Advertisement

‘ಯುವಕರು ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳಿ’

02:44 PM Nov 10, 2018 | Team Udayavani |

ಕಾಣಿಯೂರು: ಯುವಕರು ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ಸಮಾಜಮುಖಿ ಚಿಂತನೆಯೊಂದಿಗೆ ಯುವಕರು ಒಗ್ಗೂಡಿ ಕಾರ್ಯಪ್ರವೃತ್ತರಾದಲ್ಲಿ ಊರಿನ ಅಭಿವೃದ್ಧಿ ಸಾಧ್ಯ ಎಂದು ನ್ಯಾಯವಾದಿ ಮೋಹನ್‌ ಗೌಡ ಇಡ್ಯಡ್ಕ ಹೇಳಿದರು.

Advertisement

ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್‌ ಸ್ಪೋರ್ಟ್ಸ್  ಕ್ಲಬ್‌ ಇದರ ವತಿಯಿಂದ ಪುಣ್ಚತ್ತಾರಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಪ್ರೋ ವಾಲಿಬಾಲ್‌ ಪಂದ್ಯಾಟ ಮತ್ತು ವಿವಿಧ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಂಬೆ ಬಿ.ಎ. ಐ.ಟಿ.ಐ. ಪ್ರಾಂಶುಪಾಲ ನವೀನ್‌ ಕುಮಾರ್‌ ಕೆ.ಎಸ್‌., ಭ್ರಷ್ಟಾಚಾರ ನಿಗ್ರಹ ದಳದ ಪ್ರಶಾಂತ್‌ ರೈ ಮರುವಂಜ, ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಮಾತನಾಡಿದರು.

ಪುಣ್ಚತ್ತಾರು ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ಸುಮನಾ, ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್‌ ನ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಉತ್ತಮ್‌ ಕುಮಾರ್‌ ಮೇಲಾಂಟ, ಅಧ್ಯಕ್ಷ ಹರೀಶ್‌ ಕಟೀಲ್‌ ಪೈಕ, ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಕೋಶಾಧಿಕಾರಿ ಮಾಧವ ಕಲ್ಪಡ, ಉಪಕಾರ್ಯದರ್ಶಿ ಪ್ರಶಾಂತ್‌ ಪೈಕ ಉಪಸ್ಥಿತರಿದ್ದರು. ದಿನೇಶ್‌ ಮಾಳ ಪ್ರಸ್ತಾವನೆಗೈದರು. ಶಿಕ್ಷಕ ರವಿಶಂಕರ್‌ ಎನ್‌.ಟಿ. ಸ್ವಾಗತಿಸಿ, ಶಿಕ್ಷಕ ಗಣೇಶ್‌ ನಡುವಾಳ್‌ ನಿರೂಪಿಸಿದರು. ದೇವದಾಸ್‌ ಕಾಪಿಕಾಡ್‌ ಅವರ ತುಳು ಹಾಸ್ಯಮಯ ನಾಟಕ ‘ಪುಷ್ಪಕ್ಕನ ಇಮಾನ’ ಪ್ರದರ್ಶನಗೊಂಡಿತು.

ಸಮ್ಮಾನ, ಪುರಸ್ಕಾರ, ನೆರವು
ನಿವೃತ್ತ ಸೈನಿಕರಾದ ರವೀಂದ್ರ ಮರಕ್ಕಡ, ವಿಶ್ವನಾಥ್‌ ಎಚ್‌. ಹೆದ್ದಾರಿ, ಬಳ್ಪ ಶಾಖೆಯ ಉಪವಲಯ ಅರಣ್ಯಾಧಿಕಾರಿ ರವಿಪ್ರಕಾಶ್‌ ಬಳ್ಪ, ಕ್ರೀಡಾ ಸಾಧಕಿ ಕೃತಿಕಾ ಬಿ.ಎಲ್‌. ಬೆದ್ರಂಗಳ, ಪುಣ್ಚತ್ತಾರು ಶ್ರೀಹರಿ ಅರ್ಥ್ ಮೂವರ್ನ ಮಾಲಕ ಕುಸುಮಾಧರ ಕೇಪುಳಗುಡ್ಡೆ ಅವರನ್ನು ಸಮ್ಮಾನಿಸಲಾಯಿತು.

ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಕೃತಿಕಾ ಬಿ.ಎಲ್‌. ಬೆದ್ರಂಗಳ, ಚರಣ್‌ ಕುಮಾರ್‌ ಮುದುವ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದೈಹಿಕವಾಗಿ ನೊಂದಿರುವ ನವಿನ್‌ ಕಳತ್ತಜೆ ಹಾಗೂ ತೀರ್ಥಪ್ರಸಾದ್‌ ದೋಳ್ಪಾಡಿಯವರಿಗೆ ಶ್ರೀಹರಿ ಫ್ರೆಂಡ್ಸ್‌ ಕ್ಲಬ್‌ ವತಿಯಿಂದ ಧನಸಹಾಯ ನೀಡಲಾಯಿತು.

Advertisement

ಉದ್ಘಾಟನ ಸಮಾರಂಭ
ನಿವೃತ್ತ ಕ್ರೀಡಾಧಿಕಾರಿ ಬಿ.ಕೆ. ಮಾಧವ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಪುಣ್ಚತ್ತಾರು ಶ್ರೀಹರಿ ಭಜನ ಮಂಡಳಿ ಗೌರವಾಧ್ಯಕ್ಷ ನಾರಾಯಣ ಗೌಡ ಇಡ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಪೈಕ, ಶ್ರೀ ಕ್ಷೇ.ಧ. ಗ್ರಾ. ಯೋಜನೆಯ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು, ಪುಣ್ಚತ್ತಾರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಮಾಳ, ಪುಣ್ಚತ್ತಾರು ಶ್ರೀಹರಿ ಭಜನ ಮಂಡಳಿಯ ಅಧ್ಯಕ್ಷ ಮೇದಪ್ಪ ಗೌಡ ಮಾನ್ಯಡ್ಕ, ನಾವೂರು ಶ್ರೀ ಸುಬ್ರಹ್ಮಣ್ಯ ಭಜನ ಮಂಡಳಿಯ ಅಧ್ಯಕ್ಷ ಪ್ರವೀಣ್‌ ಕುಮಾರ್‌ ರೈ ಕುಂಡುಳಿ, ಪುಣcತ್ತಾರು ಶ್ರೀಹರಿ ಫ್ರೆಂಡ್ಸ್‌ ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಹರೀಶ್‌ ಕಟೀಲ್‌ ಪೈಕ, ದೀಕ್ಷಿತ್‌ ಕಾರ್ಯ, ದಿನೇಶ್‌ ಮಾಳ, ರವಿಶಂಕರ್‌ ಎನ್‌.ಟಿ. ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next