Advertisement

ಪರಿಸರ ಸಂರಕ್ಷಣೆಗೆ ಮುಂದಾಗಿ : ವೆಂಕನಗೌಡ

08:06 PM Apr 18, 2021 | Girisha |

ಮುದ್ದೇಬಿಹಾಳ: ಕೊರೊನಾದ ಈ ಸಂಕಷ್ಟದ ದಿನಗಳಲ್ಲಿ ಹೊತ್ತು ಕಳೆಯಲು ಅನವಶ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಗಿಡಗಳ ನೆಡುವಿಕೆ, ನೆಟ್ಟಿರುವ ಗಿಡ ಮರಗಳಿಗೆ ನೀರುಣಿಸುವಿಕೆ ಸೇರಿದಂತೆ ಪರಿಸರ ಸಂರಕ್ಷಣೆಗೆ ಯುವ ಸಮೂಹ ಮುಂದಾಗಬೇಕು ಎಂದು ಸರ್‌ ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪಪೂ ಕಾಲೇಜಿನ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ವೆಂಕನಗೌಡ ಪಾಟೀಲ ಸಲಹೆ ನೀಡಿದರು.

Advertisement

ಮುದ್ದೇಬಿಹಾಳ ಪಟ್ಟಣದ ಹುಡ್ಕೊà ಹತ್ತಿರ ಇರುವ ಶಿರವಾಳ ಲೇಔಟ್‌ನಲ್ಲಿ ಅರಣ್ಯ ಇಲಾಖೆಯವರು ನೆಟ್ಟ ಗಿಡಗಳಿಗೆ ಸ್ವಂತ ಖರ್ಚಿನಲ್ಲಿ ನೀರುಣಿಸುವ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಂಡು ಅವರು ಮಾತನಾಡಿದರು. ಅಮೂಲ್ಯವಾದ ಸಮಯ ವ್ಯರ್ಥಗೊಳಿಸದೆ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು, ಯುವಕರು ಮೊಬೈಲ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಗೀಳು ಅಂಟಿಸಿಕೊಂಡು ಸಮಯ ವ್ಯರ್ಥಗೊಳಿಸುತ್ತಿರುವುದು ಬೇಸರದ ಸಂಗತಿ.

ಇದರ ಬದಲಿಗೆ ಉದ್ಯಾನವನಗಳಿಗೆ ಹೋಗಿ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ನಿತ್ಯವೂ ಬೆಳಗಿನ ಸಮಯದಲ್ಲಿ ಗಿಡಗಳನ್ನು ನೆಡುವ, ರಕ್ಷಿಸುವ ಕೆಲಸ ಮಾಡುತ್ತ, ಇವತ್ತಿನ ಅತ್ಯವಶ್ಯಕ ಜವಾಬ್ದಾರಿಯಾಗಿರುವ ಪರಿಸರ ರಕ್ಷಣೆಯಂಥ ಕೆಲಸದಲ್ಲಿ ತೊಡಗಿರುವುದು ಹೆಮ್ಮೆಯ ಹಾಗೂ ಮಾದರಿ ಕೆಲಸ ಎಂದರು.

ತಮ್ಮ ಜನ್ಮದಿನ ಹಿನ್ನೆಲೆ ಎರಡು ಟ್ಯಾಂಕರ್‌ ಮೂಲಕ ಸುಮಾರು 50 ಗಿಡಗಳಿಗೆ ನೀರುಣಿಸುವ ಕೆಲಸಕ್ಕೆ ಅವರು 1400 ರೂ. ದೇಣಿಗೆ ನೀಡಿ ಹಸಿರು ತೋರಣ ಬಳಗವನ್ನು ಪ್ರೋತ್ಸಾಹಿಸಿದರು. ಸಾಮಾಜಿಕ ವಲಯ ಅರಣ್ಯಾ ಧಿಕಾರಿ ಸಂತೋಷ ಅಜೂರ, ಬಳಗದ ಹಿರಿಯರಾದ ಬಿ.ಎಂ. ಪಲ್ಲೇದ, ಜಿ.ಎಂ. ಹುಲಗಣ್ಣಿ, ಬಳಗದ ಮಾಜಿ ಅಧ್ಯಕ್ಷರಾದ ಕೆ.ಆರ್‌. ಕಾಮಟೆ, ನಾಗಭೂಷಣ ನಾವದಗಿ, ಅಶೋಕ ರೇವಡಿ, ಸಂಚಾಲಕ ಮಹಾಬಲೇಶ್ವರ ಗಡೇದ, ಬಳಗದ ಸದಸ್ಯರಾದ ರವಿ ಗೂಳಿ, ಎಂ.ಎಸ್‌. ಬಾಗೇವಾಡಿ, ಅಮರೇಶ ಗೂಳಿ, ವೀರೇಶ ಹಂಪನಗೌಡ್ರ, ವಿಲಾಸ ದೇಶಪಾಂಡೆ, ಶ್ರೀನಿವಾಸರಾವ್‌ ಕುಲಕರ್ಣಿ, ಲೈನ್ಸ್‌ ಕ್ಲಬ್‌ ಮಾಜಿ ಅಧ್ಯಕ್ಷ ಬಸವರಾಜ ಸಿದರೆಡ್ಡಿ, ಪಿ.ಆರ್‌. ಕೂಡಗಿ, ಈರಣ್ಣ ಶಿರವಾಳ, ಡಾ| ವೀರೇಶ ಇಟಗಿ, ಬಸವರಾಜ ಬಿಜ್ಜೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next