಿರಂತೆ ಇದ್ದುಕೊಂಡು ಹೋಗಬೇಕು. ಘಟನೆ ಬಗ್ಗೆ ದರ್ಶನ್‌ ಸುಮ್ಮನಾಗಿದ್ದಾನೆ. ಆದರೆ, ಜಗ್ಗೇಶ್‌ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇದು ಇಲ್ಲಿಗೆ ಮುಕ್ತಾಯವಾಗಲಿ, ಒಳ್ಳೆಯ ರೀತಿಯಿಂದಲೇ ಕೊನೆಗೊಳ್ಳಲಿ’ ಎಂದು ನಾಗಾರಾಜ್ ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next