Advertisement

ನಗರೀಕರಣದಿಂದ ಸಮಸ್ಯೆ ಹೆಚ್ಚಳ: ಖಂಡ್ರೆ

09:20 AM Aug 30, 2017 | |

ಬೆಂಗಳೂರು: ನಗರೀಕರಣ ಹೆಚ್ಚಾದಂತೆ ಸರ್ಕಾರಕ್ಕೆ ಸಮಸ್ಯೆ ಹೆಚ್ಚಾಗುತ್ತದೆ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದ್ಧಾರೆ.

Advertisement

ಸ್ವಚ್ಛ ಭಾರತ ಮಿಷನ್‌ ಪರಿಣಾಮಕಾರಿ ಅನುಷ್ಠಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಗ್ರಾಮೀಣ ಪ್ರದೇಶದಿಂದ ಜನರು ನಗರಕ್ಕೆ ವಲಸೆ ಬರುತ್ತಿರುವ ಪ್ರಮಾಣ ಹೆಚ್ಚಾಗಿದೆ. ಶೇ.40 ರಿಂದ 50ರಷ್ಟು ಜನರು ನಗರ ಪ್ರದೇಶ ದಲ್ಲಿ ವಾಸವಾಗಿದ್ದಾರೆ. 2026ರ ಹೊತ್ತಿಗೆ ನಗರ ಪ್ರದೇಶದಲ್ಲಿ ಶೇ.55ರಿಂದ 60ರಷ್ಟು ಜನ ವಾಸವಾಗು ತ್ತಾರೆ. ಗ್ರಾಮೀಣ ಜನರ ವಲಸೆ ತಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿ ಸರ್ಕಾರ ಎಲ್ಲರಿಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗದೇ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ಮೂಲಕ ಜನರ ಆರೋಗ್ಯ ಸುಧಾರಣೆಗೂ ಗಮನ ಹರಿಸಬೇಕಾಗಿದೆ. ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಕಲಬುರಗಿ ಹಾಗೂ ಮೈಸೂರು ವಿಭಾಗೀಯ ಮಟ್ಟದ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನ ಪ್ರತಿನಿಧಿಗಳು, ಪೌರಾಡಳಿತ ಇಲಾಖೆ ಕಾರ್ಯದರ್ಶಿ ಅಂಜುಮ್‌ ಫ‌ರ್ವೆಜ್‌, ನಿರ್ದೇಶಕರಾದ ಡಾ. ವಿಶಾಲ್‌ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next