Advertisement

ಪ್ರೊ ಕಬಡ್ಡಿ: ಗುಜರಾತ್‌ ಫೈನಲ್‌ಗೆ

12:30 AM Jan 04, 2019 | Team Udayavani |

ಮುಂಬೈ: ಪ್ರೊ ಕಬಡ್ಡಿ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಯುಪಿ ಯೋಧಾ ತಂಡವನ್ನು  38 - 31 ಅಂತರದಿಂದ ಸೋಲಿಸಿದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಫೈನಲ್‌ ಹಂತಕ್ಕೆ ಪ್ರವೇಶಿಸಿದೆ. ಜ.5ಕ್ಕೆ ಮುಂಬೈನಲ್ಲಿ ನಡೆಯಲಿರುವ ಪ್ರಶಸ್ತಿ ಹಣಾಹಣಿಯಲ್ಲಿ ಗುಜರಾತ್‌ ಬಲಿಷ್ಠ ಬೆಂಗಳೂರು ಬುಲ್ಸ್‌ ತಂಡವನ್ನು ಎದುರಿಸಲಿದೆ.

Advertisement

ಗುಜರಾತ್‌ಗೆ ಅರ್ಹ ಗೆಲುವು: ಗುರುವಾರ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ “ಎ’ ಗುಂಪಿನ ಅಗ್ರಸ್ಥಾನಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಸಾಮರ್ಥ್ಯಕ್ಕೆ ಆಟ ಪ್ರದರ್ಶಿಸಿ ಮೆರೆಯಿತು. ಗುಜರಾತ್‌ ಪರ ಸಚಿನ್‌ (10 ಅಂಕ)  ರೈಡಿಂಗ್‌ನಿಂದ ಮಿಂಚಿದರು. ತಂಡದ ಪ್ರಮುಖ ರೈಡರ್‌ ಕೆ.ಪ್ರಪಂಚನ್‌ (5 ಅಂಕ) ಅಷ್ಟೊಂದು ಯಶಸ್ಸು ಕಾಣಲಿಲ್ಲ. ಆದರೆ ಹೆಚ್ಚುವರಿ ಆಟಗಾರ ರೋಹಿತ್‌ ಗುಲಿಯಾ (5 ಅಂಕ) ಗಮನಾರ್ಹ ರೈಡಿಂಗ್‌ ಪ್ರದರ್ಶಿಸಿ ಅಚ್ಚರಿ ಮೂಡಿಸಿದರು. ಸುನೀಲ್‌ ಕುಮಾರ್‌ (3 ಅಂಕ) ಹಾಗೂ ಹಡಿ ಒಶ್‌ಟೊರಾಕ್‌ (3 ಅಂಕ) ಅಮೋಘ ಟ್ಯಾಕಲ್‌ ನಡೆಸಿ ತಂಡವನ್ನು ಒಟ್ಟು ಅಂಕಗಳಿಕೆಯನ್ನು ಹೆಚ್ಚು ಮಾಡಿದರು. ಕೊನೆ ಹಂತದಲ್ಲಿ ಯುಪಿ ಯೋಧಾ ಪ್ರಬಲ ಪೈಪೋಟಿ ನೀಡಿದರೂ ಗುಜರಾತ್‌ ಅರ್ಹ ಜಯ ಸಾಧಿಸಿತು. ಗುಜರಾತ್‌ ಲೀಗ್‌ ಹಂತದಿಂದಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು ಎನ್ನುವುದು ಗಮನಾರ್ಹ ಸಂಗತಿ. ಈ ತಂಡವು “ಬಿ’ ಗುಂಪಿನ ಅಗ್ರ ಸ್ಥಾನಿ ಬೆಂಗಳೂರು ಬುಲ್ಸ್‌ ಅನ್ನು ಎದುರಿಸಲು ಸಜ್ಜಾಗಿದೆ.

ಯುಪಿಗೆ ಕೈ ಹಿಡಿಯದ ಅದೃಷ್ಟ: ಯುಪಿ ಯೋಧಾ ಪ್ಲೇ ಆಫ್ಗೇರಿದ್ದು ಅದೃಷ್ಟದಿಂದ. “ಬಿ’ ವಲಯದಿಂದ ಅಗ್ರಸ್ಥಾನ ಹೊರತುಪಡಿಸಿದಂತೆ ಉಳಿದ ಸ್ಥಾನಗಳಿಗೆ 4 ತಂಡಗಳ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ಕೊನೆ ತನಕವೂ ಯಾವ ತಂಡ ಬಿ ಗುಂಪಿನಿಂದ ಮೂರನೇ ಸ್ಥಾನಿಯಾಗಿ ಪ್ಲೇಆಫ್ಗೇರಲಿದೆ ಎನ್ನುವುದು ನಿರ್ಧಾರವಾಗಿರಲಿಲ್ಲ. ಆದರೆ ಪವಾಡ ಎನ್ನುವಂತೆ ಅಂತಿಮ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ ತಂಡವನ್ನು ಸೋಲಿಸಿತು. ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವನ್ನು ಕೂಟದಿಂದಲೇ ಹೊರದಬ್ಬಿತ್ತು. ಹೀಗಾಗಿ ಕ್ವಾಲಿಫೈಯರ್‌ ಎರಡರಲ್ಲೂ ಯುಪಿ ಪವಾಡ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಎಲ್ಲ ಪ್ರಯತ್ನಗಳು ಕೊನೆಯಲ್ಲಿ ವಿಫ‌ಲವಾಗುವ ಮೂಲಕ ಯುಪಿ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿತು. ಯುಪಿ ಪರ ರೈಡರ್‌ಗಳಾದ ಶ್ರೀಕಾಂತ್‌ ಜಾಧವ್‌ (7 ಅಂಕ) ಹಾಗೂ ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ (5 ಅಂಕ) ದೊಡ್ಡ ಆಟ ಪ್ರದರ್ಶಿಸುವಲ್ಲಿ ವಿಫ‌ಲರಾದರು. ಸಚಿನ್‌ ಕುಮಾರ್‌ (5 ಅಂಕ) ಆಲ್‌ರೌಂಡರ್‌ ಆಟದ ಮೂಲಕ ಸ್ವಲ್ಪ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next