Advertisement

ಪಾಕ್‌ ಪರ ಘೋಷಣೆ: 3 ವಿದ್ಯಾರ್ಥಿಗಳು ಹಿಂಡಲಗಾಕ್ಕೆ

11:24 PM Feb 18, 2020 | Team Udayavani |

ಬೆಳಗಾವಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಹುಬ್ಬಳ್ಳಿ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳನ್ನು ಮಂಗಳವಾರ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.ಕಾಶ್ಮೀರ ಮೂಲದ ಅಮೀರ್‌ವೊಯಿದ್ದಿನ್‌, ಬಾಸಿತ್‌ ಆಸೀಫ್‌ ಸೋಫಿ ಹಾಗೂ ತಾಲೀಬ್‌ ಮಜೀದ್‌ರನ್ನು ಪೊಲೀಸ್‌ ಕಣ್ಗಾವಲಿನಲ್ಲಿ ಹುಬ್ಬಳ್ಳಿಯಿಂದ ಕರೆತಂದು ಹಿಂಡಲಗಾ ಜೈಲಿನಲ್ಲಿಡಲಾಗಿದೆ.

Advertisement

ಜೈಲಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಮೂವರೂ ವಿದ್ಯಾರ್ಥಿಗಳನ್ನು ಅಂಧೇರಿ ಕೋಣೆಯಲ್ಲಿ ಇರಿಸಲಾಗಿದೆ. ಸಹ ಕೈದಿಗಳಿಂದ ಹಲ್ಲೆ ಆಗುವ ಸಾಧ್ಯತೆ ಇರುವುದರಿಂದ ಪೊಲೀಸರು ಕಣ್ಗಾವಲು ಹಾಕಿದ್ದು, ಈ ಮೂವರನ್ನೂ ಒಂದೇ ಕೋಣೆ ಯಲ್ಲಿ ಇರಿಸಲಾಗಿದೆ.

ಹಿಂಡಲಗಾ ಜೈಲಿಗೆ ಪಾಲಕರು ಹಾಗೂ ಸ್ನೇಹಿತರು ಭೇಟಿ ಕೊಟ್ಟಿದ್ದಾರೆಂಬ ಮಾಹಿತಿ ಇದ್ದು, ನ್ಯಾಯಾಂಗ ವಶದಲ್ಲಿರುವ ಈ ಮೂವರು ವಿದ್ಯಾರ್ಥಿಗಳು ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಸದ್ಯದ ಮಟ್ಟಿಗೆ ಇವರನ್ನು ಭೇಟಿ ಮಾಡಿಸಲು ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next