Advertisement

ನಕ್ಸಲ್‌ ಚಟುವಟಿಕೆ ಕಾರ್ಯಾಚರಣೆಗೆ ಕ್ರಮವಹಿಸಿ

10:10 PM Nov 08, 2019 | Team Udayavani |

ಹನೂರು: ಗಡಿಭಾಗದಲ್ಲಿ ನಕ್ಸಲ್‌ ಚಟುವಟಿಕೆಗಳು ಕಂಡುಬಂದಲ್ಲಿ ಕರ್ನಾಟಕ, ತಮಿಳುನಾಡು ಪೊಲೀಸ್‌ ಮತ್ತು ಉಭಯ ರಾಜ್ಯಗಳ ಅರಣ್ಯಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಪ್ರತಿಯೊಬ್ಬರೂ ಕ್ರಮ ವಹಿಸಬೇಕು ಎಂದು ಕೊಳ್ಳೇಗಾಲ ಡಿವೈಎಸ್‌ಪಿ ನವೀನ್‌ ಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಕೊಳ್ಳೇಗಾಲ ಉಪವಿಭಾಗಕ್ಕೆ ಹೊಂದಿಕೊಂಡಿರುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಪೊಲೀಸ್‌ ಅಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳ ಗಡಿ ಅಪರಾಧ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

ರಾಜ್ಯದ ಗಡಿಭಾಗದಲ್ಲಿ ಯಾವುದೇ ಗುರುತು ಪತ್ತೆಯಾಗದ ಮೃತದೇಹಗಳು ಕಂಡುಬಂದಲ್ಲಿ ಗುರುತು ಪತ್ತೆ ಹಚ್ಚುವಲ್ಲಿ, ಕಾಣೆಯಾದವರನ್ನು ಪತ್ತೆಹಚ್ಚುವಲ್ಲಿ ಪ್ರತಿಯೊಂದು ಠಾಣೆಗಳ ಅಧಿಕಾರಿಗಳು ಇತರೆ ಠಾಣೆಗಳ ಅಧಿಕಾರಿಗಳ ಜೊತೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಕಳ್ಳತನ, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಬಗ್ಗೆಯೂ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು.

ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಕಾಣೆಯಾದವರು, ಗುರುತು ಪತ್ತೆಯಾಗದ ಮೃತದೇಹಗಳು, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವವರು ಮತ್ತು ಸಂರಕ್ಷಿತಾ ಅರಣ್ಯ ಪ್ರದೇಶದ ಬೇಟೆಗಾರರು, ಗಂಧದ ಚೋರರಿಗೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ಪೊಲೀಸ್‌ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರು.

ಕೇರಳದ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ನಕ್ಸಲ್‌ ಎನ್‌ಕೌಂಟರ್‌ ಸಂಬಂಧ ಚರ್ಚೆ ನಡೆಸಿ, ಈವರೆಗೂ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಭಾಗದಲ್ಲಿ ನಕ್ಸಲ್‌ ಚಟುವಟಿಕೆಗಳು ಕಂಡುಬಂದಿಲ್ಲ. ಒಂದೊಮ್ಮೆ ಮುಂದಿನ ದಿನಗಳಲ್ಲಿ ಕಂಡುಬಂದಲ್ಲಿ ಎಲ್ಲರೂ ಒಟ್ಟಾಗಿ ಜಂಟಿ ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.

Advertisement

ಇದೇ ವೇಳೆ ಕೊಳ್ಳೇಗಾಲ ಸಮೀಪದ ಹರಳೆ ಗ್ರಾಮದಲ್ಲಿ ಜರುಗಿದ 5 ಕೊಲೆ ಪ್ರಕರಣದ ಅಪರಾಧಿಗೆ ಮರಣ ದಂಡನೆ ವಿಧಿಸಲಾಗಿತ್ತು. ಆದರೆ, ಆತ ಬೆಳಗಾವಿ ಜೈಲಿನಿಂದ ಪರಾರಿಯಾಗಿದ್ದನು. ಬಳಿಕ ತಮಿಳುನಾಡಿನ ಕೊಳತ್ತೂರು ಭಾಗದಲ್ಲಿ ತಲೆಮರೆಸಿಕೊಂಡಿದ್ದನು. ಬಳಿಕ ಕೊಳತ್ತೂರು ವಿಭಾಗದ ಪೊಲೀಸ್‌ ಅಧಿಕಾರಿಯೊಬ್ಬರು ಅಪರಾಧಿಯನ್ನು ಪತ್ತೆಹಚ್ಚಿ ಕರ್ನಾಟಕ ಸರ್ಕಾರದ ವಶಕ್ಕೆ ಒಪಿಸಿದ್ದರು. ಈ ಹಿನ್ನೆಲೆ ಅವರ ಪ್ರತಿನಿಧಿಯನ್ನು ಸಭೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.

ಸಭೆಯಲ್ಲಿ ನಂಜನಗೂಡು ಡಿವೈಎಸ್‌ಪಿ ಮಲ್ಲಿಕ್‌, ಯಳಂದೂರು ಎಸಿಎಫ್ ಬಿ.ಆರ್‌.ರಮೇಶ್‌, ರಾಮಾಪುರ ಸಿಪಿಐ ಮನೋಜ್‌ ಕುಮಾರ್‌, ಮ.ಬೆಟ್ಟ ಸಿಪಿಐ ಮಹೇಶ್‌, ಯಳಂದೂರು ಸಿಪಿಐ ರಾಜೇಶ್‌, ಹನೂರು ಸಬ್‌ಇನ್ಸ್‌ಪೆಕ್ಟರ್‌ ನಾಗೇಶ್‌, ಮ.ಬೆಟ್ಟ ಸಬ್‌ಇನ್ಸ್‌ಪೆಕ್ಟರ್‌ ವೀರಣ್ಣಾರಾಧ್ಯ, ಸಾತನೂರು ಪಿಎಸ್‌ಐ ರಾಜಶೇಖರ್‌ ತಮಿಳುನಾಡಿನ ಅಧಿಕಾರಿಗಳಾದ ಚೆನ್ನರಾಯ ಪೆರುಮಾಳ್‌, ಎಸ್‌.ರವಿ, ಅನºರತು, ಸಲೀಂ, ಆನಂದ್‌ಕುಮಾರ್‌, ಮರ್ಮನ್‌ ವಡಿವೇಲು, ಕಂದಸ್ವಾಮಿ, ರಾಮಸ್ವಾಮಿ, ಅರಣ್ಯಾಧಿಕಾರಿಗಳಾದ ರಾಜೇಶ್‌ಗವಾಲ್‌, ಅರುಣ್‌ ಕುಮಾರ್‌, ರಾಮು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next