ಪುಣೆ : ಅಂಕಪಟ್ಟಿಯಲ್ಲಿ ತೀರಾ ಕೆಳಗಿರುವ ಪುನೇರಿ ಪಲ್ಟಾನ್ ಪ್ರೊ ಕಬಡ್ಡಿ 7ನೇ ಆವೃತ್ತಿಯ ತವರಿನ ಚರಣವನ್ನು ಯಶಸ್ವಿಯಾಗಿ ಆರಂಭಿಸಿದೆ.
ಶನಿವಾರದ ಮೊದಲ ಪಂದ್ಯದಲ್ಲಿ 43-33 ಅಂಕಗಳ ಅಂತರದಿಂದ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು ಮಣಿಸಿದೆ.
ನಿತಿನ್ ತೋಮರ್ (11 ರೈಡಿಂಗ್ ಅಂಕ), ಮಂಜೀತ್ (7 ಆಲ್‌ರೌಂಡರ್ ಅಂಕ) ಹಾಗೂ ಸುರ್ಜಿತ್ ಸಿಂಗ್ (5 ಟ್ಯಾಕಲ್ ಅಂಕ) ಪುಣೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಮೊದಲ ಅವಧಿಯಲ್ಲಿ ಪುಣೆ 24-10 ಮುನ್ನಡೆಯಲ್ಲಿತ್ತು. ಆದರೆ 2ನೇ ಅವಧಿಯಲ್ಲಿ ಗುಜರಾತ್ ಬಿರುಸಿನ ಆಟ ಪ್ರದರ್ಶಿಸಿದರೂ ಪುಣೆಯ ಬೆನ್ನು ಹಿಡಿಯಲಾಗಲಿಲ್ಲ. ಸಚಿನ್ (10 ರೈಡಿಂಗ್ ಅಂಕ) ಹೊರತುಪಡಿಸಿ ಉಳಿದದೆಲ್ಲ ಆಟಗಾರರು ವೈಫಲ್ಯ ಅನುಭವಿಸಿದರು.